Blog number 1633. ನಾನು ದಿನ ಪತ್ರಿಕೆ ಓದುವುದು ನಿಲ್ಲಿಸಿ ಒಂದು ವರ್ಷ ಆಯಿತು. 2022 ರ ಕನ್ನಡ ಪತ್ರಿಕಾ ದಿನಾಚರಣೆ ದಿನದಿಂದ ನಿರ್ದಾರ ಮಾಡಿದ್ದೆ.
#ಪ್ರತಿವರ್ಷ_ಜುಲೈ_೧_ಕನ್ನಡ_ಪತ್ರಿಕಾ_ದಿನ. #ನಾನು_ಎಲ್ಲಾ_ಪತ್ರಿಕೆಗಳ_ಖರೀದಿ_ನಿಲ್ಲಿಸಿ_ಒಂದು_ವರ್ಷ #ವೃತ್ತ_ಪತ್ರಿಕೆ_ಓದುವುದು_ಬಿಡಲು_ಕಾರಣವಿದೆ. #ಮೀಡಿಯಾ_ಖಾಲಿ_ಕಪಾಟುಗಳಾಗಿದೆ #ಪತ್ರಕರ್ತರನ್ನು_ಸಂಪಾದಕರನ್ನು_ಕಡೆಗಾಣಿಸುತ್ತಿರುವ_ಪತ್ರಿಕೆಗಳ_ಮಾಲಿಕರು. ಬಾಲ್ಯದಲ್ಲಿ ನಾನು ಹುಟ್ಟುವಾಗಲೇ ನಮ್ಮ ಮನೆಗೆ ನಿತ್ಯ ಪ್ರಜಾವಾಣಿ ಪತ್ರಿಕೆ ನಿವೃತ್ತ ಯೋದರಾದ ಹುಚ್ಚಾಚಾರ್ ಬಾಂಗ್ಲಾ ಯುದ್ಧದಲ್ಲಿ ಊನವಾಗಿದ್ದ ಕುಂಟು ಕಾಲಲ್ಲಿ ಕುಂಟುತ್ತಾ ನಮ್ಮ ಮನೆಗೆ ಮತ್ತು ಸಮೀಪದ SRS ಅಕ್ಕಿ ಗಿರಣಿಗೆ ತಪ್ಪದೇ ವಿತರಿಸುತ್ತಿದ್ದರು. ವಾರ ಪತ್ರಿಕೆ ಸುದಾ - ಪ್ರಜಾಮತ, ಮಾಸ ಪತ್ರಿಕೆ ಚಂದಮಾಮ - ಮಯೂರ - ತುಷಾರದಿಂದ ಪ್ರಾರಂಭವಾಗಿ ನನ್ನ ಯಜಮಾನಿಕೆಯಲ್ಲಿ ದಿನ ಪತ್ರಿಕೆ ಪ್ರಜಾವಾಣಿ ಜೊತೆ ಕನ್ನಡ ಪ್ರಭ - ಸಂಯುಕ್ತ ಕರ್ನಾಟಕ - ಉದಯವಾಣಿ - ವಿಜಯ ಕರ್ನಾಟಕ - ವಿಜಯವಾಣಿ - ವಿಶ್ವಕರ್ನಾಟಕ, ಇಂಗ್ಲೀಷ್ ಹಿಂದೂ- ಡೆಕನ್ ಹೆರಾಲ್ಡ್ - ಇಂಡಿಯನ್ ಎಕ್ಸ್ ಪ್ರೆಸ್, ಹಿಂದಿಯ ರಾಜಸ್ಥಾನ್ ಪತ್ರಿಕಾ, ವಾರಪತ್ರಿಕೆಗಳಾದ ಹಾಯ್ ಬೆಂಗಳೂರು, ಲಂಕೇಶ್, ಗೌರಿ ಲಂಕೇಶ್, ಅಗ್ನಿ. ಅನೇಕ ಮಾಸ ಪತ್ರಿಕೆಗಳ ಜೊತೆ ಸ್ಥಳೀಯ ಪತ್ರಿಕೆಗಳು ನಾನು ತರಿಸುತ್ತಿದ್ದೆ ಮತ್ತು ಪೂರ್ತಿ ಓದಿದ ನಂತರವೇ ನನ್ನ ನಿತ್ಯದ ಕೆಲಸ ಎಂದು ಅಭ್ಯಾಸ ಆಗಿತ್ತು. ನಂತರ ರಾಜ್ಯ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳ ಮೇಲೆ ಸ್ಪರ್ದೆ ಮಾಡಿ ಸ್ಥಳೀಯ ಪತ್ರ...