Skip to main content

Posts

Showing posts with the label KORAGAJJA DAIVA A MIRACLE

ಕೊರಗಜ್ಜ ದೈವರ ಪವಾಡಗಳು ಮತ್ತು ನಂಬಿಕೆಗಳು

#ದಕ್ಷಿಣ_ಕನ್ನಡದ_ದೈವಾರಾದನೆ_ಮತ್ತು_ದೈವಗಳು. #ಕೊರಗಜ್ಜರ_ಪವಾಡಗಳು.   ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಸಮೀಪದಲ್ಲಿ ಹರಿಯುವ ಗಂಗಾವಳಿ ನದಿಯಿಂದ ಕೇರಳ ಕಾಸರಗೋಡು ಸಮೀಪದ ಚಂದ್ರಗಿರಿ ನದಿ ಮದ್ಯದ ಪ್ರದೇಶದ ದೈವಾರಾದನೆ ಮತ್ತು ನಂಬಿಕೆಗಳು ಬೇರೆಯ ಪ್ರದೇಶದವರಿಗೆ ಸರಿಯಾಗಿ ಅಥ೯ ಮಾಡಿಕೊಳ್ಳಲು ಕಷ್ಟವೇ ಸರಿ.   ಇಲ್ಲಿನ ದೈವಗಳು ಕಲ್ಲುಕುಟಿಕ ,ಪಂಜುಲಿ೯, ಬೊಬ್ಬಯ೯,ಗುಳಿಗ, ಚಿಕ್ಕು ಹೀಗೆ ಮುಂದುವರಿದು ಕೋಟಿ ಚೆನ್ನಯ್ಯ, ಆಲೀಬೂತ ಕೊರಗಜ್ಜರ ತನಕ 102 ದೈವದ ಸಾವಿರಾರು ಗುಡಿ, ಗರುಡಿ, ದೇವಾಲಯಗಳು ಮತ್ತು ಅದರ ಆರಾದನೆ ಕೊಲಾಗಳು ನಡೆಯುತ್ತಲೇ ಇದೆ, ಇದಕ್ಕೆ ದೈವ ಪಾತ್ರಿಗಳೆಂಬ ಕುಟುಂಬಗಳೇ ಇದೆ.   ಇಲ್ಲಿನ ಬ್ರಾಹ್ಮಣರು,ಜೈನರು, ಬಂಟರಾದಿ ಆಗಿ ಎಲ್ಲಾ ಜಾತಿಯವರು ಮತ್ತು ಮುಸ್ಲಿ೦ ಕ್ರೈಸ್ತ ದಮಿ೯ಯರೂ ಈ ದೈವರಾದನೆ ನಂಬುತ್ತಾರೆ.   ಮಾಪುಳ್ತಿ ಬೂತ, ಆಲೀ ಬೂತ, ಮಾಪಳ್ಳಿ ಬೂತ,ಬ್ಯಾದಿ೯ ಬೂತಗಳೆಂಬ ಮುಸ್ಲಿಂ ದೈವಗಳ ಆರಾದನೆಯೂ ಕಾಸರಗೋಡು ಬಾಗದಲ್ಲಿದೆ.   ಇತ್ತೀಚಿಗೆ ಮಂಗಳೂರಿನ ಕುತ್ತಾರು ಮೂಲ ಸ್ಥಾನದ #ಕೊರಗಜ್ಜ ದೈವರ ಹುಂಡಿಯಲ್ಲಿ ನಿರೋದ್ ಪ್ಯಾಕೆಟ್ ಹಾಕಿದ ಕಿಡಿಗೇಡಿಗಳು ಭಕ್ತರ ದಾರ್ಮಿಕ ಭಾವನೆಗೆ ಕುಂದು ತಂದ ವಿಷಯ ಸುದ್ದಿ ಆಗಿತ್ತು ಸ್ವಲ್ಪ ದಿನದಲ್ಲೇ ಕಿಡಿಗೇಡಿತನ ಮಾಡಿದವರು ಪಶ್ಚಾತ್ತಾಪ ಪಟ್ಟು ದೈವ ಸನ್ನಿದಿಗೆ ಬಂದು ಶರಣಾದ ಸುದ್ದಿ ಈಗ ವೈರಲ್ ಆಗಿದೆ.   ಕೊರಗಜ್ಜರ...