Blog number 1900. ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪನವರು ಸ್ಥಾಪಿಸಿದ್ದ (4 - ಜನವರಿ - 1948) ರೈತ ಸಂಘದ ವಜ್ರ ಮಹೋತ್ಸವ ಆಚರಣೆ 4- ಜನವರಿ - 2024
#ಕಾಗೋಡು_ರೈತ_ಹೋರಾಟದ_ನೇತಾರ_ಹೆಚ್_ಗಣಪತಿಯಪ್ಪ
#ಸ್ಥಾಪಿಸಿದ_ರೈತ_ಸಂಘಕ್ಕೆ_75_ವರ್ಷದ_ವಜ್ರ_ಮಹೋತ್ಸವದ_ಸಂಭ್ರಮ
#ಈ_ರೈತ_ಸಂಘದ_ಸ್ಥಾಪನೆಗೆ_ಕಡಿದಾಳುಮಂಜಪ್ಪ_ದಿನಕರ_ದೇಸಾಯಿ_ಶಾಂತವೇರಿಗೋಪಾಲಗೌಡರು_ಪ್ರೇರಣೆ
#ಈ_ರೈತ_ಸಂಘದ_ಸ್ಥಾಪನೆಯ_ತಯಾರಿ_ಸಭೆಯಲ್ಲಿ_ಭಾಗವಹಿಸಿದವರು
#ನಂತರ_ಸಂಸದರಾದ_ಕಾಗೋಡಿನಕೆ_ಜಿ_ಒಡೆಯರ್
#ನಂತರ_ವಿದ್ಯಾಮಂತ್ರಿ_ಆದ_ಆನಂದಪುರಂನ_ಬದರಿನಾರಾಯಣ_ಅಯ್ಯಂಗಾರ್
#ನಂತರ_ತಾಲ್ಲೂಕ್_ಬೋರ್ಡ್_ಅಧ್ಯಕ್ಷರಾದ_ಶಿರವಂತೆ_ಹೆಚ್_ಎಲ್_ವೀರಭದ್ರಪ್ಪಗೌಡರು
#ನಿನ್ನೆ_4_ಜನವರಿ_2024ರ_ಗುರುವಾರ_ತಾಳಗುಪ್ಪದಲ್ಲಿ_76ನೇ_ಸಂಸ್ಥಾಪನಾ_ದಿನಾಚಾರಣೆ_ನಡೆಯಿತು.
ನಿನ್ನೆ 4 ಜನವರಿ 2024 ರ ಗುರುವಾರ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ 76 ನೇ ಸಂಸ್ಥಾಪನ ದಿನಾಚಾರಣೆ ನಡೆಯಿತು.
#ಇದು_ಈ_ರೈತಸಂಘದ_75ನೇ_ವರ್ಷಾಚಾರಣೆಯ_ವಜ್ರ_ಮಹೋತ್ಸವ ಕೂಡ ಆಗಿದೆ ಎನ್ನುವುದು ವಿಶೇಷ ಈ ರೈತ ಸಂಘದ ಸ್ಥಾಪನೆ ಮತ್ತು ಅದಕ್ಕೆ ಪ್ರೇರಣೆ ಕೂಡ ವಿಶೇಷವೇ ಆಗಿದೆ ಮತ್ತು ಈ ರೈತ ಸಂಘದ ಸ್ಥಾಪನೆಯ ಸಭೆಗಳಲ್ಲಿ ಭಾಗವಹಿಸಿದವರೂ ವಿಶೇಷ ವ್ಯಕ್ತಿಗಳೆ ಆಗಿದ್ದರು.
1940ರ ದಶಕದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ #ಕಡಿದಾಳು_ಮಂಜಪ್ಪ_ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್. ಮಂಜಪ್ಪ ಗೌಡರ ರೈತ ಸಂಘ ಕ್ರೀಯಾಶೀಲವಾಗಿತ್ತು.
ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಮುಂತಾದ ಭಾಗಗಳಲ್ಲಿ ಕವಿ, ಸಮಾಜವಾದಿ #ದಿನಕರ_ದೇಸಾಯಿ ನೇತೃತ್ವದಲ್ಲಿನ ರೈತ ಸಂಘಗಳು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು.
ಬಡ ರೈತರು, ಗೇಣಿದಾರರು ತಮ್ಮ ಅಸ್ತಿತ್ವಕ್ಕಾಗಿ ಸಂಘಟನೆಗೊಂಡು ಸಂಘರ್ಷ ನಡೆಸಲೇ ಬೇಕಾದ ಪರ್ವ ಕಾಲವದು, ಆ ಸಂದರ್ಭದಲ್ಲೇ ತೀರ್ಥಹಳ್ಳಿಯಲ್ಲಿ #ಶಾಂತವೇರಿ_ಗೋಪಾಲಗೌಡರು ರೈತ ಸಮಾವೇಶ ನಡೆಸುತ್ತಾರೆ ಅದರಲ್ಲಿ ರಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಭಾಗವಹಿಸುತ್ತಾರೆ. ಇದೆಲ್ಲದರ ಪ್ರೇರಣೆಯಿಂದ ಸಾಗರ ತಾಲ್ಲೂಕಿನಲ್ಲಿ 1- ಜನವರಿ -1948 ರಲ್ಲಿ ಗಣಪತಿಯಪ್ಪನವರು ಸಾಗರ ತಾಲೂಕಿನಲ್ಲಿ ರೈತ ಸಂಘದ ಸ್ಥಾಪನೆಯ ಪೂರ್ವಭಾವಿ ಸಭೆ ನಡೆಸುತ್ತಾರೆ.
ಈ ಸಭೆಗೆ #ಕೆ_ಜಿ_ಒಡೆಯರ್ (1952 ರಲ್ಲಿ ಶಿವಮೊಗ್ಗ ಲೋಕಸಭಾ ಸಂಸದರು ), ಆನಂದಪುರಂನ #ಬದರಿನಾರಾಯಣ_ಅಯ್ಯಂಗಾರ್ (1972ರಲ್ಲಿ ವಿದ್ಯಾಮಂತ್ರಿ),#ಬರದಳ್ಳಿಚೆನ್ನಬಸಪ್ಪಗೌಡರು, #ಮರೂರುರುದ್ರಪ್ಪಗೌಡರು, #ಶಿರವಂತೆವೀರಭದ್ರಪ್ಪಗೌಡರು (ತಾಲ್ಲೂಕ್ ಬೋರ್ಡ್ ಅಧ್ಯಕ್ಷರಾಗುತ್ತಾರೆ), #ತುಂಬೆಸುಬ್ರಾಯರು, ಸಾಗರದ #ಅಬ್ದುಲ್_ಕರಿಂಸಾಹೇಬರು, #ಹಳದಿರಂಗಪ್ಪನವರು, #ರಿಪ್ಪನಪೇಟೆ_ಆನಂದರಾಯರು, ಕಾಂಗ್ರೆಸ್ ನಾಯಕ #ದೇವಪ್ಪನವರು, #ಸೀತಾರಾಮರಾವ್, ಸಾಗರದ ಖ್ಯಾತ ವಕೀಲ ಸ್ವಾತಂತ್ರ್ಯ ಹೋರಾಟಗಾರ #ಮೃತ್ಯುಂಜಯಬಾಪಟ್ ರವರು, #ವಕೀಲ್_ಬಸವಣ್ಣಪ್ಪನವರು ಮುಂತಾದ ಪ್ರಮುಖ ನಾಯಕರು ಗಣಪತಿಯಪ್ಪರ ಆಹ್ವಾನದ ಮೇರೆಗೆ ಭಾಗವಹಿಸುತ್ತಾರೆ.
ಈ ಸಭೆಯ ತೀಮಾ೯ನದಂತೆ ದಿನಾಂಕ 4- ಜನವರಿ -1948 ರಂದು #ತಾಳಗುಪ್ಪದ_ಮರತ್ತೂರಿನಲ್ಲಿ ಇನ್ನೊಂದು ರೈತ ಸಂಘದ ಸಭೆ ಮೃತ್ಯುಂಜಯ ಬಾಪಟ್ ರ ಅಧ್ಯಕ್ಷತೆಯಲ್ಲಿ ನಡೆದು ಅವರ ಆದೇಶದಂತೆ #ಡಿ_ಮೂಕಪ್ಪನವರು (1957 ರಲ್ಲಿ ಸಾಗರದ ವಿಧಾನಸಭಾ ಸದಸ್ಯರಾಗುತ್ತಾರೆ) ಅಧ್ಯಕ್ಷರಾಗಿ, #ಗಣಪತಿಯಪ್ಪ ಕಾರ್ಯದರ್ಶಿ ಆಗುತ್ತಾರೆ ನಂತರ ನಡೆಯುವುದೇ #ಐತಿಹಾಸಿಕ_ಕಾಗೋಡು_ರೈತ_ಚಳವಳಿ.
ಇದೇ ರೈತ ಸಂಘ 70 ವರ್ಷದ ನಂತರ ಡಾ. ಹೆಚ್.ಗಣಪತಿಯಪ್ಪ ಸ್ಥಾಪಿತ 1948 #ತಾಲ್ಲೂಕ್_ರೈತ_ಸಂಘ_ಸಾಗರ ಅಂತ ಪುನರ್ ಸ್ಥಾಪನೆ ಆಗಿ ತಾಲ್ಲೂಕಿನಾದ್ಯಂತ ಹೊಸ ಯುವಕರ ಪಡೆ ಸಕ್ರಿಯವಾಗಿದೆ.
ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳು ಜನರ ಗಮನ ಸೆಳೆಯುತ್ತಿದೆ ಈ ಸಂಘಟನೆಯ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳರ ನೇತೃತ್ವದಲ್ಲಿ ಸಕ್ರಿಯವಾಗಿದೆ ತಾಲ್ಲೂಕಿನ ಹೊಸ ತಲೆಮಾರಿನ ಯುವ ಪಡೆ ದಿನದಿಂದ ದಿನಕ್ಕೆ ಈ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ
ಇತ್ತೀಚಿಗೆ ಬಡವರ ಪರ ಹೋರಾಟ ಮಾಡುವ ಯುವಕರೇ ಇಲ್ಲವಾಗಿದ್ದಾರೆ,ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದಾರೆ, ಅನ್ಯಾಯದ ವಿರುದ್ದ ಪ್ರತಿಭಟನೆ ಮಾಡಿದರೆ ಪಕ್ಷ - ನಾಯಕರ ವಿರೋದ ಕಟ್ಟಿಕೊಂಡು ನಷ್ಟ ಅನುಭವಿಸಬೇಕೆಂಬ ಭಯದಿಂದ ಅವರೆಲ್ಲ ಸೇಪರ್ ಜೋನ್ ಆದ ರಾಜಕೀಯ ವೇದಿಕೆಗಳಲ್ಲಿ ಕರಗಿ ಹೋಗಿದ್ದರಿಂದ ತಾಲ್ಲೂಕಿನಲ್ಲಿ ನ್ಯಾಯದ ಪರವಾದ ಕೂಗು ಕ್ಷೀಣವಾಗಿತ್ತು ಈ ಸಂದಭ೯ದಲ್ಲಿ ನನ್ನ ಗುರು ಗಣಪತಿಯಪ್ಪರ ತತ್ವ ಸಿದ್ಧಾಂತದ ರೈತ ಸಂಘ ಪುನಃ ಸಂಘಟಿಸಿ 75 ನೇ ವರ್ಷಾಚಾರಣೆ ಮಾಡಿ ನ್ಯಾಯದ ಪರ ಹೋರಾಟಕ್ಕೆ ತೊಡಗಿರುವ ದಿನೇಶ್ ಶಿರವಾಳ, ಕೆಳದಿ ರಮೇಶ್, ಗಣಪತಿಯಪ್ಪರ ಪುತ್ರ ಹೊಯ್ಸಳ ಮತ್ತು ಇವರ ಜೊತೆ ಕೈ ಜೋಡಿಸಿದ ಎಲ್ಲಾ ಜನಪರ ಕಾಳಜಿಯ ಹೋರಾಟಗಾರ ಯುವಕರಿಗೆ ಅಭಿನಂದಿಸುತ್ತೇನೆ.
Comments
Post a Comment