Blog number 2023. ಶಿವಮೊಗ್ಗ ಜಿಲ್ಲೆಯ ಇತಿಹಾಸದ ಪುಟಗಳನ್ನು ಹುಡುಕಿ ತೆಗೆದು ರಾಜ್ಯದ ಜನರಿಗೆ ದೃಶ್ಯ ಮಾಧ್ಯಮದ ಮೂಲಕ ಡಿಜಿಟಲ್ ಮಾಧ್ಯಮ ಸಂಸ್ಥೆ ಅಲ್ಲಮ ಪ್ರಭು- ಅಕ್ಕಮಹಾದೇವಿ-ಶಾಂತಲಾ - ಕನ್ನಡದ ಮೊದಲ ಶಾಸನಗಳ ಮಾಹಿತಿ ಇತಿಹಾಸಕಾರರಾದ ರಮೇಶ್ ಹಿರೇಜಂಬೂರ್ ಮತ್ತು ನವೀನರಿಂದ ತಿಳಿಸುತ್ತಿದೆ.
#ಅಲ್ಲಮಪ್ರಭು_ಅಕ್ಕಮಹಾದೇವಿ_ಶಾಂತಲಾ_ಬಗ್ಗೆ #ನೂರು_ಪುಸ್ತಕ_ಓದಿ_ತಿಳಿಯುವ_ಮಾಹಿತಿ #ಈ_ಒಂದೊಂದು_ದೃಶ್ಯ_ಮಾಧ್ಯಮದ_ಕಂತುಗಳಿಂದ_ತಿಳಿಯಲು_ಸಾಧ್ಯವಿದೆ . #ಡಿಜಿಟಲ್_ಮಾಧ್ಯಮದಲ್ಲಿ_ಶಿವಮೊಗ_ಜಿಲ್ಲೆ_ಇತಿಹಾಸ. ನಾನು ನರಹಂತಕ ವೀರಪ್ಪನ್ ಸರಣಿ ಬಹುಶಃ 300 ಕ್ಕೂ ಹೆಚ್ಚು ಆ ಡಿಜಿಟಲ್ ಮಾಧ್ಯಮವನ್ನು ನಿರಂತರ ಹಿಂಬಾಲಿಸುವಂತಾಗಿತ್ತು.... ನಂತರ ಸಂಗೊಳ್ಳಿ ರಾಯಣ್ಣ,ಶಿಶುನಾಳ ಷರೀಪರು, ಕನಕದಾಸರು, ಸರ್ವಜ್ಞ ಹೀಗೆ ಸಾಲು ಸಾಲು ಇತಿಹಾಸದ ಪುಟಗಳನ್ನು ಸ್ಥಳಿಯರಿಂದ ಪ್ರಶ್ನೋತ್ತರದ ಮೂಲಕ ಜಗತ್ತಿಗೆ ತೆಗೆದಿರಿಸುವ ಡಿಜಿಟಲ್ ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳ ಕೆಲಸ ಶ್ಲಾಘನೀಯವಾಗಿದೆ. ಆದುನೀಕರಣದ ವೇಗದಲ್ಲಿ ಈಗಿನ ಹಳ್ಳಿಗಳು ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಇತಿಹಾಸದ ಕಥೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ, ಇತಿಹಾಸದ ಪುಸ್ತಕಗಳ ಓದುವವರೂ ಇಲ್ಲ. ಒಂದು ಊರಿನ ದೇವಾಲಯ - ಕೋಟೆ - ಕೊಳದ ಎದರು ನಿಂತು ದೃಶ್ಯ ಮಾಧ್ಯಮದಲ್ಲಿ ಅದರ ವಿಶೇಷ ವಿವರಿಸುತ್ತಾ ಅದಕ್ಕೆ ಸಂಬಂದ ಪಟ್ಟ ಶಿಲಾಶಾಸನಗಳ ಉಲ್ಲೇಖಿಸುತ್ತಾ ಸ್ಥಳಿಯ ಜನಪದದಲ್ಲಿ ಉಳಿದು ಬಂದಿರುವ ಇದಕ್ಕೆ ಪೂರಕವಾದ ಮಾಹಿತಿ ಹಂಚುತ್ತಾ ಆಗಿನ ಆ ಸ್ಮಾರಕ ನಿರ್ಮಾಣ ಮಾಡಿದ ರಾಜ -ಸಾಮಂತ- ಸೈನ್ಯಾಧಿಕಾರಿ- ಮಾಂಡಳಿಕ-ದಾನಿಗಳ ವಿವರಿಸುತ್ತಾ ಹೋಗುವಾಗ ನಮ್ಮ ಊರಿನ, ಜಿಲ್ಲೆಯ ಹಾಗೂ ರಾಜ್ಯದ ಇತಿಹಾಸ ಕೇಳುವವರ ಮನದಲ್ಲಿ ಅಚ್...