Skip to main content

Posts

Showing posts with the label Scabies mites causes skin deseas with in ten minutes contact of skin

Blog number 999. ಕಜ್ಜಿಗೆ ಕಾರಣವಾದ ಸ್ಕೇಬೀಸ್ ಕ್ರಿಮಿ ಈಗ ನಿಯಂತ್ರಣದಲ್ಲಿದೆ 1970 ಕ್ಕೆ ಹಿಂದೆ ಇದರ ಸಮಸ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಬೀರವಾಗಿ ಪರಿಗಣಿಸಿತ್ತು.

#ಕಜ್ಜಿ_ಎಂಬ_Scabies_ಕ್ರಿಮಿ. #ಇದು_1970ಕ್ಕಿಂತ_ಮುಂಚೆ_ವಿಶ್ವದಾದ್ಯಂತ_ಮಕ್ಕಳನ್ನು_ಹೈರಾಣು_ಮಾಡಿತ್ತು #ವಿಶ್ವ_ಆರೋಗ್ಯಸಂಸ್ಥೆ_ಪ್ರಕಾರ_ವಿಶ್ವದಾದ್ಯಂತ_ಇನ್ನೂರು_ದಶಲಕ್ಷ_ಜನ_ಕಜ್ಜಿ_ಪೀಡಿತರು. #ಕ್ರಿಸ್ತ_ಪೂರ್ವ_494ರಲ್ಲಿಯೇ_ಕಜ್ಜಿ_ಅವತರಿಸಿತ್ತು. #ಉಷ್ಣಪ್ರದೇಶದ_ಭೂಮಧ್ಯ_ರೇಖೆಯಲ್ಲಿ_ಬರುವ_ದೇಶದಲ್ಲಿ_ಕಜ್ಜಿ_ಜಾಸ್ತಿ #ಬರಗಾಲ_ಯುದ್ಧ_ಸಮಯ_ಜೈಲು_ಶಾಲೆಗಳು_ಕಜ್ಜಿ_ಕ್ರಿಮಿ_ಹರಡುವ_ಸಮಯ_ಸ್ಥಳ. #ಕಜ್ಜಿಗೆ_ನಮ್ಮೂರ_ಹರಿಜನ_ಗುತ್ಯಜ್ಜಿ_ಔಷದಿ_ಪರಿಣಾಮಕಾರಿ_ಆಗಿತ್ತು.   1970 ರ ದಶಕದ ನಂತರ ಹುಟ್ಟಿದ ಮಕ್ಕಳಲ್ಲಿ ಕಜ್ಜಿ ಕಷ್ಟ ಅಷ್ಟಾಗಿ ಗೊತ್ತಿಲ್ಲ, ಅದಕ್ಕಿಂತ ಹಿಂದಿನವರೆಲ್ಲ ಕಜ್ಜಿಯಿಂದ ನರಳಿದವರೆ.   ಸ್ಕೇಬೀಸ್ ಎಂಬ ಅರ್ಧ ಮಿಲಿ ಮೀಟರ್ ಗಿಂತ ಸಣ್ಣ ಗಾತ್ರದ ಕ್ರಿಮಿ ಒಬ್ಬರಿಂದ ಇನ್ನೊಬ್ಬರಿಗೆ ಕೇವಲ 10 ನಿಮಿಷದ ಸಂಪರ್ಕದಲ್ಲಿ ಹರಡುವ ಮತ್ತು ಚರ್ಮದ ಮೇಲ್ಪದರಲ್ಲಿ ಬಿಲದಂತೆ ಕೊರೆದು ಕೊಂಡು, ಒಳ ಸೇರುವ ಕ್ರಿಮಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕೆರೆತ, ತುರಿಕೆ ಮತ್ತು ಕೀವಿನ ಕಜ್ಜಿ ಉಂಟು ಮಾಡುತ್ತದೆ.   ಸ್ಕೇಬೀಸ್ ಮತ್ತು ಅದರ ಮೊಟ್ಟೆ ಬರಿಗಣ್ಣಿಗೆ ಕಾಣಿಸುವುದಿಲ್ಲ, ಮೈಕ್ರೋಸ್ಕೋಪ್ ನಲ್ಲಿ ಮಾತ್ರ ನೋಡಬಹುದು.  ಇದು ಪರಾವಲಂಬಿ ಕ್ರಿಮಿ, ರೋಗ ನಿರೋದಕ ಶಕ್ತಿ ಇಲ್ಲದವರಲ್ಲಿ ಬೇಗ ಹರಡುತ್ತದೆ, ಎರಡರಿಂದ ಮೂರು ದಿನ ಜೀವಂತ ಆಗಿರುವ ಈ ಕ್ರೀಮಿ ಕೇವಲ 10 ನಿಮಿಷದ...