https://youtu.be/9ZmhCI2boxY?feature=shared
#ಇವತ್ತು_ನಮ್ಮ_ಸಂಸ್ಥೆಯ_ಮ್ಯಾನೇಜರ್_ಶಬರಿಮಲೆ_ಯಾತ್ರೆ_ಪ್ರಾರಂಭಿಸಿದರು.
#ಶಬರಿಮಲೆಗೆ_ಭೇಟಿ_ನೀಡುವ_ಭಕ್ತರ_ಸಂಖ್ಯೆ_ಒಂದರಿಂದ_ಒಂದೂವರೆ_ಕೋಟಿ
#ಭಕ್ತಿ_ಮಾರ್ಗದ_ವಿಶಿಷ್ಟ_ಆಚರಣೆಯ_ಈ_ಶಬರಿಮಲೆ_ಯಾತ್ರೆ
ನಮ್ಮ ಮನೆಯಲ್ಲಿ ನಮ್ಮಣ್ಣ ಶಬರಿಮಲೆ ಯಾತ್ರೆಮಾಡಿದ್ದರು ಆದರೆ ನಮಗೆಲ್ಲ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
ಕರ್ನಾಟಕ,ಕೇರಳ,ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಹೆಚ್ಚಿನ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಆದ್ದರಿಂದ ದಕ್ಷಿಣ ಭಾರತದಲ್ಲಿ ಶಬರಿಮಲೆ ಯಾತ್ರಾ ಸಂದರ್ಭದಲ್ಲಿ ಎಲ್ಲಾ ದೇವಸ್ಥಾನಗಳಲ್ಲೂ ಬರಪೂರ ಭಕ್ತರು ಇರುತ್ತಾರೆ.
ನಮ್ಮ ಆನಂದಪುರಂನ ಆಯ್ಯಪ್ಪ ಸ್ಟಾಮಿ ದೇವಸ್ಥಾನದಿಂದ ಇವತ್ತು ಗುರುಸ್ವಾಮಿ ಮಧು ಜಲಕೃಷ್ಣಸ್ವಾಮಿ ಅವರ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭವಾಗಿದೆ.
ನಾಳೆ ಬೆಳಿಗ್ಗೆ ಕುಂಬಳೆ ಗೋಪಾಲ ಕೃಷ್ಣ ದೇವಾಲಯ ತಲುಪಿ ಅಲ್ಲಿಂದ ಬೇಕಲ್ ಕೋಟೆ ವೀಕ್ಷಿಸಿ ನಂತರ ಶಬರಿಮಲೆ ತಲುಪಿ ಶಬರಿಮಲೆ ಯಾತ್ರೆ ಪೂರ್ಣ ಮಾಡಿಊರಿಗೆ ವಾಪಸಾಗಲಿದ್ದಾರೆ.
ಈ ಸಂದರ್ಭದಲ್ಲಿ ಶಬರಿಮಲೆಯ ದೇವಸ್ಥಾನ ದಿನದ 18 ಗಂಟೆ ತೆರೆದಿಡಲಾಗುತ್ತದೆ,ಪ್ರತಿನಿತ್ಯ 80000 ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ನಮ್ಮ ನಮ್ಮ ಸಂಸ್ಥೆಯ ಮ್ಯಾನೇಜರ್ ಅನಿಲ್ ಇವತ್ತು ಯಾತ್ರೆಯ ಪ್ರಾರಂಭವಾಗಿ ನಮ್ಮ ಕಚೇರಿಯಿಂದ ಹೊರಡುವಾಗ ಶಬರಿಮಲೆ ಯಾತ್ರೆಯ ಅನೇಕ ವಿಧಿ ವಿಧಾನಗಳನ್ನು ನಾನು ಪ್ರತ್ಯಕ್ಷ ನೋಡಲು ಅವಕಾಶವಾಯಿತು.
Comments
Post a Comment