Skip to main content

Posts

Showing posts with the label Daily walking required firm desission

ನಿತ್ಯ ವಾಕಿ೦ಗ್ ಮಾಡಲು ಬೇಕಾಗಿರುವುದು ದೃಡ ನಿದಾ೯ರ ಮಾತ್ರ

#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ?   ಕಳೆದ ವಷ೯ ಇದೇ ಲಾಕ್ ಡೌನ್ ಸಂದರ್ಭದಲ್ಲಿ ವಾಕಿಂಗ್ ಶುರು ಮಾಡಿದೆ, 130 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.   ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷ ದಂತೆ ನಡೆಯಲು ಶುರು ಮಾಡಿದೆ ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.   ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುವುದು.   ರಸ್ತೆ ಮೇಲೆ ವಾಕಿಂಗ್ ಹೋದರೆ ಸಿಗುವವರ ಜೊತೆ ಮಾತಿಗೆ ನಿಲ್ಲಬೇಕಾದ ಅನಿವಾಯ೯ತೆಯಿಂದ ವಾಕಿಂಗ್ ನಿರಂತರ ಆಗುವುದಿಲ್ಲ ಮತ್ತು ಇತ್ತೀಚಿನ ದಿನದಲ್ಲಿ ವಿಪರೀತ ವಾಹನಗಳ ಸಂಚಾರ ಮತ್ತು ವೇಗದ ಚಾಲನೆಯಿಂದ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಹೆಚ್ಚು ಅಪಾಯ ಆದ್ದರಿಂದ ನಾನು ಮನೆಯ ಗೇಟಿನ ಒಳಗೆ ವಾಕಿಂಗ್ ನಿಗದಿ ಮಾ...