Skip to main content

# ಜನ ಪರ ಹೋರಾಟಗಾರ ತೀ.ನಾ. ಶ್ರೀನಿವಾಸ್#

# 'ಜನಪರ ಹೋರಾಟಗಾರ, ಪತ್ರಕತ೯ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್#
    
    ಇವರು ಜಾತ್ಯತೀತ ಹಿನ್ನೆಲೆಯವರು, ಬಡತನದಿಂದ ಬಂದವರು ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ತಾಯಿ ಮಾದರಿ ಶಿಕ್ಷಕಿಯಾಗಿದ್ದರು, ಇವರು ವಿವಾಹ ಆಗಿರುವುದು ಲಿ೦ಗಾಯಿತರನ್ನ.
   ಇವರು ಹುಟ್ಟಿದ್ದು ತೀಥ೯ಳ್ಳಿಯ ಛತ್ರ ಕೇರಿಯ ಬಾಡಿಗೆ ಮನೆಯಲ್ಲಿ ಪ್ರೌಡ ಶಿಕ್ಷಣ ಶಿಕಾರಿಪುರದಲ್ಲಿ, ಪದವಿ ಸಾಗರದ ಲಾಲ್ ಬಹುದೂರು ಕಾಲೇಜಿನಲ್ಲಿ, ಇವರ ಹೆಸರ ಮುಂದಿನ ತೀ. ಅಂದರೆ ತೀಥ೯ಹಳ್ಳಿ.
   ಸಾಗರದಲ್ಲಿ ವಿದ್ಯಾಥಿ೯ ಮುಖಂಡರಾಗಿದ್ದಾಗ ಸಾಗರ ಪೋಲಿಸ್ ಠಾಣೆಯಲ್ಲಿ ರಾಮ ಎಂಬಾತನನ್ನ ಬೀಮನ ಕೋಣೆ ಸಮೀಪದ ಹಳ್ಳಿಯಿಂದ ಕಳ್ಳತನದ ದೂರಿನನ್ವಯ ಕರೆ ತಂದು ಬಾಯಿ ಬಿಡಿಸಲು ಆ ಕಾಲದ ಶಿಕ್ಷೆ ನೀಡಿದಾಗ ರಾಮ ಸತ್ತು ಹೋಗಿದ ಲಾಕ್ಅಪ್ ಡೆತ್ ಪ್ರಕರಣದಲ್ಲಿ ಇಡೀ ವಿದ್ಯಾಥಿ೯ ಸಮುದಾಯವನ್ನ ಚಳವಳಿಗೆ ತಂದು ನ್ಯಾಯಕ್ಕಾಗಿ ಹೋರಾಟ ಮಾಡಿದ ತೀ.ನಾ.ಶ್ರೀನಿವಾಸ್ ಸಾಗರದ ಮನೆ ಮಾತಾದರು ಯುವಕರಿಗೆ ಆದಶ೯ರಾದರು.
   ನಂತರ ಕಾಗೋಡು ಹೋರಾಟದ ನೇತಾರರಾದ  ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ ದಿನ ಪತ್ರಿಕೆ ಮುಖಾಂತರ ಪತ್ರಕತ೯ ರಾಗಿ ಜನಪ್ರಿಯರಾದರು ನಂತರ ಇದೇ ಪತ್ರಿಕೆ ಇವರ ಸಂಪಾದಕತ್ವದಲ್ಲಿ ತಾಲ್ಲೂಕಿನಲ್ಲಿ ಮನೆ ಮಾತಾಯಿತು, ಎಲ್ಲಾ ಹೋರಾಟಗಾರರಿಗೆ ಇವರ ಕಛೇರಿ ಮನೆ ಆಯಿತು.
  ನಂತರದ ದಿನದಲ್ಲಿ ಇವರನ್ನ ಜಮೀಲ್ ಎಂಬ ದುರುಳ ಸಬ್ ಇನ್ಸ್ಪಕ್ಟರ್ ಠಾಣೆಯಲ್ಲಿ ಇವರ ಮೇಲೆ ಮಾಡಿದ ಹಲ್ಲೆ ವಿದಾನ ಸೌದದಲ್ಲೂ ಮೊಳಗಿತು ಈ ಎಲ್ಲಾ ಹೋರಾಟಕ್ಕೆ ಆಗ ಶಿವಮೊಗ್ಗದ ಪ್ರಜಾವಾಣಿ ವರದಿಗಾರ ಜಿ.ಬಸವರಾಜ್, ಕವಿಶೈಲದ ದಿವಾಕರ್, ಪ್ರಕೃತಿ ಮುದ್ರಣದ ಪುಟ್ಟಯ್ಯ ತುಂಬಾ ಸಹಕಾರ ನೀಡಿದರು ಸಾಗರದಲ್ಲಿ ಶಿವಾನಂದ ಕುಗ್ವ, ವಿಶ್ವನಾಥ ಗೌಡ ಅದರಂತೆ, ಸಿಗರೇಟು ನಾಗರಾಜ್ ಪ್ರಮುಖ ಪಾತ್ರವಹಿಸಿದ್ದರು.
  ನಂತರ ಪಕ್ಷೇತರರಾಗಿ ಸಾಗರಪುರಸಭೆಗೆ ಆಯ್ಕೆ ಆಗಿ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾದರು ಇವರನ್ನ ಹಿರಿಯ ಕಾಂಗ್ರೆಸ್‌ ಮುಖ೦ಡರಾದ ಆಹಮದ ಆಲಿ ಖಾನ್ ಸಾಹೇಬರು, ಪುತ್ತುರಾಯರು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಯಶಸ್ವಿಯಾದರು, ಕಾಗೋಡು ತಿಮ್ಮಪ್ಪರ ಜೊತೆ ಸೇರಿ ಈಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
   ಈಗಲೂ ಇವರ ಹೋರಾಟ, ಸಭೆಯನ್ನ ಮಂತ್ರ ಮುಗ್ದರನ್ನಾಗಿಸುವ ಇವರ ಮಾತಿನ ಮೋಡಿಗೆ ಸಾವಿರಾರು ಜನ ಇವರನ್ನ ಪ್ರೀತಿಸಿದರೆ ಇಂತಹ ಅಹ೯ತೆ ಇಲ್ಲದ ನಾಯಕರುಗಳು ಇವರನ್ನ ದೂರುವ ಅವಮಾನಿಸುವ ಅನೇಕ ಘಟನೆ ನಡೆದಿದೆ.

  ಈ ಪೋಟೋದಲ್ಲಿ ಇವರ ಕೆನ್ನೆಯ ಮೇಲೆ ಒಂದು ಚಾಕುವಿನ ಗುರುತಿದೆ ಅದರ ಹಿನ್ನೆಲೆ ಇವರು ಆಗ ಯಾವುದೇ ಜೀವನ ಭದ್ರತೆ, ಕಾಮಿ೯ಕ ಕಾನೂನು ರಕ್ಷಣೆ ಇಲ್ಲದ ಸರಾಯಿ ಮಾರಾಟಗಾರರನ್ನ ರಾಜ್ಯದಾದ್ಯಂತ ಸಂಘಟಿಸಲು ಪ್ರಾರOಬಿಸಿದರು ಇದರಿ೦ದ ಸರಾಯಿ ಗುತ್ತಿಗೆದಾರರು ಸಿಟ್ಟಾದರು, ಅಭಕಾರಿ ಅಧಿಕಾರಿಗಳು ಅವರಿಗೇ ಬೆಂಬಲಿಸಿದರು ಅವರೆಲ್ಲ ಸೇರಿ ತೀ.ನಾ.ಶ್ರೀನಿವಾಸರ ಕೊಲ್ಲುವ ಪ್ರಯತ್ನ ಮಾಡಿದರು ಸಾಗರದಿಂದ ಸಿಸಿ೯ಗೆ ಸರಾಯಿ ಮಾರಾಟಗಾರರ ಸಭೆಗೆ ಇವರೆಲ್ಲ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಹೋಗುವಾಗ ಮಾಗ೯ ಮಧ್ಯೆ ಗುಂಡಾಗಳು ಇವರಿಗೆ ಚಾಕುನಿಂದ ಹಲ್ಲೆ ಮಾಡಿದರು, ಇವರೆಲ್ಲ ಸತ್ತರೆಂದು ಅವರು ಹೋದ ಮೇಲೆ ಇವರನ್ನ ಹುಬ್ಬಳಿ ಆಸ್ಪತ್ರೆಗೆ ಸೇರಿಸಿದಾಗ ಬದುಕಿ ಬಂದರು ಇವರೊಡನೆ ಸಾಗರದ ಜೇಮ್ಸ್, ಪ್ರಾನ್ಸಿಸ್ ರೋಡಿ)ಗಸ್ ಮತ್ತು ಮಂಜು ಆಸ್ಪತ್ರೆ ಸೇರಿದ್ದರು.

ಪಕ್ಷವೊಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಆ ಪಕ್ಷದ ಜಿಲ್ಲಾ ಅಧ್ಯಕ್ಷ ಒಂದು ರೀತಿ ಜಿಲ್ಲಾ ಮಂತ್ರಿಗಳ0ತೆ ಆಗಿ ಬಿಡುತ್ತಾರೆ, ವಗಾ೯ವಣೆ ವಶೀಲಿಬಾಜಿಗೆ ಮು೦ದಾಗುತ್ತಾರೆ, ಸಕಾ೯ರಿ ಕಾಯ೯ಕ್ರಮದಲ್ಲಿಯೂ ವೇದಿಕೆಯಲ್ಲಿ ಅಸೀನರಾಗುತ್ತಾರೆ ಆದರೆ ತೀ.ನಾ.ಶ್ರೀನಿವಾಸ್ ತತ್ವ ಸಿದ್ದಾoತಕ್ಕೆ ಕಟ್ಟುಬಿದ್ದವರು ಅವರ ಸಿದ್ದಾಂತ ಕಾ೦ಗ್ರೆಸ್ ನ ಕೆಲವರಿಗೆ ಪಥ್ಯ ಆಗವುದಿಲ್ಲ.
   ಮೊನ್ನೆ ಮುಖ್ಯಮ೦ತ್ರಿ ಜಿಲ್ಲೆಗೆ ಬಂದಾಗ ಇವರನ್ನ ಅಧಿಕಾರಿಗಳು ವೇದಿಕೆಗೆ ಆಹವಾನಿಸಿದರು ನಯವಾಗಿ ನಿರಾಕರಿಸಿ ಮುಖ್ಯಮಂತ್ರಿಗಳನ್ನ ಪಕ್ಷದ ವೇದಿಕೆಯಲ್ಲಿ ಮಾತ್ರ ಹಂಚಿಕೊಂಡರು ಈ ಮೂಲಕ ಜಿಲ್ಲೆಯಲ್ಲಿ ಹೊಸ ಮಾದರಿಗೆ ನಾಂದಿ ಆಗಿದ್ದಾರೆ.ಇವರ ಸೆಲ್ ನಂಬರ್ 9448774670

Comments

  1. ಇವರು ನೇರ, ದಿಟ್ಟ ನುಡಿಗಳಿಂದ ಮನೆಮಾತಾದವರು...ತಪ್ಪು ಯಾರದ್ದೇ ಇರಲಿ, ತಮ್ಮವರದ್ದೇ ಇರಲಿ ಮುಲಾಜಿಲ್ಲದೇ ಕಂಡಿಸುತ್ತಾರೆ..ನಗರಸಭೆಯ ಅಧ್ಯಕ್ಷರಾಗಿದ್ದಾಗ ಇವರು ಸರ್ಕಾರಿ ವಾಹನಕ್ಕೆ ಕಾಯದೇ ಬಳಸದೇ ಊರನ್ಬು ನಡೆದುಕೊಂಡೇ ಸುತ್ತುತ್ತಿದ್ದರು...ಇವರು ನಿಜಕ್ಕೂ ಇತರರಿಗೆ ಮಾದರಿ...

    ReplyDelete
  2. ಶ್ರೀನಿವಾಸ್ ಅವರ ಹೋರಾಟ, ಜನಪರ ಕಾಳಜಿ ನನಗೆ ಇಷ್ಟವಾಯಿತು. ಅವರು ಕಾಂಗ್ರಸ್ ಜಿಲ್ಲಾಧ್ಯಕ್ಷರಾಗಿದ್ದಾಗ ಅವರ ಚಟುವಟಿಕೆಯನ್ನು ಬಹಳ ಹತ್ತಿರದಿಂದ ಕಂಡೆ. ಜಿಲ್ಲಾಧಿಕಾರಿ‌ ಕಚೇರಿ ಬಳಿ ಇದ್ದಾಗ ಯಾರಾದರು ಮನವಿ ಸಲ್ಲಿಸಲು ಬಂದರೆ ಅದರ ಬಗ್ಗೆ ಮಾಹಿತಿ ತಿಳಿದು, ಯಾರ ಬಳಿ ಹೋಗಬೇಕು, ಏನು ಮಾಡಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಜೊತೆಗೆ ಸಾಧ್ಯವಾದರೆ ಅವರೆ ಖುದ್ದಾಗಿ ಹೋಗುತ್ತಿದ್ದರು.
    ಸದಾ ಬಡವರ ಪರ ಮಿಡಿಯುವ ಮನಸ್ಸು ಅವರದ್ದು. ಆದರೆ ಕಾಂಗ್ರೆಸ್ಸಿಗರಿಗೆ ಇಂತವರು ಬೇಕಾಗಿಲ್ಲ, ಶೋಕಿ ಮಾತನಾಡಿಕೊಂಡು, ಕೆಲಸ ಮಾಡದೆಯೂ ಪ್ರಚಾರ ಪಡೆಯುತ್ತಾ, ಮಂತ್ರಿ ಮಹೋದಯರಿಗೆ ಬಹುಪರಾಕ್ ಹೇಳುತ್ತಾ ಬಕೆಟ್ ಹಿಡಿಯುವವರು ಬೇಕು.

    ಶ್ರೀನಿವಾಸ್ ಅವರು ನಮ್ಮ ಸ್ನೇಹಿತರು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ
    ಸಂತೋಷ್ ಕಾಚಿನಕಟ್ಟೆ, ಶಿವಮೊಗ್ಗ

    ReplyDelete

Post a Comment

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...