#ಕಳೆದ_ಲೋಕಸಭಾ_ಚುನಾವಣೆ_ಸಂದರ್ಭದಲ್ಲಿ_ಬರೆದ_ಲೇಖನ #ಇದೇ_ಮುಂದುವರಿದಿದೆ #ಚುನಾವಣಾ_ಆಯೋಗದ_ನಿಯಂತ್ರಣ_ಪರಿಣಾಮಕಾರಿಯಾ? #ರಾಜಕೀಯ_ಪಕ್ಷ_ಮತ್ತು_ಅದರ_ಅಭ್ಯರ್ಥಿಗಳು_ಅದನ್ನು_ಪಾಲಿಸುತ್ತಾರಾ?.... #ಪ್ರಸಕ್ತ_ರಾಜಕಾರಣದ_ಒಳಗುಟ್ಟು ಲೋಕ ಸಭಾ ಚುನಾವಣಾ ಅ೦ಕಣ ಭಾಗ -4. (ಕೆ.ಆರುಣ್ ಪ್ರಸಾದ್) ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ. ಚುನಾವಣಾ ಪ್ರಚಾರದಲ್ಲಿ ಹೈಟೆಕ್ ಭರಾಟೆ. ಮೊದಲೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಕ್ ಕಟ್ಟಿದ ವಾಹನದಲ್ಲಿ ಪ್ರಚಾರ, ಪೋಸ್ಟ್ ರ್ ಅಂಟಿಸುವುದು, ತಾಲ್ಲೂಕ್ ಹೋಬಳಿ ಕೇಂದ್ರದಲ್ಲಿ ಅಭ್ಯಥಿ೯ ಎತ್ತರದ ಅಟ್ಟಣಿಗೆ ಅಂತ ಜಾಗದಲ್ಲಿ ಬಾಷಣ ಅದಕ್ಕೆ ಒಂದು ಮೈಕ್ ವ್ಯವಸ್ಥೆ. ಅಭ್ಯಥಿ೯ಗೆ ಮಾತ್ರ ಕಾರು ನಂತರದ ದಿನದಲ್ಲಿ ಒಂದೊ೦ದು ಕ್ಷೇತ್ರದಲ್ಲಿ ನೂರಾರು ಬಾಡಿಗೆ ಕಾರು, ಪ್ಲೆಕ್ಸ್ ಗಳು ರಾರಾಜಿಸಲು ಪ್ರಾರಂಭವಾಯಿತು. ಈಗ ಚುನಾವಣಾ ಆಯೋಗದ ಕಠಿಣ ನಿಧಾ೯ರಗಳಿಂದ ಪ್ರಚಾರಕ್ಕೆ ನಿಯಮಿತ ವಾಹನ, ಸಭೆಯ ಸಮಯಕ್ಕೆ ಮಾತ್ರ ಪ್ರಚಾರ ಸಾದನ ಅವಕ್ಕೆಲ್ಲ ಸ್ಲಾಬ್ ಮಾದರಿ ಚುನಾವಣಾ ವೆಚ್ಚದ ಲೆಖ್ಖ ಅಭ್ಯಥಿ೯ಯ ಖಾತೆಗೆ ಸೇರುತ್ತದೆ. ಈಗಿನ ಪ್ರತಿ ಚುನಾವಣಾ ಸಭೆಯು ಇವೆಂಟ್ ಮ್ಯಾನೇಜ್ ಮೆಂಟ್ ಗೆ ಒಳಪಟ್ಟಿ ನಡಿಯುತ್ತಿದೆ. ವಿಶಾಲ ಎತ್ತರದ ವೇದಿಕೆ, ಪತ್ರಕತ೯ರಿಗೆ ಪ್ರತ್ಯೇಕ ...