Skip to main content

Posts

Showing posts with the label All Shivaratri day is auspicious day for me

Blog number 1987. ಪ್ರತಿ ಶಿವರಾತ್ರಿ ದಿನ ನನಗೆ ಸ್ಮರಣೀಯ ದಿನವಾಗಿದೆ ಐದು ವರ್ಷದ ಹಿಂದೆ ಶಿವರಾತ್ರಿ ದಿನದಿಂದ ರಾತ್ರಿ ಊಟ ತ್ಯಜಿಸಿ ಇವತ್ತಿಗೆ ಐದು ವರ್ಷ ಆಯಿತು.

#ಪ್ರತಿ_ಶಿವರಾತ್ರಿ_ನನಗೆ_ಸ್ಮರಣೀಯ_ದಿನ #ಐದು_ವರ್ಷದ_ಹಿಂದೆ_ಶಿವರಾತ್ರಿ_ದಿನದಿಂದಲೇ #ನಾನು_ರಾತ್ರಿ_ಊಟ_ತ್ಯಜಿಸಿದ್ದು #ನಮ್ಮಲ್ಲಿರುವುದ_ಬಿಟ್ಟು_ಬೇರೆಲ್ಲೋ_ಹುಡುಕುವ_ಸಹಜ_ಬುದ್ಧಿ_ಬದಲಿಸಿಕೊಂಡು #ಪ್ರಕೃತಿಯ_ಜೊತೆ_ಮನೆಯಲ್ಲೇ_ಖರ್ಚಿಲ್ಲದೆ_ಸ್ಥೂಲಕಾಯ_ನಿವಾರಣೆಗೆ #ದೃಡ_ನಿರ್ಧಾರ_ತೆಗೆದು_ಕೊಂಡ_ವಿಶೇಷ_ದಿನ   2019 ಫೆಬ್ರುವರಿ 23ಕ್ಕೆ ಅಂದರೆ ಐದು ವರ್ಷದ ಹಿಂದೆ ಶಿವರಾತ್ರಿ ದಿನ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ ಅವತ್ತು ನನ್ನ ತೂಕ ಬರೋಬ್ಬರಿ 140 ಮತ್ತು ಆಗಾಗ್ಗೆ 145 ಕ್ಕೂ ಜಂಪ್ ಮಾಡುತ್ತಾ 150 ದಾಟುವ ಹಂತ...    ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಮತ್ತು ಹಾಲು ಮಾತ್ರ ಅವರ ದೈನಂದಿನ ಆಹಾರ ಪದ್ಧತಿ ಆಗಿತ್ತು.   ಇದರ ಹಿಂದಿನ ವರ್ಷ 2018  ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.   ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ,ಇದು ನನ್ನ ದೇಹದ ಒಳಗಿನ  ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "#ನಿನ್ನ_ಆರೋಗ್ಯ_ಹದಗೆಟ್ಟಿದೆ_ಎಚ್ಚರ " ಅಂತ.   1995 ರ ತನಕ ನನ...