ನನಗೆ ಇವತ್ತು ನಿನಾಸಂ ಕೆ.ವಿ.ಸುಬ್ಬಣ್ಣ ನೆನಪಿಗೆ ಬರುತ್ತಾರೆ.1998ರಲ್ಲಿ ವೀರಪ್ಪ ಮೊಯಿಲಿಯವರ ದೇವಾಡಿಗ ಜಾತಿಯ ಸಾಗರ ತಾಲ್ಲೂಕ್ ಸಮಾವೇಶ ಹೆಗೋಡಿನ ನಿನಾಸಂ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಬ್ಬಣ್ಣರ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವ ಸಂದಭ೯ ನನಗೆ ಸಿಕ್ಕಿತ್ತು, ಅವತ್ತು ಸುಬ್ಬಣ್ಣ ತಮ್ಮ ಬಾಷಣದಲ್ಲಿ ಹಿಂದುಳಿದ ಜನಾಂಗ ಸಂಘಟಿತರಾಗಬೇಕು, ಸಂಘಟಿತರಾದ ಮೇಲ್ಪಗ೯ ಸ೦ಘಟನೆ ಸಲ್ಲ ಅಂದಿದ್ದರು. ಸುಬ್ಬಣ್ಣ ನನಗೆ ಅಥ೯ ಆಗಿಲ್ಲ ಅಂದೆ ಅವರು ಈ ರೀತಿ ವಿವರಿಸಿದ್ದರು " ಮೇಲು ವಗ೯ದವರು ಶತ ಶತಮಾನದಿಂದ ಸ೦ಘಟಿತರಾಗಿದ್ದಾರೆ ಅವರು ಪುನಃ ಸಂಘಟಿತರಾದರೆ ಕೆಳ ವಗ೯ದ ಶೋಷಣೆ ಆಗುತ್ತೆ, ಅಸಂಘಟಿತರಾದ ಹಿ೦ದುಳಿದ ವಗ೯ಗಳು ಅವರ ಅಭಿವೃದ್ದಿಗೆ, ಸವಲತ್ತುಗಳಿಗೆ ಸಂಘಟಿತರಾಗಬೇಕು" ಈ ಮಾತು ಇವತ್ತು ಶ್ರೀಧರ ಕಲ್ಲಳ್ಳಿಯವರ ಹಿಂದುಳಿದ ವಗ೯ದವರ ಬಗ್ಗೆ ವ್ಯಕ್ತಪಡಿಸಿದ ಕಾಳಜಿ ಸಂದಭ೯ದಲ್ಲಿ ನೆನಪಾಯಿತು.