Skip to main content

Posts

Showing posts from January, 2018

# ಅನಂತ ಮೂತಿ೯ ಜವುಳಿ ಅಂಕುರ್ ನಸ೯ರಿ ರಿಪ್ಪನಪೇಟೆ#

# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ# ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .   ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ನನ್ನ ಬೇಟಿ ಮಾಡಲು ಹಲವು ವಷ೯ದ ನಂತರ ಬಂದ ರಿಪ್ಪನ್ ಪೇಟೆಯ ಅಂಕುರ್ ನಸ೯ರಿಯ ಅನಂತಮೂತಿ೯ ಜವುಳಿ ತಿಳಿಸಿದರು. ಇವರ ಸೆಲ್ ನಂಬರ್ 9448554514. ಈ ಬಗ್ಗೆ ಅವರು ಮಾತಾಡುವಾಗ ಅವರಿಗೆ ಗೊತ್ತಾಗದಂತೆ ರೆಕಾಡ್೯ ಮಾಡಿದ ವಿಡಿಯೋ ಇದೆ ನೋಡಿ.   ಇವರ ಹಿನ್ನೆಲೆ ದೊಡ್ಡದಿದೆ ಈ ನಸ೯ರಿ 11 ಎಕರೆ ಪಿತ್ರಾಜಿ೯ತವಾಗಿ ಇವರಿಗೆ ಬಂದ ಆಸ್ತಿ, ಈ ವರೆಗೆ ಸಕಾ೯ರದ ಸಹಾಯಧನ ಪಡೆದಿಲ್ಲ, ಉಚಿತ ವಿದ್ಯುತ್ ಪಡೆದಿಲ್ಲ, ನಸ೯ರಿ ಪ್ರಾರಂಬಿಸಿ 6 ತಿಂಗಳಲ್ಲೇ ಲಾಭ ಪಡೆಯಲು ಪ್ರಾರ೦ಬಿಸಿದ್ದಾರೆ.   ಲಂಚ ಕೊಡುವುದಿಲ್ಲ ಹಾಗು ಲಂಚ ಪಡೆಯುವುದಿಲ್ಲ ಎಂಬ ಇವರ ಶಪತದಿಂದ ಬಹುಸಂಖ್ಯಾತ ಬ್ರಷ್ಟರು 1980ರ ದಶಕದಲ್ಲಿ ಕೆ.ಇ.ಬಿ. ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯಟೀವ್ ಇಂಜಿನೀಯರ್ ಆಗಿದ್ದ ಇವರಿಂದ ತೊಂದರೆ ಪಟ್ಟು ಎಲ್ಲಾ ರೀತಿಯ ಸಾಮ, ಬೇದ ಮತ್ತು ದಂಡ ಪ್ರಯೋಗ ಮಾಡಿದರೂ ಇವರನ್ನ ಬದಲಿಸಲಾಗಲಿಲ್ಲ ಕೊನೆಗೆ ಇವರೇ ಸಕಾ೯ರಿ ಕೆಲಸಕ್ಕೆ ಸಲಾಂ ಹೊಡೆದು ಈ ಸ್ವಂತ ಕೃಷಿ ಉದ್ದಿಮೆ ಸ್ಥಾಪಿಸಿದ್ದಾರೆ.   ಕೆಲಸ ಬಿಟ್ಟ ಬಗ್ಗೆ ನಿಮಗೆ ಈಗಲಾದರೂ ತಪ್ಪು ಅನಿಸಿದೆಯಾ? ಅಂದೆ, ಖಂಡಿತಾ ಇಲ್ಲ ಈ ಸ್ವಾತಂತ್ರ ಅಲ್ಲಿ ಇರುತ್ತಿರಲಿಲ್ಲ ಅಂದರು.   ನಿಮ್ಮ ಪತ್ನಿ

# ಜನ ಪರ ಹೋರಾಟಗಾರ ತೀ.ನಾ. ಶ್ರೀನಿವಾಸ್#

# 'ಜನಪರ ಹೋರಾಟಗಾರ, ಪತ್ರಕತ೯ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್#          ಇವರು ಜಾತ್ಯತೀತ ಹಿನ್ನೆಲೆಯವರು, ಬಡತನದಿಂದ ಬಂದವರು ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ತಾಯಿ ಮಾದರಿ ಶಿಕ್ಷಕಿಯಾಗಿದ್ದರು, ಇವರು ವಿವಾಹ ಆಗಿರುವುದು ಲಿ೦ಗಾಯಿತರನ್ನ.    ಇವರು ಹುಟ್ಟಿದ್ದು ತೀಥ೯ಳ್ಳಿಯ ಛತ್ರ ಕೇರಿಯ ಬಾಡಿಗೆ ಮನೆಯಲ್ಲಿ ಪ್ರೌಡ ಶಿಕ್ಷಣ ಶಿಕಾರಿಪುರದಲ್ಲಿ, ಪದವಿ ಸಾಗರದ ಲಾಲ್ ಬಹುದೂರು ಕಾಲೇಜಿನಲ್ಲಿ, ಇವರ ಹೆಸರ ಮುಂದಿನ ತೀ. ಅಂದರೆ ತೀಥ೯ಹಳ್ಳಿ.    ಸಾಗರದಲ್ಲಿ ವಿದ್ಯಾಥಿ೯ ಮುಖಂಡರಾಗಿದ್ದಾಗ ಸಾಗರ ಪೋಲಿಸ್ ಠಾಣೆಯಲ್ಲಿ ರಾಮ ಎಂಬಾತನನ್ನ ಬೀಮನ ಕೋಣೆ ಸಮೀಪದ ಹಳ್ಳಿಯಿಂದ ಕಳ್ಳತನದ ದೂರಿನನ್ವಯ ಕರೆ ತಂದು ಬಾಯಿ ಬಿಡಿಸಲು ಆ ಕಾಲದ ಶಿಕ್ಷೆ ನೀಡಿದಾಗ ರಾಮ ಸತ್ತು ಹೋಗಿದ ಲಾಕ್ಅಪ್ ಡೆತ್ ಪ್ರಕರಣದಲ್ಲಿ ಇಡೀ ವಿದ್ಯಾಥಿ೯ ಸಮುದಾಯವನ್ನ ಚಳವಳಿಗೆ ತಂದು ನ್ಯಾಯಕ್ಕಾಗಿ ಹೋರಾಟ ಮಾಡಿದ ತೀ.ನಾ.ಶ್ರೀನಿವಾಸ್ ಸಾಗರದ ಮನೆ ಮಾತಾದರು ಯುವಕರಿಗೆ ಆದಶ೯ರಾದರು.    ನಂತರ ಕಾಗೋಡು ಹೋರಾಟದ ನೇತಾರರಾದ  ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ ದಿನ ಪತ್ರಿಕೆ ಮುಖಾಂತರ ಪತ್ರಕತ೯ ರಾಗಿ ಜನಪ್ರಿಯರಾದರು ನಂತರ ಇದೇ ಪತ್ರಿಕೆ ಇವರ ಸಂಪಾದಕತ್ವದಲ್ಲಿ ತಾಲ್ಲೂಕಿನಲ್ಲಿ ಮನೆ ಮಾತಾಯಿತು, ಎಲ್ಲಾ ಹೋರಾಟಗಾರರಿಗೆ ಇವರ ಕಛೇರಿ ಮನೆ ಆಯಿತು.   ನಂತರದ ದಿನದಲ್ಲಿ ಇವರನ್ನ ಜಮೀಲ್ ಎಂಬ ದುರುಳ ಸಬ್ ಇನ್ಸ್ಪಕ್ಟರ್ ಠಾಣೆಯಲ್

#ಕವಿಶೈಲಕ್ಕೆ ಪ್ರತಿ ವಷ೯ 1.60 ಲಕ್ಷ ಜನ ಬೇಟಿ ನೀಡುತ್ತಾರೆ.#

# ನನ್ನ ಕವಿ ಕುವೆಂಪು ಅವರ 113 ರ ಹುಟ್ಟು ಹಬ್ಬ ಈ ದಿನ. (ಜನನ 29- ಡಿಸೆಂಬರ್- 1904, ಮರಣ 11 ಡಿಸೆಂಬರ್ 1994).# ಮೊನ್ನೆ ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಇಲ್ಲಿನ ವಿವರ ನೀಡುತ್ತೀರಾ ಅಂದೆ ಖಂಡಿತಾ ಅಂದ ಅವರ ಬಾಯಲ್ಲಿ ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳು, ಕವನಗಳ ಸಾಲು ಸಾಲು, ಸಂಬಂದಿಗಳ ಹೆಸರು, ಮಕ್ಕಳು ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ಬಂತು, ಇದ ಕೇಳಿ ಸಂತೋಷ ಆಯಿತು ಇವರ ನೆನಪಿನ ಶಕ್ತಿ ನೋಡಿ ಆಶ್ಚಯ೯ವಾಯಿತು.   ಇವರಿಗೆ ಟ್ರಸ್ಟ ಮಾಸಿಕ ವೇತನ 10 ಸಾವಿರ ನೀಡುತ್ತದೆ, ವಷ೯ದಿಂದ ವಷ೯ಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯ೦ತೆ, ಈಗ ವಾಷಿ೯ಕ ಒಂದು ಲಕ್ಷದ ಅರವತ್ತು ಸಾವಿರ ಜನ ಭೇಟಿ ನೀಡುತ್ತಿದ್ದಾರಂತೆ.   ಮಳೆಗಾಲದಲ್ಲಿ ಬರುವವರು ಕಡಿಮೆ ಇರಬೇಕು ಅಂದೆ ಅದಕ್ಕೆ ಅವರು ಹೇಳಿದ್ದು ಮಳೆಗಾಲದಲ್ಲಿ  ಬೆಂಗಳೂರಿನವರು ಅತಿ ಹೆಚ್ಚು ಬರುತ್ತಾರೆ ಅಂದರು. ಬರುವಾಗ ಗೈಡ್ಗೆ ಹಣ ಕೊಡಲು ಹೋದಾಗ ನಿರಾಕರಿಸಿದರು.

ಸಾಲ ಮೇಳದ ಬಡವರ ಬಂದು ಜನಾದ೯ನ ಪೂಜಾರಿ,

#ಜನಾದ೯ನ ಪೂಜಾಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#.            ಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು, ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.   ನನ್ನ ಅಜ್ಜಿಯನ್ನ ನೋಡಿದ್ದ ನಮ್ಮ ಊರ ಷಂಷಣ್ಣ (ಷoಷಾದ್ ಸಾಬ್) ಕೆರೆಯಲ್ಲಿ ಮೀನು ಷಿಕಾರಿಯಲ್ಲಿ ಎತ್ತಿದ ಕೈ, ಗಾರೆ ಕೆಲಸ ಮತ್ತು ಕೃಷಿ ಕೆಲಸದವರಾದ ಅವರದ್ದು ಬಡತನವಿದ್ದರೂ ಶಿಸ್ತು ಮತ್ತು ಸತ್ಯದ ಜೀವನ ಅವರ ಮಾತಲ್ಲಿ ಪೂಜಾರಿ ಬಾಷಣ.....    ದೇಶದ ಬಡವರಿಗೆ ಸಾಲ ಕೊಟ್ಟು ಮುಂದೆ ತರ ಬೇಕಂತ ಬಡವರಿಗೆ ಸಾಲ ಕೊಡಿಸ್ತಿದಾರಂತೆ ಆದರೆ ಸೂಟು ಬೂಟು ಏರ್ ಕಂಡಿಷನ್ ರೂಂ