ರಾಣಿ_ಚೆನ್ನಭೈರಾದೇವಿ_ಸೆರೆಮನೆ_ವಾಸದ
ನಿಜವಾದ_ಅವಧಿ_ಎಷ್ಟು?...
ಕಾಳು ಮೆಣಸಿನ ರಾಣಿ ಬಿರುದಾಂಕಿತ ಗೇರುಸೊಪ್ಪೆಯ ಸಾಳ್ವ ಕುಲದ #ಮಹಾ_ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನಾಯಕರಿಂದ ಪರಾಭವಗೊಂಡು ಅವರ ರಾಜಧಾನಿ ಇಕ್ಕೇರಿಯ ಸೆರೆಮನೆಯಲ್ಲಿ ಬಂದನದಲ್ಲಿದ್ದರು.
ರಾಣಿ ಚೆನ್ನ ಬೈರಾದೇವಿ ಯುದ್ಧದಲ್ಲಿ ಸೋತು ಬಂದನಕ್ಕೆ ಒಳಗಾಗಿದ್ದು 1606ರಲ್ಲಿ ಹಾಗಾದರೆ ಅವರು ಎಷ್ಟು ದಿನ ಬಂದನದಲ್ಲಿದ್ದರು ಎಂಬ ಜಿಜ್ಞಾಸೆಗೆ ಕಾರಣ ಆಗಿದ್ದು ಅವರು ಮರಣ ಕೂಡ 1606 ಎಂದು ಇತಿಹಾಸದ ಬರವಣಿಗೆಯಲ್ಲಿ ತಪ್ಪಾಗಿ ಅನೇಕರು ಬರೆಯುತ್ತಿದ್ದರಿಂದ ಇದರಿಂದ ರಾಣಿ ಚೆನ್ನ ಬೈರಾದೇವಿ ಹೆಚ್ಚು ದಿನ ಇಕ್ಕೇರಿ ಕೋಟೆಯಲ್ಲಿ ಬಂದನದಲ್ಲಿರಲಿಲ್ಲ ಎನ್ನುವಂತಾಗಿತ್ತು.
ಆದರೆ ಇದು ತಪ್ಪು ಮಾಹಿತಿ ಆಗಿದೆ, ರಾಣಿ ಅವರು ಸುಮಾರು ಎರೆಡು ವರ್ಷ ಕಾಲ ಇಕ್ಕೇರಿಯಲ್ಲಿ ಸೆರೆವಾಸದಲ್ಲಿ ಇರುತ್ತಾರೆ ಅದಕ್ಕೆ ಇಲ್ಲಿರುವ ದಾಖಲೆ ನೋಡಿ.
ಬಂದನದಲ್ಲಿ ಅವರಿಗೆ ಯಾರೊಂದಿಗೂ ಬೇಟಿಗೆ ಅವಕಾಶ ಇರಲಿಲ್ಲ ಆದರೆ ಅವರಿಗೆ ಆ ಸಮಯದಲ್ಲಿ ಜೈನ ಮುನಿಗಳು ಹಾಗೂ ಗುರುಗಳ ದರ್ಶನ ಪಡೆದು ಸಲ್ಲೇಖನ ವ್ರತ ಕೈಗೊಳ್ಳಲು ಅವಕಾಶ ರಾಜ ವೆಂಕಟಪ್ಪ ನಾಯಕರು ನೀಡುತ್ತಾರೆ.
ಕೆಳದಿಯ ವೆಂಕಟಪ್ಪ ನಾಯಕರು ವೀರಶೈವ ಧರ್ಮೀಯರಾಗಿದ್ದರೂ ಜೈನ ಧರ್ಮ ಮತ್ತು ಮುನಿಗಳಿಗೆ ಅತ್ಯಂತ ಗೌರವ ನೀಡುತ್ತಿದ್ದರು.
ರಾಣಿ ಚೆನ್ನಭೈರಾದೇವಿಯನ್ನು ಸಾಮಾನ್ಯ ಅಪರಾಧಿಯಂತೆ ಕತ್ತಲ ಕೋಣೆಯಲ್ಲಿ ಬಂಧಿಸಿಡಲಿಲ್ಲ ಬದಲಿಗೆ ಇಕ್ಕೇರಿ ಕೋಟೆಯ ಆವರಣದಲ್ಲಿದ್ದ ರಾಜಮನೆತನದ ಗೃಹ ಬಂಧನದಲ್ಲಿ (ರಾಯಲ್ ಹೌಸ್ ಅರೆಸ್ಟ್) ಇರಿಸಿದ್ದರು.
ಹೀಗಾಗಿ ರಾಣಿಯ ಧಾರ್ಮಿಕ ಆಚರಣೆಗಳಿಗೆ ರಾಜ ವೆಂಕಟಪ್ಪ ನಾಯಕರು ಯಾವುದೇ ತಡೆ ಒಡ್ಡಲಿಲ್ಲ ಜೈನ ಧರ್ಮದ ಶಾಸ್ತ್ರಗಳ ಪ್ರಕಾರ ಒಬ್ಬ ಶ್ರಾವಕ ಅಥವಾ ಶ್ರಾವಕಿ ತನ್ನಷ್ಟಕ್ಕೆ ತಾನೇ ದಿಢೀರನೆ ಆಹಾರ ತ್ಯಜಿಸುವಂತಿಲ್ಲ.
ದಿಗಂಬರ ಜೈನ ಮುನಿಗಳ ಅಥವಾ ಮಠಾಧೀಶರ (ಸಂಘದ) ಸನ್ನಿಧಿಯಲ್ಲಿ ಅವರಿಂದ 'ವ್ರತ ಸ್ವೀಕಾರ' ಮಾಡಿ ಅವರಿಂದ ನಿತ್ಯ ಪಂಚ ನಮೋಕಾರ ಮಂತ್ರೋಪದೇಶ ಪಡೆಯುತ್ತಾ ಸಲ್ಲೇಖನ ಆಚರಿಸುವುದು ಕಡ್ಡಾಯ.
ರಾಣಿ ಸಲ್ಲೇಖನ ವ್ರತ ಕೈಗೊಂಡಿದ್ದರು ಎಂದರೆ ಮಠಾಧೀಶರ ಅಥವಾ ಮುನಿಗಳ ಮಾರ್ಗದರ್ಶನ ಅವರಿಗೆ ಲಭ್ಯವಿತ್ತು ಎಂದೇ ಅರ್ಥ.
ರಾಣಿ ಚೆನ್ನಭೈರಾದೇವಿಯ ಆಡಳಿತಾವಧಿಯಲ್ಲಿ ಸ್ವಾಧಿ (ಸೋಂದಾ) ಜೈನ ಮಠದ ಅಭಿನವ ಭಟ್ಟಾಕಲಂಕ ಸ್ವಾಮೀಜಿ ಮುಂತಾದ ಪ್ರಸಿದ್ಧ ಜೈನ ವಿದ್ವಾಂಸರು ಹಾಗೂ ಮುನಿಗಳು ಅವರ ಆಸ್ಥಾನದಲ್ಲಿದ್ದರು.
ರಾಣಿ ಬಂದಿಯಾಗಿದ್ದಾಗಲೂ ಇಂತಹ ಪ್ರಭಾವಿ ಜೈನ ಧಾರ್ಮಿಕ ಗುರುಗಳು ಕೆಳದಿ ನಾಯಕರ ಅನುಮತಿ ಪಡೆದು ರಾಣಿಗೆ ಅಂತಿಮ ದಿನಗಳಲ್ಲಿ ಧಾರ್ಮಿಕ ಮಾರ್ಗದರ್ಶನ ನೀಡಲು ಭೇಟಿ ಮಾಡುತ್ತಿದ್ದರು.
ಮಧ್ಯಕಾಲೀನ ಕರ್ನಾಟಕದ ರಾಜರು ಯುದ್ಧದಲ್ಲಿ ಶತ್ರು ರಾಜರನ್ನು ಸೋಲಿಸಿದರೂ ಅವರ ಅಂತಿಮ ಇಷ್ಟಾರ್ಥಗಳಿಗೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು.
ಇದರಿಂದ ರಾಣಿ ಚೆನ್ನಭೈರಾದೇವಿ ರಾಜಕೀಯವಾಗಿ ಮತ್ತು ಭೌತಿಕವಾಗಿ ಬಂಧಿಯಾಗಿದ್ದರೂ ಜೈನ ಮುನಿಗಳ ದರ್ಶನ ಪಡೆಯುವ ಮತ್ತು ಅವರ ಮಾರ್ಗದರ್ಶನದಲ್ಲೇ ಸಲ್ಲೇಖನ ವ್ರತ ಸ್ವೀಕರಿಸುವ ಧಾರ್ಮಿಕ ಸ್ವಾತಂತ್ರ್ಯ ಅವರಿಗೆ ಇಕ್ಕೇರಿಯ ಆಸ್ಥಾನದಲ್ಲಿ ಸಿಕ್ಕಿತ್ತು ಎನ್ನುವುದಕ್ಕೆ ಒಂದು ಆದಾರವಾಗಿದೆ.
ಜೈನ ಪರಂಪರೆಯಲ್ಲಿ ಸಲ್ಲೇಖನ ವ್ರತ (ಸಮಾಧಿ ಮರಣ) ಕೈಗೊಂಡು ಮರಣ ಹೊಂದಿದ ಗಣ್ಯರ ಸ್ಮರಣಾರ್ಥವಾಗಿ ನಿಶಿದಿ ಶಾಸನಗಳನ್ನು ಕೆತ್ತಿಸುವುದು ವಾಡಿಕೆ.
ಸಾಮಾನ್ಯ ಇತಿಹಾಸ ಪುಸ್ತಕಗಳಲ್ಲಿ ಯುದ್ಧ ನಡೆದ ವರ್ಷವಾದ ಕ್ರಿ.ಶ. 1606ನ್ನೇ ರಾಣಿಯ ಮರಣದ ವರ್ಷವೆಂದು ಅಂದಾಜಿಸಿ ಬರೆಯಲಾಗುತ್ತಿತ್ತು ಆದರೆ ನಿಶಿದಿ ಕಲ್ಲಿನ ಶಾಸನದ ಪ್ರಕಾರ ರಾಣಿ ಚೆನ್ನಭೈರಾದೇವಿಯವರ ಸಮಾಧಿ ಮರಣವು ಕ್ರಿ.ಶ. 1608 ರ ಅಕ್ಟೋಬರ್ 10 ರಂದು ಸಂಭವಿಸಿತು.
ಈ ನಿಶಿದಿ ಶಾಸನವೇ ರಾಣಿ ಚೆನ್ನಭೈರಾದೇವಿ ಅವರು ಇಕ್ಕೇರಿಯ ಬಂದೀಖಾನೆಯಲ್ಲಿದ್ದಾಗ ಜೈನ ಮುನಿಗಳ ಸನ್ನಿಧಿಯಲ್ಲಿ ನಿಯಮಬದ್ಧವಾಗಿ ಸಲ್ಲೇಖನ ವ್ರತವನ್ನು (ಸಮಾಧಿ ಮರಣ) ಕೈಗೊಂಡಿದ್ದರು ಎಂಬುದಕ್ಕೆ ಸಿಗುವ ಅತ್ಯಂತ ಬಲವಾದ ಮತ್ತು ನೇರ ಶಾಸನಿಕ ಸಾಕ್ಷಿಯಾಗಿದೆ.
ಈ ನಿಶಿದಿ ಶಾಸನದ ದಿನಾಂಕವನ್ನು ಆಧರಿಸಿ ನೋಡಿದರೆ, ಕ್ರಿ.ಶ. 1606 ರ ಯುದ್ಧದ ನಂತರ ರಾಣಿ ಸುಮಾರು 2 ವರ್ಷಗಳ ಕಾಲ (1606 - 1608) ಇಕ್ಕೇರಿಯ ಗೃಹಬಂಧನದಲ್ಲಿದ್ದರು ಮತ್ತು ತಮ್ಮ ಅಂತಿಮ ದಿನಗಳಲ್ಲಿ ಸಲ್ಲೇಖನ ವ್ರತದ ಮೂಲಕ ಪ್ರಾಣತ್ಯಾಗ ಮಾಡಿದರು ಎಂಬುದು ಸ್ಪಷ್ಟವಾಗುತ್ತದೆ ಇದು ರಾಣಿಯ ಸೆರೆಮನೆಯ ನಿಜವಾದ ಅವಧಿ ಆಗಿದೆ.
ಒಬ್ಬ ಮಹಾನ್ ಚಕ್ರವರ್ತಿನಿಯ ಅಂತ್ಯವು ಶಾಸನೋಕ್ತವಾಗಿ (Nishidhi Inscription) ದಾಖಲಾಗಿರುವುದು ಆಕೆಯ ಶೌರ್ಯ, ಧಾರ್ಮಿಕ ನಿಷ್ಠೆ ಹಾಗೂ ಕನ್ನಡ ನಾಡಿನ ಇತಿಹಾಸದಲ್ಲಿ ಆಕೆಗಿದ್ದ ಅತ್ಯುನ್ನತ ಸ್ಥಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಲೇಖನ ನಿಮ್ಮ ಇತಿಹಾಸ ಆಸಕ್ತ ಗೆಳೆಯರಿಗೆ ಪೋಸ್ಟ್ ಶೇರ್ ಮಾಡಲು ವಿನಂತಿ.
#gerusoppe #chennabyradevi #jainreligion #keladiking #venkatappanayaka #ikkeri #genasinakuni #nishidishasana
Comments
Post a Comment