ಬ್ರಾಹ್ಮೀ_ಮುಹೂರ್ತ_ಎಂದರೇನು?... "Early to bed and early to rise, makes a man healthy, wealthy, and wise." ನೀವು ಈ ನುಡಿ ಮುತ್ತು ಕೇಳಿರುತ್ತೀರಿ ಈ ರೀತಿ ನಿಮ್ಮ ಜೀವನ ಶೈಲಿ ಇದ್ದರೆ ನಿಮ್ಮ ಅನುಭವ ಶೇರ್ ಮಾಡಲು ವಿನಂತಿ. ಬ್ರಾಹ್ಮೀ ಮುಹೂರ್ತ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ ಅತ್ಯಂತ ಪವಿತ್ರ ಮತ್ತು ಪ್ರಶಾಂತವಾದ ಸಮಯ. ಪ್ರಾಚೀನ ವೈದಿಕ ಹಾಗೂ ಆಯುರ್ವೇದ ಪರಂಪರೆಯಲ್ಲಿ ಈ ಸಮಯಕ್ಕೆ ವಿಶೇಷ ಮಹತ್ವವಿದೆ. ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಈ ಮುಹೂರ್ತ ಆರಂಭವಾಗಿ, ಸೂರ್ಯೋದಯಕ್ಕೆ 48 ನಿಮಿಷಗಳ ಮುಂಚೆ ಕೊನೆಗೊಳ್ಳುತ್ತದೆ. ಅಂದರೆ ಇದರ ಒಟ್ಟು ಅವಧಿ 48 ನಿಮಿಷಗಳು / 2 ಘಳಿಗೆಗಳು. ಸಾಮಾನ್ಯವಾಗಿ ಇದು ಮುಂಜಾನೆ 4:00 ರಿಂದ 5:30 ರ ನಡುವೆ ಬರುತ್ತದೆ. ಬ್ರಹ್ಮಜ್ಞಾನದ ಸಮಯ: 'ಬ್ರಹ್ಮ' ಎಂದರೆ ಪರಮ ಸತ್ಯ ಅಥವಾ ಜ್ಞಾನ. 'ಬ್ರಾಹ್ಮೀ' ಎಂದರೆ ಬ್ರಹ್ಮನಿಗೆ ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ್ದು. ಈ ಸಮಯದಲ್ಲಿ ಪ್ರಕೃತಿಯು ಅತ್ಯಂತ ಪ್ರಶಾಂತವಾಗಿದ್ದು, ಪರಮಾತ್ಮನ ಚಿಂತನೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಮತ್ತು ವೇದಾಧ್ಯಯನಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಇದಕ್ಕೆ 'ಬ್ರಾಹ್ಮೀ ಮುಹೂರ್ತ' ಎಂಬ ಹೆಸರು ಬಂತು. ರಾತ್ರಿಯ ಕೊನೆಯ ಮುಹೂರ್ತವಾದ 14ನೇ ಮುಹೂರ್ತಕ್ಕೆ ಸೃಷ್ಟಿಕರ್ತನಾದ ಬ್ರಹ್ಮದೇವನೇ ಅಧಿಪತಿ. ಆದ್ದರಿಂದ ಆ ಕಾಲಾವಧಿಗೆ ...