Blog number 1900. ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪನವರು ಸ್ಥಾಪಿಸಿದ್ದ (4 - ಜನವರಿ - 1948) ರೈತ ಸಂಘದ ವಜ್ರ ಮಹೋತ್ಸವ ಆಚರಣೆ 4- ಜನವರಿ - 2024
#ಕಾಗೋಡು_ರೈತ_ಹೋರಾಟದ_ನೇತಾರ_ಹೆಚ್_ಗಣಪತಿಯಪ್ಪ #ಸ್ಥಾಪಿಸಿದ_ರೈತ_ಸಂಘಕ್ಕೆ_75_ವರ್ಷದ_ವಜ್ರ_ಮಹೋತ್ಸವದ_ಸಂಭ್ರಮ #ಈ_ರೈತ_ಸಂಘದ_ಸ್ಥಾಪನೆಗೆ_ಕಡಿದಾಳುಮಂಜಪ್ಪ_ದಿನಕರ_ದೇಸಾಯಿ_ಶಾಂತವೇರಿಗೋಪಾಲಗೌಡರು_ಪ್ರೇರಣೆ #ಈ_ರೈತ_ಸಂಘದ_ಸ್ಥಾಪನೆಯ_ತಯಾರಿ_ಸಭೆಯಲ್ಲಿ_ಭಾಗವಹಿಸಿದವರು #ನಂತರ_ಸಂಸದರಾದ_ಕಾಗೋಡಿನಕೆ_ಜಿ_ಒಡೆಯರ್ #ನಂತರ_ವಿದ್ಯಾಮಂತ್ರಿ_ಆದ_ಆನಂದಪುರಂನ_ಬದರಿನಾರಾಯಣ_ಅಯ್ಯಂಗಾರ್ #ನಂತರ_ತಾಲ್ಲೂಕ್_ಬೋರ್ಡ್_ಅಧ್ಯಕ್ಷರಾದ_ಶಿರವಂತೆ_ಹೆಚ್_ಎಲ್_ವೀರಭದ್ರಪ್ಪಗೌಡರು #ನಿನ್ನೆ_4_ಜನವರಿ_2024ರ_ಗುರುವಾರ_ತಾಳಗುಪ್ಪದಲ್ಲಿ_76ನೇ_ಸಂಸ್ಥಾಪನಾ_ದಿನಾಚಾರಣೆ_ನಡೆಯಿತು. ನಿನ್ನೆ 4 ಜನವರಿ 2024 ರ ಗುರುವಾರ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ 76 ನೇ ಸಂಸ್ಥಾಪನ ದಿನಾಚಾರಣೆ ನಡೆಯಿತು. #ಇದು_ಈ_ರೈತಸಂಘದ_75ನೇ_ವರ್ಷಾಚಾರಣೆಯ_ವಜ್ರ_ಮಹೋತ್ಸವ ಕೂಡ ಆಗಿದೆ ಎನ್ನುವುದು ವಿಶೇಷ ಈ ರೈತ ಸಂಘದ ಸ್ಥಾಪನೆ ಮತ್ತು ಅದಕ್ಕೆ ಪ್ರೇರಣೆ ಕೂಡ ವಿಶೇಷವೇ ಆಗಿದೆ ಮತ್ತು ಈ ರೈತ ಸಂಘದ ಸ್ಥಾಪನೆಯ ಸಭೆಗಳಲ್ಲಿ ಭಾಗವಹಿಸಿದವರೂ ವಿಶೇಷ ವ್ಯಕ್ತಿಗಳೆ ಆಗಿದ್ದರು. 1940ರ ದಶಕದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ #ಕಡಿದಾಳು_ಮಂಜಪ್ಪ_ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್....