ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾದಲ್ಲಿ_ನನ್ನ_ಬಸ್ಸು. ಅವರ ನಿರ್ಧೇಶನದ ಮೊದಲ ಸಿನಿಮಾ #ಉಂಡೂ_ಹೋದ_ಕೊಂಡೂ_ಹೋದ_ಸಿನಿಮಾದಲ್ಲಿ ಬೆಳ್ಳೂರು - ರಿಪ್ಪನಪೇಟೆ - ಆನಂದಪುರಂ- ಸಾಗರ ಸಂಚಾರದ ನನ್ನ ಗ್ರಾಮಾಂತರ ಸಾರಿಗೆ ಬಸ್ಸು ಪ್ರಶಾಂತ್ ಅವರ ಸಿನಿಮಾದಲ್ಲಿ #ರಾಜದಾನಿ_ಎಕ್ಸ್_ಪ್ರೆಸ್ ಆಗಿದೆ. ಎಷ್ಟೋ ವರ್ಷದ ನಂತರ ಚಲನ ಚಿತ್ರ ನಟ ದೊಡ್ಡಣ್ಣ ಜೊತೆ ಬೆಂಗಳೂರು ಕಾನಿಷ್ಕಾ ಹೋಟೆಲಲ್ಲಿ ಬೇಟಿ ಆದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಪುನಃ ಈ ಘಟನೆ ನೆನಪಿಸಿಕೊಂಡ ಸವಿನೆನಪುಗಳು ಇಲ್ಲದೆ ಓದಿ. 90 ರ ದಶಕದಲ್ಲಿ #ರಿಪ್ಪನಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ #ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ #ಅನಂತನಾಗ್ #ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು. ಇದು ಸಣ್ಣ ಸಾಹಸವಲ್ಲ!... ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು. ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು ತಮ್ಮ ಊರು ರಿಪ್ಪನಪೇಟೆಯ ಸುತ್ತ ಮುತ್ತಾ ಚಿತ್ರಿಕರಣ ಮಾಡಿದ್ದರು. ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡು...