Skip to main content

Posts

Showing posts with the label Tender bomboos available in western ghat

ಪಶ್ಚಿಮ ಘಟ್ಟದಲ್ಲಿ ಬಿದಿರು ಪುನಾರಾರಂಭಗೊಂಡಿದೆ.

 ಬಿದಿರು ಪಶ್ಚಿಮ ಘಟ್ಟದಲ್ಲಿ ಮತ್ತೆ ಚಿಗುರುತ್ತಿದೆ.1-August-2020    ಕಳಲೆಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ       ಬಿದಿರಕ್ಕಿ ಬಂದು ಮೂರು ವರುಷ ಬಿದಿರು ಸಂಪೂಣ೯ ನಾಶವಾಗಿತ್ತು, ಬಿದಿರು ಸಂತಾನವೇ ಇರಲಿಲ್ಲ.    ಪ್ರತಿ ವರ್ಷ ಎಳೆ ಬಿದಿರಿನ ಕಳಲೆಯ ಪಧಾಥ೯ಗಳನ್ನ ರೊಟ್ಟಿ/ದೋಸೆ/ಇಡ್ಲಿ / ಅನ್ನದೊಡನೆ ಸವಿಯುವ ಮತ್ತು ಕಳಲೆ ಉಪ್ಪಿನಕಾಯಿ ನಂಚಿಕೊಳ್ಳುವ ಅಭ್ಯಾಸ ಇದ್ದವರಿಗೆ ನಿಜಕ್ಕೂ ರಸಭಂಗ ಆಗಿತ್ತು.    ಈಗ ಪುನಃ ಬಿದಿರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಹಾಗಾಗಿ ಕಳಲೆ ಪ್ರಿಯರ ಆಸೆ ನೆರವೇರುತ್ತಿದೆ.   ಈ ಬಾರಿಯ ಕಳಲೆ ಮತ್ತು ಕಳಲೆ ಪಲ್ಯ, ಅಕ್ಕಿ ರೊಟ್ಟಿ ಮತ್ತು ಬೆಣ್ಣೆಯ ಚಿತ್ರ ನಿಮಗಾಗಿ.