Skip to main content

Posts

Showing posts with the label volcano mud soap are now famous soaps

ಮೊದಲ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ಬಂದು 88 ವರ್ಷ ಆಯಿತು. ಅದಕ್ಕೂ ಮೊದಲು ಸವಳು ಗುಡ್ಡದ ಮಣ್ಣು ಸ್ನಾನಕ್ಕೆ ಬಳಸುತ್ತಿದ್ದರು.

#ಸೋಪಿನ_ಪುರಾಣ #ಶಿವಮೊಗ್ಗ_ಸಮೀಪದ_ನ್ಯಾಮತಿ_ತೀರ್ಥರಾಮೇಶ್ವರ_ಗುಡ್ಡದ_ಸವಳು_ಶತಮಾನಗಳ_ಕಾಲ_ಈ_ಭಾಗದ_ಸೋಪು_ಆಗಿತ್ತು. #ಸಾವಯವ_ಮಣ್ಣಿನ_ಸೋಪು #197Oರ_ನಂತರ_ಹುಟ್ಟಿದವರಿಗೆ_ಗೊತ್ತೇ_ಇಲ್ಲದ_ಸೋಪಿನ_ಪ್ರಪಂಚ #ಮೊದಲ_ಸಿಂಥೆಟಿಕ್_ಸೋಪು_1933ರಲ್ಲಿ_ಪ್ರಾರ೦ಭ. #ಶಿಲಾಯುಗದಲ್ಲೂ_ಜನ_ಸ್ನಾನಕ್ಕೆ_ಬಳಸುತ್ತಿದ್ದ_ಕ್ಷಾರಯುಕ್ತ_ಮಣ್ಣು.     ಈಗೆಲ್ಲ ಅಮೆಜಾನ್ ನಿಂದ ಡೆಡ್ ಸೀ (ಮೃತ ಸಮುದ್ರದ) ಮಣ್ಣಿನ ಸೋಪು ನಮ್ಮ ಹಳ್ಳಿಗಳಲ್ಲೂ ಖರೀದಿಸುತ್ತಿದ್ದಾರೆ ಕಾರಣ ಚಮ೯ ಕಾಂತಿ ಹೆಚ್ಚಿಸುತ್ತದೆ, ಮೃದು ಮಾಡುತ್ತದೆ, ಚರ್ಮದ ಟಾಕ್ಸಿನ್ ಕೊಳೆ ತೆಗೆಯುತ್ತದೆ, ಪೇಶಿಯಲ್ ವಾಷ್ ಮಾಡುವುದರಿಂದ ಮುಖದ ಚರ್ಮ ಹೈಡ್ರೇಟ್ ಮಾಡುತ್ತದೆ ಅಂತ.   ಇದು ಸತ್ಯವೂ ಹೌದು 1933ರಲ್ಲಿ Procto and Gamble ಕಂಪನಿ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ತರುವ ಮುನ್ನ ಜನ ಆಯಾ ಪ್ರದೇಶದಲ್ಲಿ ಸಿಗುವ ಕ್ಷಾರದ ಮಣ್ಣು ಸೋಪಿನಂತೆ ಬಳಸುತ್ತಿದ್ದರು.   ಇದರ ಬಳಕೆ ಕ್ರಿಸ್ತ ಪೂರ್ವ 2800 ರಲ್ಲಿ ಇದ್ದಿತ್ತು ಎಂಬ ಸಂಶೋದನೆಯಲ್ಲಿ ಗೊತ್ತಾಗಿದೆ ಅಂತೆ.     ಶೀಗೆ ಪುಡಿ, ಅಂಟುವಾಳಗಳ ಬಳಕೆ ಕೂಡ ಈಗ ಕಡಿಮೆ   ಒಂದು ಕಾಲದಲ್ಲಿ ಅಂದರೆ ಸುಮಾರು 1965ರ ತನಕ ನಮ್ಮ ಭಾಗದಲ್ಲಿ ಹತ್ತಾರು ಕತ್ತೆ ಮೇಲೆ ಎತ್ತಿನ ಗಾಡಿಗಳಲ್ಲಿ ಸವಳು ಮಣ್ಣಿನ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿ...