Skip to main content

Posts

Showing posts with the label Wishing speedy recovery of Sringeri Srinivasmurthy

Blog number 2100. ಶೃಂಗೇರಿ ಶ್ರೀನಿವಾಸ ಮೂರ್ತಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಾ ...

#ಆತ್ಮೀಯ_ಮಿತ್ರ_ಶೃಂಗೇರಿ_ಶ್ರೀನಿವಾಸ_ಮೂರ್ತಿ #ಅವರ_ಬಾಲ್ಯದ_ಕಷ್ಟ_ತುತ್ತು_ತುತ್ತಿಗೂ_ಬರ #ಹಣ_ಹೆಸರಿನ_ಹಿಂದೆ_ಓಡುವ_ಸಮಾಜ_ನಮ್ಮ_ಅಕ್ಕ_ಪಕ್ಕದ_ನತದೃಷ್ಟರನ್ನ_ಗಮನಿಸಲು_ಸಾಧ್ಯವೇ? #ಬಾಲ್ಯದಿಂದಲೇ_ಕಷ್ಟವನ್ನೆ_ಹಾಸಿ_ಹೊದೆದು_ಬೂದಿಯಿಂದ_ಎದ್ದು_ಬಂದ_ಶ್ರೀನಿವಾಸ_ಮೂರ್ತಿ #ವಾಸ್ತವವಾದಿ_ಪತ್ನಿ_ಪುತ್ರಿ_ಪುತ್ರ_ಹಸುಗಳು_ನಾಯಿ_ಬೆಕ್ಕುಗಳ_ಪುಟ್ಟ_ಪರಿವಾರ #ದೂರದ_ಶೃಂಗೇರಿಯ_ದಟ್ಟ_ಕಾನನದ_ಬೆಟ್ಟದಲ್ಲಿ_ಪುಟ್ಟ_ಮನೆ_ಕೃಷಿ #ಈಗ_ಅನಾರೋಗ್ಯದಿಂದ_ಆಸ್ಪತ್ರೆ_ಸೇರಿದ್ದಾರೆ #ಚಿಕಿತ್ಸೆ_ಯಶಸ್ವಿಯಾಗಿ_ಗುಣವಾಗಿ_ಮನೆಗೆ_ಮರಳಿ_ಬರಲಿ_ಎಂದು_ದೇವರಲ್ಲಿ_ಪ್ರಾರ್ಥಿಸಿದ್ದೇನೆ.    ಸಾಮಾಜಿಕ ಜಾಲತಾಣದಲ್ಲಿ ಕೆಲವರ ಗೆಳೆತನ ಪೂರ್ವಜನ್ಮದಿಂದ ಆಯಿತಾ ಅನ್ನಿಸುವಂತಾ ಮಿತ್ರತ್ವ ಬೆಳೆದು ಬಿಡುತ್ತದೆ, ಪೇಸ್ ಬುಕ್ ಅವರ ಸ್ವಭಾವ ಬಾಲ್ಯ ಎಲ್ಲಾ ಪರಿಚಯಿಸುವುದರಿಂದ ಶೃಂಗೇರಿಯ ಶ್ರೀನಿವಾಸ್ ಮೂರ್ತಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದರು.     ಅವರ ತಂದೆ ಅಡಿಕೆ ಕೊಯ್ಲು ಮಾಡುತ್ತಾ ಸಂಸಾರ ನಿರ್ವಹಣೆ ಮಾಡುತ್ತಿದ್ದರು ಆಗಿನ ಬಡತನದ ಕಾಲದಲ್ಲಿ ಅವರ ಪ್ರಾಮಾಣಿಕ ದುಡಿಮೆ ಸಂಸಾರದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ, ಮಕ್ಕಳು ಚಿಕ್ಕವರಿರುವಾಗಲೇ ಅಡಿಕೆ ಮರದಿಂದ ಬಿದ್ದು ಮಣಿಪಾಲ್ ಸೇರಿದಾಗ ಈ ಸಂಸಾರದ ನೌಕೆ ದಿಕ್ಕು ತಪ್ಪಿತು ಇದೇ ದುರಂತದಲ್ಲಿ ತಂದೆ ಸಾವು ನಂತರ ತಾಯಿ, ಇದರಿಂದ ಈ ಕುಟುಂಬ ಇವರ ಸಹೋದರಿಯ ಪಾಲನೆಯಲ್ಲಿ ...