Skip to main content

Posts

Showing posts with the label ANANDAPURAM familiar Newspaper Agent and Reporter KESHAVA BHAT

ಆನಂದಪುರದ ಚಿರಪರಿಚಿತ ಪೇಪರ್ ಕೇಶವ ಭಟ್ಟರ ತಪ್ಪದ ನಿತ್ಯ ಕಾಯಕ

#ಆನಂದಪುರದ_ಪೇಪರ್_ಕೇಶವ_ಭಟ್ಟರು      1981ರಲ್ಲಿ ಆನಂದಪುರದಿಂದ ಸಾಗರಕ್ಕೆ ಸಂಜಯ್ ಮೆಮೋರಿಯಲ್ ಡಿಪ್ಲೋಮ ಕಾಲೇಜಿಗೆ ಪ್ರತಿ ದಿನ ಬೆಳಿಗ್ಗೆ 5.45ಕ್ಕೆ ಶಿವಮೊಗ್ಗದಿಂದ ಬರುತ್ತಿದ್ದ ಕುಮುಟಾಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ (ನಾರಾಯಣಪ್ಪ ಎಂಬ ಸೂಪರ್ ಪಾಸ್ಟ್ ಡ್ರೈವರ್ ) ಹೋಗುತ್ತಿದ್ದೆ ಆಗ ಇನ್ನೂ ಶಾಲೆಗೆ ಸೇರದ ಪುಟ್ಟ ಬಾಲಕ ನಿದ್ದೆ ಕಣ್ಣಿನಲ್ಲೇ ಆನಂದಪುರ ಬಸ್ ಸ್ಟಾಂಡ್ ನಲ್ಲಿ ಪೇಪರ್ ಪೇಪರ್ ಅಂತ ಕೂಗುತ್ತಾ ನಿತ್ಯ ಪತ್ರಿಕೆ ಮಾರುವುದು ನೋಡಿ ಕರಳು ಹಿಚುಕಿದಂತೆ ಸಂಕಟ ಆಗುತ್ತಿತ್ತು.        ಆಗಿನಿಂದ ಅಂದರೆ ಸುಮಾರು 40 ವರ್ಷದ ಮೇಲೂ ಕೇಶವ ಭಟ್ಟರು ಇವತ್ತೂ ಆನಂದಪುರರನಲ್ಲಿ ಮನೆ ಮನೆಗೆ ಸೂಯೋ೯ದಯದ ಮುಂಚೆ ತಪ್ಪದೇ ಪತ್ರಿಕೆ ತಲುಪಿಸುವ ಪೇಪರ್ ಏಜೆಂಟ್ ಮತ್ತು #ವಿಜಯವಾಣಿ ಪತ್ರಿಕೆಯ ಆನಂದಪುರದ ಪತ್ರಿಕಾ ವರದಿಗಾರ ಕೂಡ ಹೌದು.      ತಂದೆ ಸಣ್ಣ ವಯಸ್ಸಲ್ಲೇ ತೀರಿ ಹೋಗಿದ್ದು,ತಾಯಿಗೆ ಸಿಗಬೇಕಾದ ಆಸ್ತಿ ಸಿಗದೇ ಹೋದದ್ದು, ಯಾವ ಜಾತಿ ಆದರೇನು ಬಡತನ ಬಂದರೆ ಎಲ್ಲರೂ ದೂರ ಮಾಡುವಂತೆ ಇವರನ್ನೂ ಎಲ್ಲರೂ ದೂರ ಮಾಡಿದರು,ಇವರ ಹವ್ಯಕ ಜಾತಿ ಬಾಂದವರ್ಯಾರು ಈ ಕುಟುಂಬಕ್ಕೆ ಸಹಾಯ ಮಾಡಲಿಲ್ಲ.   ಕೇಶವ ಬೆಳಿಗ್ಗೆ ಪೇಪರ್ ಹಾಕುವುದು, ಬಸ್ಸುಗಳಲ್ಲಿ ಪೇಪರ್, ಸೋಡಾ,ಬಾಳೆಹಣ್ಣು, ಕಡಲೆಕಾಯಿ ಮಾರುತ್ತಾ ಶಾಲೆಗೆ ಹೋಗಿ ವಿದ್ಯಾಬ್ಯಾಸವೂ ...