Skip to main content

Posts

Showing posts with the label Corana lockdown Dairy 2020.

Blog number 1601. ಕೊರಾನಾ ಲಾಕ್ ಡೌನ್ ಡೈರಿ - 2020 ಲೆಟರ್ ನಂಬರ್ 47 (16 - ಜೂನ್-2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 47.    ದಿನಾ೦ಕ: 16-ಜೂನ್ -2020. #ಕೊರಾನಾ_ಲಾಕ್_ಡೌನ್_ಸಂದಭ೯ದಲ್ಲೇ_ರಕ್ತದಾನದ_ಶತಕ_ಬಾರಿಸಿದ_ದರಣೇoದ್ರದಿನಕರ್  ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.     ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.    ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್‌ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.   ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.   ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ. ...

Blog number 1575. ಕೊರಾನಾ ಲಾಕ್ ಡೌನ್ ಡೈರಿ - 2020. ಲೆಟರ್ ನಂಬರ್ 44. (4 - ಜೂನ್ -2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 44.    ದಿನಾ೦ಕ: 4-ಜೂನ್ -2020. #ಶಾಲೆ_ಮೊದಲಾ? #ಕೊರಾನಾ_ನಿಮೂ೯ಲನೆ_ಮೊದಲಾ? *10 ವಷ೯ದ ಮಕ್ಕಳನ್ನ ಮನೆಯಿಂದ ಹೊರಬಿಡಬೇಡಿ ಅಂತ ನಮ್ಮ ಸಕಾ೯ರಗಳು ಸೋ೦ಕು ಸಾವಿರದ ಒಳಗೆ ಇದ್ದಾಗ ಹೇಳಿದ್ದನ್ನ ಈಗ ಕೊರಾನ ಸೋಂಕು 2 ಲಕ್ಷ ದಾಟಿದ ಮೇಲೆ ಅದರ ಮೇಲೆ ನಿಯಂತ್ರಣವೇ ಅಸಾಧ್ಯ ಅಂದಾದ ಮೇಲೆ ಈ ಮಕ್ಕಳನ್ನ ಶಾಲೆ ತೆರೆದು ಕಳಿಸುವ ಅಪಾಯಕಾರಿ ಕಾಯ೯ಕ್ಕೆ ಮು೦ದಾಗಿದೆ* *ಪ್ರಾನ್ಸ್‌ ದೇಶದಲ್ಲಿ ಕೊರಾನ ಜೊತೆಯಲ್ಲಿ ಪ್ರಾಥಮಿಕ ಶಾಲೆ ಪ್ರಾರ೦ಬಿಸಿ 70 ಮಕ್ಕಳು ಸೋ೦ಕಿತರಾಗಿದ್ದಾರೆ*    ಸಜ್ಜನ ಮತ್ತು ವಿವೇಕವುಳ್ಳಾ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂದಿಗ್ದದಲ್ಲಿರುವುದು ಸತ್ಯ ಯಾಕೆಂದರೆ ಪ್ರಾಥಮಿಕ ಶಾಲೆ ತಕ್ಷಣ ಶುರುವಾಗಲಿ ಎಂಬ ಖಾಸಾಗಿ ಶಿಕ್ಷಣ ಸಂಸ್ಥೆಯ ಒತ್ತಡ ಒ0ದು ಕಡೆ ಮತ್ತು ಮಾರಣಾಂತಿಕ ಕೊರಾನಾ ಒ0ದು ಕಡೆ ಹಾಗಾಗಿ.    ಪ್ರಾಥಮಿಕ ಶಾಲೆ ಪ್ರಾರಂಬಿಸದಿದ್ದರೆ ಮಕ್ಕಳು ಹಾಳಾಗುತ್ತಾರೆ, ಕೆಟ್ಟ ಚಟ ಕಲಿಯುತ್ತಾರೆ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಒ0ದೆರೆಡು ದಿನದಲ್ಲೇ ವಾಪಾಸು ಪಡೆದಿದ್ದಾರೆ.   ಶಿಕ್ಷಣ ಸಚಿವರು ಇವತ್ತು ಒ0ದು ಪೋಸ್ಟ್ ಹಾಕಿದ್ದಾರೆ ಅದರಲ್ಲಿ ಒಂದನೆ ತರಗತಿ ಮಗು ಕೊರಾನ ಹೋದ ನಂತರವೇ ಶಾಲೆ ಪ್ರಾರಂಬಿಸಿ ಎಂದ ಅಥ೯ವತ್ತಾದ  ಸಲಹೆ.   10 ವಷ೯ದ ಮಕ್ಕಳನ್ನ ಮನೆಯಿಂದ ಹೊರಬಿಡ...