ಪ್ರೆಸ್_ಕ್ಲಬ್_ಪ್ರೆಸ್_ಮೀಟ್ ಬೆಂಗಳೂರಿನ ಪ್ರತಿಷ್ಟಿತ ಪ್ರೆಸ್ ಕ್ಲಬ್ ನಲ್ಲಿ ಪ್ರಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದವರು ಶಿಸ್ತು ಕಾಪಾಡಿಕೊಳ್ಳದಿರುವುದು ಇಡೀ ಪತ್ರಿಕಾ ವ್ಯವಸ್ಥೆಯ ದೊಡ್ಡ ಲ್ಯಾಪ್ಸ್ ಆಗಿದೆ. ಅತಿಥಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಗೌರವ ನೀಡದಿದ್ದರೆ ಅದು ಪತ್ರಿಕಾ ಸ್ವಾತಂತ್ರ್ಯದ ಅವಮಾನ ಅದೇ ರೀತಿ ಪತ್ರಕರ್ತರು ವೃತ್ತಿಪರತೆ ಮರೆತು ವರ್ತಿಸಿದರೆ ಅದು ಮಾಧ್ಯಮ ರಂಗ ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಪತ್ರಿಕಾಗೋಷ್ಠಿಯ ಯಶಸ್ಸು ಅಡಗಿರುವುದು ಪಾರದರ್ಶಕತೆಯಲ್ಲಿ,ಸಂಘಟಕರು ಯಾವುದೇ ಮುಚ್ಚುಮರೆಯಿಲ್ಲದೆ ಮಾಹಿತಿ ನೀಡುವುದು ಮತ್ತು ಪತ್ರಕರ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಠವಾಗಿ ಪ್ರಶ್ನೆ ಕೇಳಿದಾಗ ಮಾತ್ರ ಪತ್ರಿಕಾಗೋಷ್ಠಿಯ ನೈಜ ಉದ್ದೇಶ ಸಫಲವಾಗುತ್ತದೆ. ಹಾಗಾದರೆ ಆ ಪತ್ರಿಕಾಗೋಷ್ಟಿಯಲ್ಲಿ ಬೆಂಗಳೂರು ಫ್ರೆಸ್ ಕ್ಲಬ್ ನ ನಿಯಮ ಉಲ್ಲಂಘನೆ ಆಯಿತಾ... ಇದರಿಂದ ಬೆಂಗಳೂರಿನ ಪ್ರೆಸ್ ಕ್ಲಬ್ ಈಗ ಕೈಗೊಂಡ ನಿರ್ಧಾರಗಳು ಏನು?... ಕರ್ನಾಟಕದಲ್ಲಿ ಅಥವಾ ಯಾವುದೇ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮತ್ತು ಅದರಲ್ಲಿ ಭಾಗವಹಿಸಲು ಕೆಲವು ನಿರ್ದಿಷ್ಟ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಇವುಗಳನ್ನು ಆಯಾ ಪ್ರೆಸ್ ಕ...