# ಹುಳ್ಳಿ ಕಟ್ಟು( ಹುರುಳಿ)#
# ಹಳ್ಳಿಮನೆ ಈ ಸತ್ಯನಾರಾಯಣ ಸೀತಾನದಿ ಹೋಟೆಲ್#
ತೀಥ೯ಳ್ಳಿ ಮಾಗ೯ವಾಗಿ ಮಣಿಪಾಲ್ ಉಡುಪಿ ಹೋಗುವಾಗ ಆಗುಂಬೆ ಘಾಟಿ ಇಳಿದ ನಂತರ ಸೋಮೆಶ್ವರ ದಾಟಿದ ನಂತರ ಬಲಭಾಗದಲ್ಲಿ ಶ್ರೀ ಸತ್ಯನಾರಾಯಣ ಸೀತಾನದಿ ಎಂಬ ಹೋಟೆಲ್ ಇದೆ ಇಲ್ಲಿ ನೀರು ದೊಸೆ, ಅವಲಕ್ಕಿ ಮೊಸರು, ಬನ್ಸ್ ಇತ್ಯಾದಿ ತಿಂಡಿ ತಿಂದು ಕಾಪಿ ಕುಡಿದ ಮೇಲೆ ನಮ್ಮ ಕಣ್ಣು ಅಲ್ಲಿ ಜೋಡಿಸಿದ ವಸ್ತುಗಳು ಆ ವಸ್ತುಗಳ ಬಗ್ಗೆ ಬರೆದು ಅಂಟಿಸಿದ ವಿವರಣೆ ಮೇಲೆ ಬೀಳಲೇ ಬೇಕು ಆ ರೀತಿ ಜೋಡಿಸಿದ್ದಾರೆ ನಂತರ ನೀವು ಅದನ್ನ ಖರೀದಿಸಿಯೇ ಹೋಗುವುದು ಗ್ಯಾರಂಟಿ ಯಾಕೆಂದರೆ... ....
ಎಲ್ಲೂ ಸಿಗದ ಉಪ್ಪಿನ ನೀರಲ್ಲಿ ಸಂರಕ್ಷಿಸಿದ ಕಳಲೆ, ಹಲಸಿನ ಗುಜ್, ಮಾವು.
ಮೂರುಗನ ಹುಳಿ ಮತ್ತು ಅದರ ಉತ್ಪನ್ನಗಳು, ಎಲ್ಲಾ ರೀತಿಯ ಮನೇಲಿ ತಯಾರಿಸಿದ ಹಪ್ಪಳಗಳು, ಬಾಯಲ್ಲಿ ನೀರು ತರಿಸುವ ಉಪ್ಪಿನ ಕಾಯಿಗಳು, ಸಂಡಿಗೆಗಳು.
ಚಿಪ್ಸಗಳು, ಚಕ್ಕುಲಿ, ಅತ್ರಾಸು,ಹಲ್ವಾ, ವಿವಿದ ರೀತಿಯ ಉಂಡೆಗಳು.
ವಿಶೇಷವಾಗಿ ಇವರ ಅತ್ತೆ ತಯಾರಿಸುವ ಹುರುಳಿ ಕಟ್ಟಿನ ಲೇಹ್ಯ ಸಿಗುತ್ತೆ ಇದನ್ನ ತಯಾರಿಸಲು 2ಕೆ.ಜಿ.ಕಪ್ಪು ಹುರುಳಿ ಬೇಕು ಅದನ್ನ ಬೇಯಿಸಲು ಕಟ್ಟಿಗೆ, ಎರಡು ದಿನ ಬೇಯಿಸಿದ ನಂತರ ಅದರಿಂದ 200 ಗ್ರಾಂ ಗಟ್ಟಿ ಲೇಹ್ಯ ಸಿಗುತ್ತೆ ಇದನ್ನ 200 ರೂಪಾಯಿಗೆ ಮಾರುತ್ತಾರೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೃಷಿಗಾಗಿ ಸಾಕುತ್ತಿದ್ದ ಎತ್ತುಗಳಿಗೆ ಹುರುಳಿ ಬೇಯಿಸಿ ಹಾಕುತ್ತಿದ್ದ ಕಾಲವಿತ್ತು ಅವಾಗ ಹುರುಳಿ ಬೇಯಿಸಿದ ನೀರು ಹುರುಳಿ ಕಟ್ಟು ಹಳ್ಳಿಯ ಅನೇಕರ ಮನೆಗೆ ಉಚಿತವಾಗಿ ಸಿಗುತ್ತಿತ್ತು, ಹುಳ್ಳಿ ಕಟ್ಟುಗೆ ಅಮಟೆಕಾಯಿ ಅಥವ ಮಾವಿನಕಾಯಿ ಹಾಕಿ ನೀರುಳ್ಳಿ, ಹಸಿ ಮೆಣಸು ಕೊಚ್ಚಿ ಹಾಕಿ ಬೇಯಿಸಿ ಬತ್ತಿಸಿ ಕೊನೆಗೆ ಒಗ್ಗರಣೆ ಹಾಕಿ ಇಳಿಸಿ ಬಿಸಿ ಅನ್ನದೊಂದಿಗೆ ಊಟ ಪ್ರಾರಂಬಿಸಿದರೆ ಅದರ ರುಚಿ, ಆರೋಮ ಯಾವ 5 ಸ್ಟಾರ್ ಗೂ ಕಡಿಮೆ ಇರಲ್ಲ ಆದರೆ ಮಲೆನಾಡು ಬದಲಾಗಿ ಎತ್ತುಗಳ ಜಾಗದಲ್ಲಿ ಟಿಲ್ಲರ್ ಬಂದು ಹುರುಳಿ ಕಟ್ಟು ಅನೇಕರು ಮರೆತಿದ್ದಾರೆ, ಹಾಗಾಗಿ ಇಲ್ಲಿನ ಹುರುಳಿ ಕಟ್ಟಿನ ಪೇಸ್ಟ್ ಗೆ ಎಲ್ಲಿಲ್ಲದ ಬೇಡಿಕೆ.
ಹೀಗೆ ಇಲ್ಲಿ ವಿಭಿನ್ನ ರುಚಿ ಅರಸುವ ಮಲೆನಾಡಿಗರು ತಪ್ಪದೆ ಬೇಟಿ ನೀಡುತ್ತಾರೆ ಮನೆಗೆ ಬಂದ ಅತಿಥಿಯಂತೆ ಆದರಿಸಿ ಉಪಚರಿಸುವ ಇದರ ಮಾಲಿಕ ದಂಪತಿಗಳು ಅಭಿನಂದನಾಹ೯ರು, ಇವರದ್ದು ವ೦ಶ ಪಾರಂಪರೆಯ ಉದ್ಯಮ ಈಗಿನ ಕೈಗಾರಿಕಾ ಕರಣ, ಬ್ರಾ೦ಡ್ ಮಹಿಮೆ ಮತ್ತು ಜಂಕ್ ಫುಡ್ ಕಾಲದಲ್ಲೂ ಇವರು ನಡೆಸುತ್ತಿರುವ ಉದ್ದಿಮೆಗೆ ಯಾವ ಪ್ರಶಸ್ತಿ, ಸಹಾಯಧನ ನೀಡಿದರೂ ಕಡಿಮೆ ಆದರೆ ಅದು ಸಿಗುವುದೇ?
ನೀವೂ ಬೇಟಿ ನೀಡಿ.
ಇದರ ಮಾಲಿಕರ ಹೆಸರು ಅನಿಲ್
ಇವರ ಸೆಲ್ ನಂಬರ್ 9480230405,9448247128.
Comments
Post a Comment