Skip to main content

Posts

Showing posts with the label Jaihind hotel of shetty's

ಒಂದು ಕಾಲದ ಸಾಗರದ ಸುಪ್ರಸಿದ್ಧ ನಾಟಿ ಕೋಳಿ, ಅಕ್ಕಿ ರೊಟ್ಟಿಯ ಶೆಟ್ಟರ ಮದ್ಯ ಬಸ್ ಸ್ಟಾಂಡ್ ಸಮೀಪದ ಜೈಹಿಂದ್ ಹೋಟೆಲ್

#ಸಾಗರ_ಪಟ್ಟಣದ_ಕುಂಟು_ಶೆಟ್ಟರೆಂದೇ_ಪ್ರಸಿದ್ದರಾದ_ಶೆಟ್ಟರ_ನಾಟಿ_ಕೋಳಿ_ಜೈಹಿಂದ್‌_ಹೋಟೆಲ್ #ಅಕ್ಕಿರೊಟ್ಟಿ_ನಾಟಿಕೋಳಿ_ಸಾರಿನ_ಆಕಾಲದ_ಸುಪ್ರಸಿದ್ಧ_ಹೋಟೆಲ್  #ನಾಟಿಕೋಳಿ_ತಿರುವಕಲ್ಲಿನಲ್ಲಿ_ಮಸಾಲೆ_ರುಬ್ಬುವುದು_ಕಟ್ಟಿಗೆ_ಒಲೆಬಳಕೆಯ_ದೇಸಿಹೋಟೆಲ್     ಈಗಿನ ಸಾಗರದ ಮಧ್ಯ ಬಸ್ ಸ್ಟ್ಯಾಂಡ್ ನಲ್ಲಿ ಶೆಟ್ಟರ ನಾಟಿ ಕೋಳಿ ಹೋಟೆಲ್ ಕೆಲವು ದಶಕಗಳ ಕಾಲ ಸುಪ್ರಸಿದ್ಧ ಆಗಿತ್ತು.   ಈ ಶೆಟ್ಟರಿಗಾಗಿಯೇ ನಾಟಿ ಕೋಳಿ ಸಾಕುವವರು ಸಾಗರ ತಾಲ್ಲೂಕಿನ ಹೆಗ್ಗೋಡು ಮತ್ತು ಆವಿನಳ್ಳಿ ಭಾಗಗಳಲ್ಲಿ ಇದ್ದರು.   ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮತ್ತು ಅನ್ನದ ಜೊತೆ ಸಾಗರ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಜನರಿಗೆ ಆಕಷ೯ಣೀಯ ಹೋಟೆಲ್ ಆಗಿತ್ತು.   12 ಅಡಿ ಅಗಲ 50 ಅಡಿ ಉದ್ದದ ಬಾನ೯ಸ್ ಕುಟುಂಬದ ಮಾಲಿಕತ್ವದ ಸಣ್ಣ ಕಟ್ಟಡದ ಜಾಗದಲ್ಲಿ ಇವರ ಹೋಟೆಲ್ ಸುಮಾರು 3 ದಶಕ ಪ್ರಖ್ಯಾತಿ ಪಡೆದಿತ್ತು.   1996 ರ ನಂತರ ಇವರ ವೃದ್ಧಾಪ್ಯದಿಂದ ಮತ್ತು ಸದರಿ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿಗಾಗಿ ಶೆಟ್ಟರು ಹೋಟೆಲ್ ತ್ಯಜಿಸಿದರಂತೆ, ಅವರ ಮೂಲ ಊರಾದ ಕರಾವಳಿಯ ಹಳ್ಳಿಯಲ್ಲಿ ಸುಸಜ್ಜಿತ ಮನೆ ಆಸ್ತಿ ಮಾಡಿದ್ದಾರೆ ಅಂತ ಜನ ಹೇಳುತ್ತಿದ್ದನ್ನ ಕೇಳಿದ್ದೆ.   ನಂತರ ಈ ರೀತಿಯ ಹೋಟೆಲ್ ಸಾಗರದಲ್ಲಿ ಯಾವುದೂ ಬರಲಿಲ್ಲ ಬೆಂಗಳೂರಿನಲ್ಲಿ ಇಂತಹ ಹೊಸರೀತಿಯ ಹೋಟೆಲ್ ಗಳು ಪ್ರಸಿದ್ಧವಾಗಿದೆ.   ಸ್ಥಳಿಯವಾಗಿ ಬೆಳೆಸುವ ನ...