Blog number 1913. ಸಾಗರದ ಖ್ಯಾತ ಉದ್ಯಮಿ ಕೊಡುಗೈ ದಾನಿ ದಿವಂಗತ ಪುತ್ತೂರಾಯರ ಕುಟುಂಬದ ಹಾಲು ಮಡ್ಡಿ ಬಳಸಿ ತಯಾರಿಸುವ ಬ್ರಾಂಡೆಡ್ ಅಗರಬತ್ತಿಗೆ ಭರಪೂರ ಬೇಡಿಕೆ ಕಳೆದ 15 ವರ್ಷದಿಂದ ನಮ್ಮ ಸಂಸ್ಥೆಗೆ ಇದನ್ನು ಖರೀದಿಸುತ್ತಿದ್ದೇನೆ.
#ಸಾಗರದ_ಪ್ರಸಿದ್ಧ_ಆಗರಬತ್ತಿ_ಸಂಸ್ಥೆಯ_ಉದ್ಯೋಗಿಗಳು
#ನಮ್ಮ_ಕಛೇರಿಯಲ್ಲಿ
#ಹಾಲುಮಡ್ಡಿ_ಮೌಲ್ಯವರ್ಧನೆ_ಮಾಡಿದ_ಮಹಿಳಾ_ಉದ್ಯಮಿಯ_ಸಾಹಸ
#ಈ_ವಿಶೇಷ_ಆಗರಬತ್ತಿ_ಕಿಲೋಗೆ_ರೂ_3200
#ಸಾಗರದ_ಪ್ರಸಿದ್ದ_ಉದ್ಯಮಿ_ಎನ್_ಜಿ_ಪೈ_ಸೊಸೆಯಿಂದ
#ಶ್ರೀಗಜಾನನ_ಪಪ್ಯೂ೯ಮರಿ_ಇಂಡಸ್ಟ್ರೀಸ್
#ಪ್ರಸಿದ್ಧವಾಗಿರುವ_ಸ್ಯಾಂಡಲ್_ಪ್ಲೋರಾ_ಹರಿಲೀಲಾ_ವೈಷ್ಣವಿ_ಪ್ಲೋರಾ.
ಕಳೆದ ನವೆಂಬರ್ ಒಂದರಂದು ಸಾಗರದ ಎನ್.ಜಿ. ಪೈ ಸಂಸ್ಥೆಯ ನಿಷ್ಟಾವಂತ ವ್ಯವಸ್ಥಾಪಕರಾದ ಅಶೋಕ್ ನಾಯಕ್ ಬಂದಿದ್ದರು ನಾವೆಲ್ಲ ಪುತ್ತೂ ರಾಯರ ಬೇಟಿಗೆ ಸಾಗರ ಇಕೇರಿ ರಸ್ತೆಯ ಅವರ ಹಳೆಯ ರೈಸ್ ಮಿಲ್ ಕಛೇರಿಗೆ ಹೋದಾಗೆಲ್ಲ ಸಿಗುತ್ತಿದ್ದವರು.
ಅವರ ಜೊತೆ ಬಂದವರು ಹಿರೇಬಿಲಗುಂಜಿ ಗ್ರಾ.ಪ. ನ ಕೊಪ್ಪದ ಆದರ್ಶ ಗೌಡರು ಮತ್ತು ಸಾಗರದ ಜೋಗ ರಸ್ತೆಯ ಮಾದಣ್ಣರ ಕ್ಯಾಂಟೀನ್ ಪಕ್ಕದ ಪ್ರಾವಿಜನ್ ಸ್ಟೋರ್ ಮಾಲಿಕ ಕಾರ್ತಿಕ್ ಪೈ .
ಇವರೆಲ್ಲ ಬಂದಿದ್ದು ಇವರ ಅಗರಬತ್ತಿ ಸಂಸ್ಥೆಯ ಇನ್ನೊಂದು ಹೊಸ ಉತ್ಪನ್ನ ಕಡಿಮೆ ಬೆಲೆಯ ಅಗರಬತ್ತಿ ಮಾರ್ಕೇಟ್ ಮಾಡಲು.
ಕಿರಣ್ ಪೈ ಇದರ ಏಜೆನ್ಸಿ ಪಡೆದಿದ್ದಾರೆ ಅವರಿಗೆ ಇದರ ಮಾರ್ಕೆಟ್ ಪರಿಚಯಿಸಲು ಅಶೋಕ್ ನಾಯಕರು ಬಂದಿದ್ದರು ಅವರ ಜೊತೆ ಬಂದಿದ್ದ ಕೊಪ್ಪ ಆದರ್ಶ ಗೌಡರು ಉದಬತ್ತಿ ತಯಾರಿಕೆಯಲ್ಲಿ ನುರಿತ ತಂತ್ರಜ್ಞರು.
ನಮ್ಮ ಸಂಸ್ಥೆಯಲ್ಲಿ 2008ರಿಂದ ಇವರ ಸಂಸ್ಥೆ ತಯಾರಿಸುವ #ಸ್ಯಾಂಡಲ್_ಫ್ಲೊರಾ ಅಗರ ಬತ್ತಿಯ ಖಾಯ೦ ಗಿರಾಕಿ.
#ಅಂದಾಜು_2008ರಲ್ಲಿ_ಸಾಗರದ ಕೊಡುಗೈ ದಾನಿ, ಪ್ರಖ್ಯಾತ ಉದ್ದಿಮೆದಾರರಾದ ಎನ್.ಜಿ. ಪೈ (ಪುತ್ತೂರಾಯರು) ಮತ್ತು ತೀನಾ ಶ್ರೀನಿವಾಸರು (ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದವರು) ಒಂದು ಸಂಜೆ ನನ್ನ ಬೇಟಿಗಾಗಿ ನಮ್ಮಲ್ಲಿಗೆ ಬಂದಾಗ ಆಗಷ್ಟೆ ಸಂಜೆಯ ಅಗರ್ ಬತ್ತಿ ನಮ್ಮ ಕೆಲಸದವರು ಹಚ್ಚುತ್ತಿದ್ದಾಗ ಪೈ ಅವರು ತಮ್ಮ ಸೊಸೆ ಪ್ರಾರಂಬಿಸಿರುವ ಹೊಸ ಉದ್ಯಮದ ಅಗರ್ ಬತ್ತಿ ಒಮ್ಮೆ ಬಳಸಿ ನೋಡಿ ಅಂದಿದ್ದರು ಮತ್ತು ನಮ್ಮ ಊರ ಪಕ್ಕದ ತಾಲ್ಲೂಕಿನ ಹಾಲುಗುಡ್ಡೆ ಎಂಬಲ್ಲಿ ಅವರದ್ದೆ ಹಾಲು ಮಡ್ಡಿ ತೋಟ ಮಾಡಿದ್ದು ಅದರ ಹಾಲು ಮಡ್ಡಿ ಬಳಸುತ್ತೇವೆ ಅಂದಾಗ ಕುತೂಹಲ ಉಂಟಾಗಿತ್ತು.
ನಂತರ ಇನ್ನೊಮ್ಮೆ ಸಾಗರದ ಮಾರ್ಕೆಟ್ ರಸ್ತೆಯಲ್ಲಿರುವ ಅವರ ಕಛೇರಿಗೆ (ಹಳೇ ರೈಸ್ ಮಿಲ್) ಪೈರನ್ನು ಬೇಟಿ ಮಾಡಲು ಹೋದಾಗ ಇವರ ಸ್ಯಾಂಡಲ್ ಪ್ಲೋರಾ ಮತ್ತು ವೈಷ್ಣವಿ ಪ್ಲೋರಾ ಅಗರಬತ್ತಿ ಖರೀದಿಸಿ ತಂದಿದ್ದೆ.
ಇದರಲ್ಲಿ ನನಗೆ ಇವತ್ತಿನವರೆಗೆ ಅತ್ಯಂತ ಇಷ್ಟ ಆಗಿರುವುದು #ಸ್ಯಾಂಡಲ್_ಪ್ಲೋರಾ ಮಾತ್ರ ಈಗ ಹರಿಲೀಲಾ ಎಂಬ ಹೊಸ ಬ್ರಾಂಡ್ ಕೂಡ ಪ್ರಾರಂಬಿಸಿದ್ದಾರೆ.
ಹಾಲು ಮಡ್ಡಿ ಇದರ ವೈಜ್ಞಾನಿಕ ಹೆಸರು AILANTHUS MALABARICA ಇದು ಹೆಚ್ಚು ಮಳೆ ಪ್ರದೇಶದ ನೂರು ಅಡಿ ಎತ್ತರದ ತನಕ ಬೆಳೆಯುವ ಸುಮಾರು 50 ರಿಂದ 75 ವರ್ಷ ಆಯಸ್ಸು ಹೊಂದಿದ ಮರದ ಅಂಟು ಇದು ಅರಣ್ಯ ಬೆಳೆ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿದೆ.
ಈ ಮರದ ಅಂಟು ತೆಗೆದು ಬಳಸಲು ಅರಣ್ಯ ಇಲಾಖೆ 1990 ರ ತನಕ ಅರಣ್ಯ ಉತ್ಪನ್ನ ಸಂಗ್ರಹಕಾರರಿಗೆ ಅನುಮತಿ ನೀಡಿತ್ತು ಆದರೆ ಅವೈಜ್ಞಾನಿಕ ಮಾದರಿಯಲ್ಲಿ ಅಂಟು ತೆಗೆಯುವ ದುರಾಸೆಯ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರ ಹಣದಾಸೆಯಿಂದ ಹಾಲು ಮಡ್ಡಿ ಮರಗಳು ನಾಶವಾಗುತ್ತಿರುವ ಕಾರಣದಿಂದ ಈಗ ಅರಣ್ಯದಲ್ಲಿ ಹಾಲು ಮಡ್ಡಿ ಸಂಗ್ರಹ ನಿಷೇದ ಮಾಡಿದೆ.
ಹಾಲು ಮಡ್ಡಿ ಸ್ವಂತ ಕೃಷಿ ಮಾಡಲು ಅನುಮತಿ ಇದೆ ಆದ್ದರಿಂದಲೇ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರಾಗಿದ್ದ ಎನ್.ಜಿ. ಪೈ ತಮ್ಮ ಸ್ವಂತ ಹಾಲು ಮಡ್ಡಿ ಪ್ಲಾಂಟೇಶನ್ ಮಾಡಿದ್ದರು ಅವರಿಗೂ ಗೊತ್ತಿರಲಿಲ್ಲ ಈ ಹಾಲು ಮಡ್ಡಿ ಇವರ ಸ್ವಂತ ಕೈಗಾರಿಕೆಗೆ ಮೂಲ ವಸ್ತು ಆಗುತ್ತೆ ಅಂತ.
ಇವರ ಸೊಸೆ ಇದರ ಮೌಲ್ಯವರ್ದನೆ ಮಾಡಿ ಈಗ ದೇಶ ವಿದೇಶದಲ್ಲಿ ಪ್ರಸಿದ್ದಿಗೊಳಿಸಿದ್ದಾರೆ.
ಪ್ರತಿ ತಿಂಗಳೂ ಒಂದು ಕಿಲೋ ಅಗರಬತ್ತಿ ನನ್ನ ಸಂಸ್ಥೆಗೆ ಖರೀದಿಸುತ್ತೇನೆ ಈಗಿನ ಬೆಲೆ ಕಿಲೋಗೆ 3200 , ಇದರ ಸುವಾಸನೆಯೇ ವಿಶಿಷ್ಟ ಆದ್ದರಿಂದ ನಮ್ಮ ಗ್ರಾಹಕರು ಇದು ಎಲ್ಲಿ ಸಿಗುತ್ತದೆ? ಇದ್ಯಾವ ಅಗರಬತ್ತಿ ಅಂತೆಲ್ಲ ವಿಚಾರಿಸುತ್ತಾರೆ, ಕೆಲವರಿಗೆ ಉಡುಗೊರೆಯಾಗಿಯೂ ಕೊಡುತ್ತೇನೆ.
ಪ್ರತಿ ಗೌರಿ ಗಣೇಶ ಹಬ್ಬದಲ್ಲಿ ಮುಂಬೈ ಶಹರದ ಈ ಅಗರಬತ್ತಿ ಗ್ರಾಹಕರ ಬೇಡಿಕೆ ಪೂರೈಸಲು ಆಗುವುದಿಲ್ಲ ಅಂತ ಮುಂಬೈ ಶಹರದ ಗೆಳೆಯರೋರ್ವರು ತಿಳಿಸಿದ್ದರು, ಆನ್ ಲೈನ್ ನಲ್ಲೂ ಸಿಗುತ್ತಿದೆ, ಪ್ರಸಿದ್ಧ ಕಾಮತ್ ಹೋಟೆಲ್ ಸರಪಳಿಯಲ್ಲಿ ದೇಶದಾದ್ಯಂತ ಈ ಅಗರಬತ್ತಿ ಮಾರಾಟಕ್ಕೆ ಇಟ್ಟಿದ್ದಾರೆ.
ಹಾಲು ಮಡ್ಡಿ ಮೌಲ್ಯವರ್ಧನೆ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಶ್ರೀ ಗಜಾನನ ಪಪ್ಯೂ೯ಮರಿ ಇಂಡಸ್ಟ್ರಿ ನಮ್ಮ ತಾಲ್ಲೂಕಿನ ಮಹಿಳಾ ಉದ್ಯಮಿ ಒಬ್ಬರದ್ದು ಅದು ನಮ್ಮೆಲ್ಲರ ಪ್ರೀತಿ ವಿಶ್ವಾಸದ ದಿವಂಗತ ಎನ್.ಜಿ. ಪೈ (ಪುತ್ತೂರಾಯರ) ಅವರ ಸೊಸೆಯದ್ದು ಎಂಬುದು ಒಂದು ಹೆಮ್ಮೆಯ ವಿಷಯ.
50 ಗ್ರಾಂ ಪ್ಯಾಕೆಟ್ ನಲ್ಲೂ ದೊರೆಯುತ್ತದೆ ಬೆಲೆ ರೂ 170.
ಖರೀದಿ ಸಂಪರ್ಕಕ್ಕಾಗಿ https://g.co/kgs/Gr37TC
Comments
Post a Comment