Skip to main content

Posts

Showing posts from July, 2017

ಹಾಸ್ಯ ನಟ ಬಾಲಕೃಷ್ಣ ರಂಗ ಮಂದಿರ ಆನಂದಪುರ೦ನಲ್ಲಿ ನಿಮಿ೯ಸಿದ ನೆನಪು.

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ, ಪೋಷಕ ನಟ ಟಿ.ಎನ್. ಬಾಲಕೃಷ್ಣ ಕುರಿತ ವಿಶೇಷ ಸಂಗ್ರಹಿತ ಲೇಖನ : ಟಿ.ಎನ್.ಬಾಲಕೃಷ್ಣ (ಬಾಲಣ್ಣ) : ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ. ಹಿನ್ನೆಲೆ : ಬಾಲಕೃಷ್ಣರ ಜನನ ನವೆಂಬರ್ ೨,೧೯೧೧ ರಂದು ಹಾಸನ ಜಲ್ಲೆಯ ಅರಸೀಕೆರೆಯಲ್ಲಿ ಆಯಿತು. ಇವರ ತಂದೆ ತಾಯಿಯರು ದಿನಗೂಲಿಯಲ್ಲಿ ಜೀವಿಸುತ್ತಿದ್ದರು. ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ. ಇದ್ದಕ್ಕಿದ್ದಂತೆ ತಂದೆಯು ಕಾಯಿಲೆ ತೀವ್ರ ಸ್ವರೂಪ ಪಡೆದಾಗ ತಾಯಿ ಕಂಡ ಕಂಡಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಲು ಶ್ರಮ ಪಟ್ಟಳು. ಅದೂ ಸಾಲದಾದಾಗ ಬೇರೆ ದಾರಿ ಕಾಣದೆ ಅರಸೀಕೆರೆಯ ಮಂಡಿ ವ್ಯಾಪಾರಿಯ ಉಪ ಪತ್ನಿಗೆ ಮಗು ಬಾಲಕೃಷ್ಣನನ್ನು ಎಂಟು ರೂಪಾಯಿಗೆ ಮಾರಿದಳು. ಆ ಸಾಕು ತಾಯಿ ಬಾಲಕನನ್ನು ಅರಸೀಕೆರೆಯ ಶಾಲೆಗೆ ಸೇರಿಸಿದಳು. ಆದರೆ ಎಂಟನೆಯ ವಯಸ್ಸಿಗೆ ಬಾಲಣ್ಣನ ಶ್ರವಣಶಕ್ತಿ ಸಂಪೂರ್ಣ ಮಾಯವಾಯಿತು. ಕಲಿಕೆ ಕಷ್ಟವಾಯಿತು. ಲೋಯರ್ ಸೆಕಂಡರಿ ದಾಟುವುದೇ ಕಷ್ಟವಾದಾಗ ಕಲೆಯ ಕಡೆಗೆ ಆಸಕ್ತಿ ಹೊರಳಿತು. ಸ್ನೇಹಿತರ ಜೊತೆಗೂಡಿ ನಾಟಕವಾಡುವ ಹವ್ಯಾಸ ಬಲವಾಯಿತು. ಒಮ್ಮೆ ಸಾಕು ತಂದೆಯ ಜೇಬಿನಿಂದ

*ಹುರುಳಿಕಟ್ಟು ಹಳ್ಳಿಮನೆ ಶೈಲಿ ಹೋಟೆಲ್ ಸತ್ಯನಾರಾಯಣ ಸೀತಾನದಿ*

# ಹುಳ್ಳಿ ಕಟ್ಟು( ಹುರುಳಿ)# # ಹಳ್ಳಿಮನೆ ಈ ಸತ್ಯನಾರಾಯಣ ಸೀತಾನದಿ ಹೋಟೆಲ್# ತೀಥ೯ಳ್ಳಿ ಮಾಗ೯ವಾಗಿ ಮಣಿಪಾಲ್ ಉಡುಪಿ ಹೋಗುವಾಗ ಆಗುಂಬೆ ಘಾಟಿ ಇಳಿದ ನಂತರ ಸೋಮೆಶ್ವರ ದಾಟಿದ ನಂತರ ಬಲಭಾಗದಲ್ಲಿ ಶ್ರೀ ಸತ್ಯನಾರಾಯಣ ಸೀತಾನದಿ ಎಂಬ ಹೋಟೆಲ್ ಇದೆ ಇಲ್ಲಿ ನೀರು ದೊಸೆ, ಅವಲಕ್ಕಿ ಮೊಸರು, ಬನ್ಸ್ ಇತ್ಯಾದಿ ತಿಂಡಿ ತಿಂದು ಕಾಪಿ ಕುಡಿದ ಮೇಲೆ ನಮ್ಮ ಕಣ್ಣು ಅಲ್ಲಿ ಜೋಡಿಸಿದ ವಸ್ತುಗಳು ಆ ವಸ್ತುಗಳ ಬಗ್ಗೆ ಬರೆದು ಅಂಟಿಸಿದ ವಿವರಣೆ ಮೇಲೆ ಬೀಳಲೇ ಬೇಕು ಆ ರೀತಿ ಜೋಡಿಸಿದ್ದಾರೆ ನಂತರ ನೀವು ಅದನ್ನ ಖರೀದಿಸಿಯೇ ಹೋಗುವುದು ಗ್ಯಾರಂಟಿ ಯಾಕೆಂದರೆ... ....      ಎಲ್ಲೂ ಸಿಗದ ಉಪ್ಪಿನ ನೀರಲ್ಲಿ ಸಂರಕ್ಷಿಸಿದ ಕಳಲೆ, ಹಲಸಿನ ಗುಜ್, ಮಾವು.     ಮೂರುಗನ ಹುಳಿ ಮತ್ತು ಅದರ ಉತ್ಪನ್ನಗಳು, ಎಲ್ಲಾ ರೀತಿಯ ಮನೇಲಿ ತಯಾರಿಸಿದ ಹಪ್ಪಳಗಳು, ಬಾಯಲ್ಲಿ ನೀರು ತರಿಸುವ ಉಪ್ಪಿನ ಕಾಯಿಗಳು, ಸಂಡಿಗೆಗಳು.     ಚಿಪ್ಸಗಳು, ಚಕ್ಕುಲಿ, ಅತ್ರಾಸು,ಹಲ್ವಾ, ವಿವಿದ ರೀತಿಯ ಉಂಡೆಗಳು.   ವಿಶೇಷವಾಗಿ ಇವರ ಅತ್ತೆ ತಯಾರಿಸುವ ಹುರುಳಿ ಕಟ್ಟಿನ ಲೇಹ್ಯ ಸಿಗುತ್ತೆ ಇದನ್ನ ತಯಾರಿಸಲು 2ಕೆ.ಜಿ.ಕಪ್ಪು ಹುರುಳಿ ಬೇಕು ಅದನ್ನ ಬೇಯಿಸಲು ಕಟ್ಟಿಗೆ, ಎರಡು ದಿನ ಬೇಯಿಸಿದ ನಂತರ ಅದರಿಂದ 200 ಗ್ರಾಂ ಗಟ್ಟಿ ಲೇಹ್ಯ ಸಿಗುತ್ತೆ ಇದನ್ನ 200 ರೂಪಾಯಿಗೆ ಮಾರುತ್ತಾರೆ.      ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೃಷಿಗಾಗಿ ಸಾಕುತ್ತಿದ್ದ ಎತ್ತುಗಳಿಗೆ ಹುರುಳಿ ಬೇಯಿಸಿ ಹಾಕುತ್ತಿದ್ದ ಕಾಲವಿತ