Blog number 1896. ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದು ತಡೆಯಲು ಶುದ್ಧ ಜೇನು ಮೇಣದ ವಿಂಟರ್ ಕ್ರೀಂ ನಾನು ಬಳಸುತ್ತೇನೆ.
https://youtu.be/e_3jwxFCOqE?feature=shared
#ಚಳಿಗಾಲದಲ್ಲಿ_ನನ್ನ_ಚರ್ಮ_ಸಂರಕ್ಷಣೆಗಾಗಿ
#ಜೇನಿನ_ಮೇಣದ_ದೇಸಿ_ಕ್ರೀಮ್
#ಇದನ್ನು_ತಯಾರಿಸುವವರು_ನಾಗೇಂದ್ರಸಾಗರ್
#ಪೆಟ್ರೋಲಿಯಂ_ಜೆಲ್_ವ್ಯಾಸಲಿನ್ಗಿಂತ_ಅತ್ಯುತ್ತಮ
#ಜೇನು_ಸಾಗಾಣಿಕೆದಾರರ_ಜೇನು_ಕೃಷಿ_ಮೌಲ್ಯಾದಾರಣೆಗಾಗಿ
#ಜೇನಿನ_ಮೇಣದ_ವಿಂಟರ್_ಕ್ರೀಮ್
#ಆದುನಿಕ_ಜೀವನ_ಶೈಲಿಯಿಂದ_ನಮ್ಮದೇ_ಪಾದ_ನಮ್ಮ_ಕಣ್ಣು_ಕೈಯಿಗೆ_ದೂರ
ಚಳಿಗಾಲ ಬಂತೆಂದರೆ ದೇಹದ ಮುಖದ ಕೆನ್ನೆ ತುಟಿಗಳು, ಕಾಲ ಹಿಮ್ಮಡಿಗಳು ಒಡೆಯಲು ಪ್ರಾರಂಬಿಸುತ್ತದೆ, ಚರ್ಮ ಬಿರುಕು ಬಿಟ್ಟ ನಂತರ ಅವುಗಳ ಆರೈಕೆ ಮಾಡಿದರೆ ಅದು ಗುಣವಾಗಲು ತಿಂಗಳು ಕಾಲ ಬೇಕು ಮತ್ತು ಈ ಬಾದೆ ಅನುಭವಿಸಿದವರಿಗೆ ಮಾತ್ರ ಗೊತ್ತು.
ಹೆಚ್ಚಾಗಿ ಒಣ ಚರ್ಮದವರಿಗೆ (Dry Skin) ಈ ಸಮಸ್ಯೆ ಜಾಸ್ತಿ, ಚಳಿಗಾಲನೇ ಶುರುವಾಗಿಲ್ಲ ಎಂದು ಕೆಲವರು ಗೇಲಿ ಮಾಡುತ್ತಾರೆ ಆದರೆ ತೀವ್ರ ಚಳಿಗಾಲ ಶುರುವಾಗದೇ ಇರುವಾಗಲೂ ಒಣ ಹವೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆ ಆದಾಗ ಒಣ ಚರ್ಮದವರ ಕಾಲಿನ ಹಿಮ್ಮಡಿ ಒಡೆಯಲು ಪ್ರಾರಂಭ ಆಗುತ್ತದೆ.
ನಾವು ಅತ್ಯಂತ ಕಡಿಮೆ ಕಾಳಜಿ ವಹಿಸುವುದು ನಮ್ಮ ಪಾದಗಳಿಗೇ, ಈ ಪಾದಗಳು ಜೀವನ ಪರ್ಯಂತ ವಹಿಸುವ ಶ್ರಮ ನಗಣ್ಯ ಎಂಬಂತೆ ಜನರ ಭಾವನೆ ಆದ್ದರಿಂದ ಎಲ್ಲರೂ ಮುಖದ ಸೌಂದರ್ಯಕ್ಕೆ ನೀಡುವಷ್ಟು ಕಾಳಜಿಯ ಒಂದಂಶವೂ ಪಾದಗಳಿಗೆ ನೀಡುವುದಿಲ್ಲ.
ಒಣ ಹವೆ, ತೇವಾಂಶ ಕೊರತೆಯಿಂದ, ಮತ್ತು ನಿತ್ಯ ನಡೆದಾಟದಿಂದ ಪಾದಗಳಿಗೆ ಅಂಟುವ ದೂಳುಗಳು ಸೇರಿ ಪಾದದ ಚರ್ಮ ಬಿರುಕು ಬಿಟ್ಟು ಉರಿ ಶುರುವಾದಾಗಲೇ ಪಾದದ ಕಡೆ ನಮ್ಮ ಗಮನ ಹೋಗುತ್ತದೆ ಆ ನಂತರವೇ ಪ್ರತಿ ದಿನ ರಾತ್ರಿ ಹಾಸಿಗೆ ಸೇರುವ ಮೊದಲು ಪಾದಗಳ ಕೊಳೆ ತೊಳೆಯುವ ಮತ್ತು ಬಿರುಕುಗಳಿಗೆ ಪೆಟ್ರೋಲಿಯಂ ಪ್ರಾಡಕ್ಟ್ ಆದ ಸುದಾರಿತ ಗ್ರೀಸ್ (ವ್ಯಾಸಲೀನ್) ಹಚ್ಚಲು ಪ್ರಾರಂಬಿಸುತ್ತೇವೆ ಆದರೆ ಬಿರುಕು ಬಿಟ್ಟ ಚರ್ಮ ತಕ್ಷಣ ಗುಣವಾಗುವುದಿಲ್ಲ.
ಪ್ರತಿ ನಿತ್ಯ ನಿಮ್ಮ ಪಾದಗಳನ್ನು ಪ್ರೀತಿಸುವ ಅವುಗಳ ಆರೈಕೆ ಯಾವತ್ತೂ ಮಾಡುತ್ತಿದ್ದರೆ ಈ ಸಮಸ್ಯೆ ಇರುವುದಿಲ್ಲ ಇವತ್ತಿನ ಆಧುನಿಕ ಜೀವನ ಶೈಲಿ, ಡೈನಿಂಗ್ ಟೇಬಲ್ ಬಳಕೆಗಳು, ದೇಹದ ಬೊಜ್ಜು ನಮ್ಮ ಕಣ್ಣು ಮತ್ತು ಕೈಯಿಂದ ನಮ್ಮ ಅತ್ಯಂತ ಸಮೀಪದ ಪಾದವೇ ದೂರವಾಗಿರುವುದು ವಾಸ್ತವ.
ಈಗ ವಿಶ್ವದಾದ್ಯಂತ ಪೆಟ್ರೋಲಿಯಂ ಉಪ ಉತ್ಪನ್ನಗಳಾದ ಜೆಲ್ ವ್ಯಾಸಲೀನ್ ಹೆಚ್ಚು ಬಳಕೆಯಲ್ಲಿದೆ, ಪ್ರಾಚಿನ ಕಾಲದಲ್ಲಿ ಪ್ರಾಣಿಯ ಕೊಬ್ಬು, ಸಸ್ಯದ ಕೊಬ್ಬು, ಎಣ್ಣೆ ಕಾಳುಗಳ ಎಣ್ಣೆ, ಹಾಲಿನ ಕೆನೆ - ಬೆಣ್ಣೆ - ತುಪ್ಪಗಳ ಜೊತೆ ಜೇನಿನ ಮೇಣದ ಬಳಕೆ ಕೂಡ ಇತ್ತು.
ಈಗ ಜೇನಿನ ಮೇಣದ ಬಳಕೆ ತುಂಬಾ ಕಡಿಮೆ, ಸಾಗರ ತಾಲ್ಲುಕಿನಲ್ಲಿನ ನಾಗೇಂದ್ರ ಸಾಗರ್ ಜೇನು ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ ಅವರು ಜೇನು ಮೇಣದಿಂದ ತಯಾರಿಸುವ ವಿಂಟರ್ ಕ್ರೀ೦ ಯಾವುದೇ ಬ್ರಾಂಡೆಡ್ ವಿಂಟರ್ ಕ್ರೀಂಗೆ ಕಡಿಮೆ ಇಲ್ಲ.
Comments
Post a Comment