ಗುಣಗಾ_ಸಮಾಜದ_ನನ್ನ_ಲೇಖನನಕ್ಕೆ ಪ್ರತಿಕ್ರಿಯಿಸಿ_ಗೆಳೆಯರಾದ_ವಿಷ್ಣುದಾಸಗುಣಿಗಾ. ಈವರೆಗಿನ ಯಾವ ಮಾಧ್ಯಮದಿಂದಲೂ ಆಗದ ಮ್ಯಾಜಿಕ್ ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗುವುದು ನೋಡಿದರೆ ವಿಚಿತ್ರ ಅನ್ನಿಸುತ್ತೆ ಇದಕ್ಕೆ ಉದಾಹರಣೆ ನನ್ನ ಗುಣಗಾ ಸಮಾಜದ ಲೇಖನ ಆ ಸಮಾಜದ ಬರಹಗಾರರ ಜೊತೆ ಸಂಪರ್ಕ ಕಲ್ಪಿಸಿದೆ. ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಬಗ್ಗೆ ನಾನು ಬರೆದಿರುವ ಪುಸ್ತಕ ಇನ್ನೂ ಮುದ್ರಣಕ್ಕೆ ಕೊಟ್ಟಿಲ್ಲ ಆದರೆ ಆಗಾಗ್ಗೆ ಒಂದೊಂದು ಲೇಖನ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ. ಈ ರೀತಿ ನನ್ನ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿ ಗೆಳೆಯರಾದವರು ಕುಮಟಾದ #ವಿಷ್ಣು_ದಾಸ್_ಗುಣಗಾ ಇವರು ನಿವೃತ್ತ ಸರ್ಕಾರಿ ನೌಕರರು ಇವರು ತಮ್ಮದೇ ಗುಣಗಾ ಸಮಾಜದ ಬಗ್ಗೆ ಪುಸ್ತಕ ಒಂದನ್ನ ಬರೆದಿದ್ದಾರೆ ಅದನ್ನು ಸದ್ಯದಲ್ಲೇ ಪ್ರಕಟಿಸಲಿದ್ದಾರೆ ಬಹುಶಃ ಇದು ಗುಣಗಾ ಸಮಾಜದ ಮೊದಲ ಪುಸ್ತಕ ಆಗಲಿದೆ. ಗೇರುಸೊಪ್ಪೆಯ ಜೈನ ಸಾಳ್ವ ರಾಜರ ಆಪ್ತವಲಯದ ಒಂದು ಸಣ್ಣ ಸಂಖ್ಯೆಯ ಸಮುದಾಯ ಜೈನ ಸಮಾಜದ ಅರ್ಚಕ ವೃತ್ತಿಯಲ್ಲಿ ಸಹಾಯಕರಾಗಿ ತೊಡಗಿ ನಂತರ ಜೈನರ ಆಚಾರ ವಿಚಾರಗಳನ್ನೆ ಪರಿಪಾಲಿಸಿಕೊಂಡು ಜೈನರೇ ಆದರೂ ಅವರಿಗೆ ಆಗಿನ ಕಾಲದ ಜೈನ ಸಮಾಜ ತನ್ನ ಧರ್ಮದಲ್ಲಿ ಯಾಕೆ ಸೇರಿಸಿಕೊಂಡಿಲ್ಲ ಎಂಬುದು ಸೋಜಿಗದ ವಿಷಯ ಆಗಿದೆ. ರಾಜ್ಯವೇ ಸೋತು ಅಲ್ಲಿನ ರಾಣಿ ಚೆನ್ನ ಬೈರಾದೇವಿ ಕೆಳದಿ ರಾಜ ವೆಂಕಟಪ್ಪ ನ...