#ಕಾಡುಗೆಣಸು ಅಲೆಮಾರಿ ಬುಡಕಟ್ಟು ಜನಾಂಗಗಳು. ವಷ೯ಕ್ಕೆ ಎರೆಡು ಬಾರಿ ಕಾಡು ಗೆಣಸು ಕಾಡಿನಿಂದ ಕಿತ್ತು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರರು ಹಾವು ಗೊಲ್ಲರು ಈಗ ಅಲೆಮಾರಿಗಳ ಜೀವನದಿಂದ ಅರೆ ಅಲೆಮಾರಿಗಳಾಗಿದ್ದಾರೆ. ರಾಜರ ಕಾಲದಲ್ಲಿ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ರಾಜ ತನ್ನ ಅನೇಕ ಆಡಳಿತ ವಿಚಾರಗಳಿಗೆ ಬಳಕೆ ಮಾಡುತ್ತಿದ್ದರು. ಆದ್ದರಿಂದ ಪ್ರತಿ ವರ್ಷ ಮಳೆಗಾಲದ ಮುನ್ನ ಕೆಳದಿ ರಾಜರ ಆನಂದಪುರಂ ಕೋಟೆ ಎದರು ಈ ಎಲ್ಲಾ ಜನಾಂಗಗಳು ಬಂದು ಸೇರಿ ಮಳೆಗಾಲ ಕಳೆದ ನಂತರ ಪುನಃ ತಮ್ಮ ಸಂಚಾರಕ್ಕೆ ಹೊರಡುತ್ತಿದ್ದರು. #tribals #snakerescue #Cowards #sidda #sudugadusidda #korama #dombaru #keladi #Anandapuram #malenadu #ಅಲೆಮಾರಿ #ಬುಡಕಟ್ಟು #Kings #army 90 ರ ದಶಕದ ತನಕ ನಮ್ಮ ಆನಂದಪುರಂನ ಕೆಳದಿ ಅರಸರ ಕೋಟೆ ಎದುರಿನ ಕೆರೆ ಮತ್ತು ಆನಂದಪುರಂ ಕಾಲೇಜು ಎದುರಿನ ಬಯಲು (ಈಗ ಅಲ್ಲಿ ಹಾಸ್ಟೆಲ್ - ಪೆಟ್ರೋಲ್ ಬಂಕ್ - ಪೋಲಿಸ್ ಠಾಣೆ ಆಗಿದೆ) ಪ್ರದೇಶದಲ್ಲಿ ವರ್ಷವಿಡಿ ಸಂಚರಿಸುವ ಅಲೆಮಾರಿ ಬುಡಕಟ್ಟು ಜನಾಂಗದವರೆಲ್ಲ ಮಳೆಗಾಲದ ಮುನ್ನ ಬಂದು ತಂಗುವ ಖಾಯಂ ಜಾಗವಾಗಿತ್ತು. ಇದು ಸುಮಾರು ಶತಮಾನಗಳಿಂದ ನಡೆದು ಕೊಂಡು ಬಂದ ಪದ್ದತಿ ಆಗಿತ್ತು ಬಹುಶಃ ಈ ಅಲೆಮಾರಿ ಬುಡಕಟ್ಟು...