Skip to main content

Posts

Showing posts with the label All restaurants owners should update on cleannes and qwality food

Blog number 1723. ಉಪಹಾರ ಗೃಹಗಳ ಮಾಲಿಕರು ಶುಚಿ-ರುಚಿ - ಸಮಯ ಪಾಲನೆಗೆ ಸ್ವತಃ ಮುಂದೆ ಬರಬೇಕು ಮತ್ತು ಕಾಲಕ್ಕೆ ತಕ್ಕಂತೆ ಹೊಸತನಕ್ಕೆ ಬದಲಾಗಬೇಕು (update)

#ಉಪಹಾರ_ಗೃಹದಲ್ಲಿ_ಶುಚಿ_ರುಚಿ_ಸಮಯಪಾಲನೆ  #ನನ್ನ_ಸ್ವಂತ_ಅನುಭವ #ಹೋಟೆಲ್_ಮಾಲಿಕರೇ_ಹೆಚ್ಚು_ಅಪ್_ಡೇಟ್_ಆಗಬೇಕು.   Mallika Veg https://maps.app.goo.gl/NfwTiaPfy1TBkCK56   ಬೆಳಿಗ್ಗೆ 7ಕ್ಕೆಲ್ಲ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿ ಬಾತ್, ಪಲಾವ್, ಬನ್ಸ್, ಬಿಸಿಬೇಳೆಬಾತ್, ಪಕೋಡ ಮತ್ತು ಹಲಸಿನ ಎಲೆ ಕೊಟ್ಟೆ ಕಡಬು ಗ್ರಾಹಕರಿಗೆ ತಯಾರಿರುತ್ತದೆ.   ಇದಕ್ಕಾಗಿ ಸಿಬ್ಬಂದಿಗಳು ಬೆಳಿಗ್ಗೆ 4 ರಿಂದಲೇ ತಯಾರಿ ನಡೆಸಬೇಕು, ಬೆಳಿಗ್ಗೆ 9ರಿಂದ ಎಲ್ಲಾ ರೀತಿಯ ದೋಸೆಗಳು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಮದ್ಯಾಹ್ನ ಊಟ ತಯಾರಿರುತ್ತದೆ, ಜ್ಯೂಸ್ ಗಳು ಲಭ್ಯವಿದೆ.    ದಕ್ಷಿಣ ಭಾರತದ ಸಂಪ್ರದಾಯಿಕ ಶೈಲಿ ಅಡುಗೆ ನಿಜಕ್ಕೂ ಆರೋಗ್ಯಕರ ಆದರೆ ಬೆಳ್ಳಂಬೆಳಗೆ ಎದ್ದು ಅಡುಗೆ ಮಾಡುವುದಕ್ಕಿಂತ ತಡವಾಗಿ ಬೆಳಿಗ್ಗೆ 11ಕ್ಕೆ ಅಡುಗೆ ಪ್ರಾರಂಭದ ಉತ್ತರ ಬಾರತೀಯ ಅಡುಗೆ ಮತ್ತು ಮಾಂಸ ಹಾರ ಅಡುಗೆ ಕಲಿಯುವವರೇ ಹೆಚ್ಚು ಇದರಿಂದ ದಕ್ಷಿಣ ಭಾರತೀಯ ಅಡುಗೆ ಭಟ್ಟರ ಕೊರತೆ ಇದೆ.   ರುಚಿ ಎಷ್ಟು ಮುಖ್ಯವೊ ಆಹಾರ ಉತ್ಪನ್ನದಲ್ಲಿ ಶುಚಿಯೂ ಅಷ್ಟೆ ಮುಖ್ಯ.    ಗ್ರಾಹಕರ ಕೈ ತೊಳೆಯುವ ಸಿಂಕ್ ನಿಂದ ಪ್ರಾರಂಭ ಆಗಿ ಪೀಠೋಪಕರಣ ಸ್ವಚ್ಚತೆ, ಶೌಚಾಲಯ ಸ್ವಚ್ಚತೆ ಕೂಡ ಅತ್ಯಂತ ಮುಖ್ಯ ಭಾಗ.   ಈಗಲೂ ಅನೇಕ ಪ್ರಸಿದ್ದ ಹೋಟೆಲ್ ಗಳಲ್ಲಿ ಗುಣಮಟ್ಟದ ಲಿಕ್ವಿಡ್ ಸೋಪು ಇಡ...