Blog number 1920. ಸುಸಜ್ಜಿತ ಡೈನಿಂಗ್ ಹಾಲ್ ನಿರ್ಮಿಸಿ ಅರ್ಪಿಸಿದ ಆನಂದಪುರಂ ಪಾರೆಸ್ಟರ್ ರುಕ್ಮಯ್ಯರ ಪುತ್ರ ಪ್ರಕಾಶ್ ಗೆ ಅಭಿನಂದನೆಗಳು
#ನಮ್ಮ_ಊರಿನ_ಕರ್ನಾಟಕ_ಪಬ್ಲಿಕ್_ಸ್ಕೂಲ್
#ಡೈನಿಂಗ್_ಹಾಲ್_ಸಮರ್ಪಿಸಿದ_ಪ್ರಕಾಶ್_ರುಕ್ಮಯ್ಯ.
#ಅವರ_ಸಂಸ್ಥೆ_ರೇ_ಕ್ಯೂ_ಇಂಟರ್_ಕನೆಕ್ಷನ್_ಟೆಕ್ನಾಲಿಜೀಸ್_ಇಂಡಿಯಾ_ಪ್ರೈ_ಲಿ_ಕೊಡುಗೆ
#ಈ_ಪದವಿ_ಪೂರ್ವ_ಕಾಲೇಜು_ವಿದ್ಯಾಮಂತ್ರಿಬದರಿನಾರಾಯಣಅಯ್ಯಂಗಾರ್_ಮತ್ತು_ಅವರ_ಸಹೋದರ_ವೆಂಕಟಚಲಅಯ್ಯಂಗಾರ್_ಕೊಡುಗೆ.
#ಪ್ರಕಾಶ್_ಕೆಳದಿ_ಅರಸರಿಂದ_ನೇಮಕವಾಗಿದ್ದ_ಸುಂಕದ_ಮನೆತನದವರು.
ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಸುಸಜ್ಜಿತವಾದ ಡೈನಿಂಗ್ ಹಾಲ್ ದಾನಿಗಳಾದ ಪ್ರಕಾಶ್ ರುಕ್ಮಯ್ಯ ನಿರ್ಮಿಸಿ ಕೊಟ್ಟಿದ್ದಾರೆ ಅದು ಇವತ್ತು 19 ಜನವರಿ 2024ರ ಶುಕ್ರವಾರ ಸಮರ್ಪಣೆ ಮಾಡುವ ಸಮಾರಂಭ ನಡೆಯಲಿದೆ.
ದುಭಾರಿ ವೆಚ್ಚದಲ್ಲಿ ಡೈನಿಂಗ್ ಹಾಲ್ ನಿರ್ಮಿಸಿ ಕೊಟ್ಟಿರುವ ಪ್ರಕಾಶರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲಾ ಶಾಲೆಗಳಲ್ಲೂ ಡೈನಿಂಗ್ ಹಾಲ್ ನಿರ್ಮಾಣ ಮಾಡಲು ಅವರ ಈ ಕೆಲಸ ಪ್ರೇರಣೆ ಆಗಲಿದೆ.
ಒಂದು ವಿಶೇಷ ಎಂದರೆ ಇವರ ಮನೆತನಕ್ಕೊಂದು ಇತಿಹಾಸದ ತಳಕು ಇದೆ ಅದೇನೆಂದರೆ ಸುಮಾರು ನಾಲ್ಕು ನೂರು ವರ್ಷಗಳಹಿಂದೆ ಆನಂದಪುರಂನ ಬನ್ನಿಮಂಟಪದ ಬಳಿಯ ಹತ್ತನೆ ಶತಮಾನದಿಂದ ಇದ್ದಿದ್ದ ಉತ್ತರ ಭಾರತದ ಗೋರಕಪುರದ ಮಹಾಂತರ ಆಳ್ವಿಕೆಗೆ ಒಳಪಟ್ಟ (ಈಗಿನ ಮಹಾಂತರು ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ) ಮಹಾಂತರ ಮಠದ ಸಮೀಪ ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಬೆಸ್ತರ ರಾಣಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ #ಚಂಪಕ_ಸರಸ್ಸು ನಿತ್ಯ ನಿರ್ವಹಣೆಗಾಗಿ ಸದರಿ ಮಹಾಂತರ ಮಠಕ್ಕೆ ಜಮೀನು ಉಂಬಳಿ ನೀಡಿ ಅಡಿಕೆ - ಅಕ್ಕಿ- ಮೆಣಸು ಸಾಗಾಣಿಕೆಗೆ ಸುಂಕದ ರಿಯಾಯಿತಿ ನೀಡಿದ್ದರೆಂಬ ಮಾಹಿತಿಯ ಶಾಸನಗಳಿದೆ.
ಈ ಬನ್ನಿಮಂಟಪ, ಮಹಾಂತರ ಮಠ ಮತ್ತು ಚಂಪಕ ಸರಸ್ಸು ಸಮೀಪದಲ್ಲೇ ಬೃಹತ್ ಸಂತೆ ನಡೆಯುತ್ತಿತ್ತಂತೆ ಮತ್ತು ಇಲ್ಲಿಯೇ ಸುಂಕದ ಕಟ್ಟೆ ಇದ್ದಿತ್ತು.
ಆನಂದಪುರಂ ಕೋಟೆಯಿಂದ ನೇರವಾದ ರಸ್ತೆ ಈಗಿನ ಕನ್ನಡ ಸಂಘದ ಎದುರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕೆ.ಎಂ.ಎಸ್.ರೈಸ್ ಮಿಲ್ ಮಧ್ಯದಲ್ಲಿ ಸಾಗಿ ಬನ್ನಿಮಂಟಪ, ಮಹಾಂತರ ಮಠ, ಚಂಪಕ ಸರಸ್ಸು ಮತ್ತು ಸುಂಕದ ಕಟ್ಟೆಗೆ ಸಂಪರ್ಕಿಸುತ್ತಿತ್ತು (ಈಗಿನ ದಾಸಕೊಪ್ಪ ಶಿಕಾರಿಪುರ ರಸ್ತೆ ಆಗ ಇರಲಿಲ್ಲ).
ಇಲ್ಲಿನ ಸುಂಕದ ಕಟ್ಟೆಯಲ್ಲಿ ಮತ್ತು ಸಂತೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿ ರಾಜರ ಆಸ್ಥಾನಕ್ಕೆ ತಲುಪಿಸುವ ಸುಂಕದವರನ್ನು ರಾಜರು ನೇಮಕ ಮಾಡಿದ್ದರು ಆ ಮನೆತನದ ಮೂಲ ಹೆಸರು ಕೆಸರೆ ಮನೆತನವಾದರೂ ಈ ಸುಂಕದ ಉದ್ಯೋಗದಿಂದ ಸುಂಕದ ಮನೆತನ ಎಂಬ ಹೆಸರು ಶಾಶ್ವತ ಆಯಿತು.
ಈ ಮನೆತನದ ಚಿರುಡ ಶೆಟ್ಟರು ಸ್ವಾತಂತ್ರ್ಯ ಪೂರ್ವದಲ್ಲಿ 1916 ರಿಂದ 1932ರ ವರೆಗೆ ಯಡೇಹಳ್ಳಿಯ ಬ್ರಿಟೀಶ್ ಬಂಗಲೆಯಲ್ಲಿ (ಈಗಿನ ಪ್ರವಾಸಿ ಮಂದಿರ) ಪ್ರಾರಂಭವಾಗಿದ್ದ ಸಾಗರ ತಾಲ್ಲೂಕಿನ ಪ್ರಥಮ ನ್ಯಾಯಾಲಯದಲ್ಲಿ ಕುದುರೆ ಮೇಲೆ ಸವಾರಿ ಹೋಗಿ ವಾದ ಮಂಡಿಸುವ ಸ್ಥಳಿಯ ಪ್ರಥಮ ವಕೀಲರಾಗಿದ್ದರು ಇವರ ಪುತ್ರ ನಾರಾಯಣ ಶೆಟ್ಟರು ಆನಂದಪುರಂನಲ್ಲಿ ಆಗ ಆಭರಣದ ಅಂಗಡಿ ಮಾಡಿದ್ದರಂತೆ ಅವರ ಮಕ್ಕಳೇ ಲಕ್ಷ್ಮೀಕಾಂತಪ್ಪ, ಶಣ್ಮುಖ ಶೆಟ್ಟರು, ಹೆಲ್ತ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಕೃಷ್ಣಮೂರ್ತಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2021/07/51.html
ಆಗ ಈಗಿನ ಹೊಸನಗರ (ಆಗಿನ ಹೆಸರು ಕಲ್ಲೂರು ಶೆಟ್ಟಿ ಕೊಪ್ಪ) ಸಂಪರ್ಕಿಸುವ ರಾಜಮಾರ್ಗ ಆನಂದಪುರಂ ಕೋಟೆಯಿಂದ ಈಗಿನ ರೈಲ್ವೆ ಸ್ಟೇಷನ್ ಭಾಗದಿಂದ ಬಸವನ ಬೀದಿ ಮಾರ್ಗವಾಗಿರಬೇಕು ಇದಕ್ಕೆ ಬಂಗಾರಪೇಟೆ ಎಂಬ ಹೆಸರು ಇತ್ತು ಇಲ್ಲಿ ಬೆಳ್ಳಿ - ಬಂಗಾರ - ವಜ್ರ-ವೈಡೂರ್ಯಗಳ ಮಾರಾಟ ಮಾಡುತ್ತಿದ್ದರಂತೆ ಇಲ್ಲೇ ಸುಂಕದವರ ಮನೆ ಇತ್ತಂತೆ.
80 ಜನರ ದೊಡ್ಡ ಕುಟುಂಬ ಪ್ಲೇಗ್ ಕಾಯಿಲೆಯಿಂದ ಹೆಚ್ಚು ಕಡಿಮೆ ನಶಿಸಿ ಹೋಯಿತು ಒಂದೊಂದು ಗುದ್ದಿನಲ್ಲಿ ನಾಲ್ಕು ನಾಲ್ಕು ಶವ ಹಾಕಿ ಸಂಸ್ಕಾರ ಮಾಡಿದರೆಂದು ಆ ಮನೆತನದವರು ನೆನಪು ಮಾಡುತ್ತಾರೆ ಆ ವಂಶದ ಧರ್ಮಯ್ಯ ಶೆಟ್ಟರು ಆ ಮೂಲ ಮನೆಯಲ್ಲೇ ಉಳಿಯುತ್ತಾರೆ ಅವರ ಪುತ್ರ ರುಕ್ಮಯ್ಯ ಅರಣ್ಯ ಇಲಾಖೆ ಪಾರೆಸ್ಟರ್ ಆಗುತ್ತಾರೆ ಅವರ ಮಗ ಪತ್ರಕರ್ತ ಜಗನ್ನಾಥ್ ಅವರ ಸಹೋದರರೇ ಪ್ರಕಾಶ್ ರುಕ್ಮಯ್ಯ.
ಇವರು ಬೆಂಗಳೂರಿನ ರೇ - ಕ್ಯೂ - ಇಂಟರ್ - ಕನೆಕ್ಷನ್ - ಟೆಕ್ನಾಲಜೀಸ್ - ಪ್ರೈವೇಟ್ - ಲಿ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾರೆ.
ಈ ಪದವಿ ಪೂರ್ವ ಕಾಲೇಜು ನಿರ್ಮಾಣದ ಕನಸು ಆನಂದಪುರಂನ ಕೊಡುಗೈ ದಾನಿ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರರ ಪುತ್ರರಾದ ವೆಂಕಟಾಚಲಯ್ಯಂಗಾರ್ ಮತ್ತು ವಿದ್ಯಾಮಂತ್ರಿಗಳು ಸಂಸದರೂ ಆಗಿದ್ದ ಬದರಿನಾರಾಯಣಯ್ಯಂಗಾರರದ್ದು ಅವರೇ ತಮ್ಮ ಸ್ವಂತ ಜಮೀನು ದಾನ ನೀಡಿ ಅವರ ಹಣದಲ್ಲೇ ಪ್ರೌಢ ಶಾಲೆ ನಿರ್ಮಾಣ ಮಾಡಿದ್ದರು ನಂತರ ಪದವಿ ಪೂರ್ವ ಕಾಲೇಜು ತಂದರು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜೋಗ್ ಜಲಪಾತ ನೋಡುವುದಕ್ಕೆ ಈ ಮಾರ್ಗದಲ್ಲಿ ಸಾಗುವಾಗ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸದ ಕಾಗೋಡು ಕೆ.ಜಿ. ಒಡೆಯರ್ ಜೊತೆ ಈ ಶಾಲಾ ಮುಂಬಾಗದಲ್ಲಿ ನೆನಪಿಗಾಗಿ ಸಸಿ ನೆಡುತ್ತಾರೆ ಅವರ ಜೊತೆ ಇಂದಿರಾ ಗಾಂಧಿ ಇರುತ್ತಾರೆ.
ಇದೇ ಶಾಲಾವರಣದಲ್ಲಿ ಆಚಾರ್ಯ ವಿನೋಭಾ ಭಾವೆ ಭೂದಾನ ಚಳವಳಿಯ ಸಭೆ ನಡೆಸುತ್ತಾರೆ, ಭೂದಾನ ಚಳವಳಿಯನ್ನ ಮೈಸೂರು ರಾಜ್ಯದಲ್ಲಿ ನಡೆಸಿಕೊಟ್ಟ ವಿನೋಬಾ ಭಾವೆ ಅವರ ಶಿಷ್ಯ ಸ್ವಾತಂತ್ರ್ಯ ಹೋರಾಟಗಾರರು, ದಾನಿಗಳು ಆದ ಎಣ್ಣೆಕೊಪ್ಪದ ಸರ್ದಾರ್ ಮಲ್ಲಿಕಾರ್ಜುನ ಗೌಡರು ಆನಂದಪುರಂಗೆ ಅವರ ಒಂಟೆತ್ತಿನ ಗಾಡಿಯಲ್ಲಿ ಬಂದಾಗೆಲ್ಲ ಈ ಶಾಲೆಯಲ್ಲೇ ವಸತಿ ಮಾಡುತ್ತಿದ್ದರು.
ಆಧುನಿಕ ಆನಂದಪುರಂನ ಉನ್ನತೀಕರಣಕ್ಕೆ ಕಾರಣರಾದ ಶಿಸ್ತಿನ ಸಿಪಾಯಿ ಸೇವಾದಳದ ಎಸ್.ಆರ್.ಕೃಷ್ಣಪ್ಪನವರೂ ಇದೇ ಶಾಲೆಯಲ್ಲಿ ದೈಹಿಕ ಶಿಕ್ಷರಾಗಿದ್ದರು.
Comments
Post a Comment