ಭಾಗ - 17, ಬದರಿನಾರಾಯಣ ಅಯ್ಯಂಗಾರನ್ನು ಮಂತ್ರಿ ಮಾಡದ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು, ಆನಂದಪುರಂನಲ್ಲಿ ದೇವರಾಜ ಅರಸರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಬಿನ್ನ ಮತೀಯ ಸಭೆಗಳು.
#ಭಾಗ_17. #ಶಿವಮೊಗ್ಗ_ಜಿಲ್ಲೆಯ_ಆಕಾಲದ_ಪ್ರಭಾವಿ_ನಾಯಕರನ್ನು_ಮಂತ್ರಿ_ಮಾಡದ_ಲಾಭಿ #ಅವಕಾಶ_ನೀಡದ_ನಿಜಲಿಂಗಪ್ಪನವರು. #ಅನಿವಾಯ೯ವಾಗಿ_ಬಿನ್ನಮತೀಯ_ಗುಂಪು_ಸೇರಿದ_ಬದರಿನಾರಾಯಣ್_ಅಯ್ಯ೦ಗಾರರು. #ಆನಂದಪುರಂ_ಸಮೀಪದ_ಅವರ_ಹೊಸಕೊಪ್ಪದ_ತೋಟದ_ಮನೆಯಲ್ಲಿ_ನಡೆದ_ಸರಣಿ_ಬಿನ್ನಮತಿಯ_ಸಭೆಗಳು. ತೀಥ೯ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಾಗರ - ಹೊಸನಗರ- ಮತ್ತು ತೀಥ೯ಹಳ್ಳಿ ತಾಲ್ಲೂಕು ಸೇರಿ ಒಂದು ಕ್ಷೇತ್ರ. ಸಾಗರ ತಾಲ್ಲೂಕಿನ ಆನಂದಪುರಂ ಕ್ಷೇತ್ರ ಮತ್ತು ಸಾಗರ ಪಟ್ಟಣದವರೆಗೆ ತೀಥ೯ಗಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು ಈ ಕ್ಷೇತ್ರದಿಂದ 1957 ರ ಎರಡನೇ ಮಹಾ ಚುನಾವಣೆಯಲ್ಲಿ ಕಾಂಗ್ರೇಸ್ ಪಾರ್ಟಿಯಿಂದ ಬದರಿನಾರಾಯಣ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ (1952 ರಲ್ಲಿ ಈ ಕ್ಷೇತ್ರದಿಂದ ಮೊದಲ ಸಾವ೯ತ್ರಿಕ ಚುನಾವಣೆಯಲ್ಲಿ ಇದೇ ಬದರಿನಾರಾಯಣ ಅಯ್ಯಂಗಾರ್ ರನ್ನು ಸೋಲಿಸಿದ್ದ ) ಶಾಂತವೇರಿ ಗೋಪಾಲಗೌಡರನ್ನು ಸೋಲಿಸಿ ಆಯ್ಕೆ ಆಗುತ್ತಾರೆ. ಎರಡನೇ ವಿದಾನ ಸಭಾ ಚುನಾವಣೆಯಲ್ಲಿ (1957 ರಲ್ಲಿ) ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಿಂದ ಹೊರತು ಪಡಿಸಿದ ಸಾಗರ ತಾಲ್ಲೂಕ್ ಮತ್ತು ಸೊರಬ ತಾಲ್ಲೂಕ್ ಸೇರಿ ಸಾಗರ ವಿಧಾನ ಸಭಾ ಕ್ಷೇತ್ರ ಆಗುತ್ತದೆ ಇಲ್ಲಿ ಕಾಂಗ್ರೇಸ್ ನಿಂದ ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರನ್ನು ಸ್ಪರ್ದಿಸಲು ಅವಕಾಶ ನೀಡುತ್ತಾರೆ ಆದರೆ ಹಿರಿಯರು ರೈ...