Skip to main content

Posts

Showing posts with the label Shishinala Shareef and his parents tomb

Blog number 1069. ಶಿಶುನಾಳ ಷರೀಪರ 5 ನೇ ವಂಶಸ್ಥರು ಅಲ್ಲಿದ್ದಾರೆ, ಶಿಶುನಾಳರು ತಮ್ಮ ತಂದೆ ತಾಯಿ ಸಮಾದಿ ಮೇಲೆ ನಿತ್ಯ ಮಲ್ಲಿಗೆ ಹೂವು ಬೀಳಲಿ ಎಂದು ಹಾಕಿದ ಮಲ್ಲಿಗೆ ಬಳ್ಳಿಯ ಹೂವು ಈಗ ಶಿಶುನಾಳರಿಗೂ ಅರ್ಪಣೆ ಆಗುತ್ತಿದೆ, ಸಮಾದಿಗಳ ಮೇಲೆ ಶಿಶುನಾಳ ಷರೀಪರ ಮತ್ತು ಗುರುಗೋವಿಂದ ಭಟ್ಟರ ಅಮೃತ ಶಿಲಾ ವಿಗ್ರಹ ಮತ್ತು ಮಧ್ಯದಲ್ಲಿ ಕೃಷ್ಣ ಶಿಲೆಯ ಬಸವಣ್ಣರ ಮೂರ್ತಿ ಸ್ಥಾಪಿಸಲಾಗಿದೆ.

# ಶಿಶುನಾಳ ಷರೀಪರ 5ನೇ ತಲೆಮಾರು#   2019 - ನವೆಂಬರ್ - 11ನೇ ತಾರೀಖು ಮದುವೆ ಮಾಡಿಕೊಟ್ಟ ಮಗಳು ಅಳಿಯನನ್ನ ಹುಬ್ಬಳ್ಳಿಯಿ೦ದ ಕರೆ ತರುವಾಗ ಶಿಶುನಾಳದ ಬೇಟಿ ಕಾಯ೯ಕ್ರಮ ನಿಗದಿ ಮಾಡಿದ್ದೆ, ಅಲ್ಲಿಗೆ ತಲುಪುವಾಗ ರಾತ್ರಿ 8 ಆಗಿತ್ತು ಷರೀಪರ ಸಮಾದಿ ಸುತ್ತ ಅಲ್ಲಲ್ಲಿ ಅಲ್ಲಿನ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳು ತಮ್ಮ ಓದು ಬರಹದಲ್ಲಿ ನಿರತರಾಗಿದ್ದರು.   ಅಲ್ಲಿನ ಪದ್ದತಿ ಪ್ರಕಾರ ಸಕ್ಕರೆ ಸಮಪಿ೯ಸಿದೆ ಅಲ್ಲಿದ್ದ ಒವ೯ರು ಪ್ರಾಥ೯ನೆ ಮಾಡಿದರು, ಬೇರಾರು ಇರಲಿಲ್ಲವಾದ್ದರಿಂದ ಅವರನ್ನ ಮಾತಿಗೆ ಎಳೆದೆ, ಷರೀಪರ ವಂಶದವರು ಇದ್ದಾರ ಅಂದಾಗ "ನಾನು ಷರೀಪರ 5ನೇ ತಲೇ ಮಾರು" ಅಂದಾಗ ನಮ್ಮ ಮುಂದಿನ ಮಾತುಕತೆ ವಿಡಿಯೋದಲ್ಲಿದೆ.   ಷರೀಪರು ತಮ್ಮ ತಂದೆ ತಾಯಿ ಸಮಾದಿ ಅಕ್ಕಪಕ್ಕ ನಿಮಿ೯ಸಿ ಎರೆಡು ಬೇವಿನಮರ ನಡುತ್ತಾರೆ ಒಂದು ಮಲ್ಲಿಗೆ ಬಳ್ಳಿ ನಡುತ್ತಾರೆ ಪ್ರತಿ ದಿನ ಒಂದು ಮಲ್ಲಿಗೆ ಹೂವಾದರೂ ಅವರ ತಂದೆ ತಾಯಿ ಸಮಾದಿ ಮೇಲೆ ಬೀಳಬೇಕೆಂಬ ಅವರ ಅಭಿಲಾಷೆ ಈಡೇರಿದೆ, ಎರೆಡು ಬೇವಿನಮರ ಈಗ ಸೇರಿ ಒಂದಾಗಿದೆ ಅವರ ತಂದೆ ತಾಯಿ ಸಮಾದಿ ಪಕ್ಕದಲ್ಲೇ ಷರೀಫರ ಸಮಾದಿಯೂ ಆಗಿ ಒಂದೇ ಸ್ಮಾರಕವಾಗಿದೆ.   ಇವರು ಮೂವರ ಸಮಾದಿ ಮೇಲೆ ಷರೀಪರ , ಗುರು ಗೋವೀ೦ದ ಭಟ್ಟರ ವಿಗ್ರಹ ಮಧ್ಯ ಬಸವೇಶ್ವರ ಪ್ರತಿಮೆ ಪ್ರತಿಷ್ಟಾಪಿಸಿದ್ದಾರೆ.   ಷರೀಪರ 22 ಎಕರೆ ಜಮೀನಿನಲ್ಲಿ 2 ಎಕರೆ ಸಮಾದಿಗಾಗಿ ಸ್ಮಾರಕಕ್ಕಾಗಿ ಉಪ...