ಭಾಗ - 19, ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಎಂಬ ಆದರ್ಶ ಶಿಕ್ಷಕ ದಂಪತಿಗಳು ಆನಂದಪುರ೦ ನಲ್ಲಿ ವಿದ್ಯಾಮಂತ್ರಿ ಬದರಿನಾರಾಯಣ ಆಯ್ಯಂಗಾರರು ಓದಿದ ಶಾಲೆಯಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದವರು
#ಭಾಗ_19 #ವಿದ್ಯಾಮಂತ್ರಿ_ಬದರಿನಾರಾಯಣ್_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಪ್ರಾಥಮಿಕ_ಶಾಲೆ #ಈ_ಶಾಲೆಗೆ_ಭೂದಾನ_ಮಾಡಿದ_ಸ್ಕೂಲ್_ರಾಮಣ್ಣ #ದೀರ್ಘಕಾಲ_ಶಿಕ್ಷಕ_ವೃತ್ತಿಮಾಡಿದ್ದ_ಲೋಬೋ_ಮಾಸ್ಟರ್_ಮತ್ತು_ಅವರ_ಪತ್ನಿ_ಲಿಲ್ಲಿಬಾಯಿ_ಟೀಚರ್ #ಇವರ_ಶಿಸ್ತಿನ_ಜೀವನ_ಆನಂದಪುರಂಗೆ_ಮಾದರಿ. #ಆನಂದಪುರಂ_ಸ್ಟೇಟ್_ಬ್ಯಾಂಕ್_ಮೈಸೂರಿನ_ಉದ್ಘಾಟನೆಗೆ_ಮುಖ್ಯಮಂತ್ರಿ_ನಿಜಲಿಂಗಪ್ಪರಿಂದ . #ಅವತ್ತೇ_ಹೊಸಗುಂದದಲ್ಲಿ_ಹೆಡತ್ರಿ_ನಾಗರಾಜಗೌಡರ_ತಂದೆ #ಊರಿಗೆ_ನಿರ್ಮಿಸಿಕೊಟ್ಟಿದ್ದ_ಶಾಲೆ_ತೆರೆದಬಾವಿ_ಉದ್ಘಾಟಿಸಿದರು. ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ , ಈ ಶಾಲೆಗೆ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ.ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ ಬಿ.ಡಿ. ರವಿಯ ತಾಯಿಯಾದ ಲಕ್ಷ್ಮಮ್ಮನವರ ಅಜ್ಜ ರಾಮಣ್ಣನವರೆ ಈ ಶಾಲೆಗೆ ಭೂದಾನ ನೀಡಿದವರು. ಅವರು ನೀಡಿದ ದಾನದ ಜಾಗದಲ್ಲಿ ಬ್ರಿಟಿಶ್ ಸರ್ಕಾರ ಶಾಲೆ ನಿಮಿ೯ಸಿತು,ಅಲ್ಲಿ ಅನೇಕ ಜಗದ್ಪ್ರಸಿದ್ಧರು ಓದಿದರು. ಅದರಲ್ಲಿ ಇಲ್ಲಿ ಅಕ್ಷರ ಕಲಿತ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರ ಎರಡನೆ...