1981ರಲ್ಲಿ ಆನಂದಪುರದಿಂದ ಸಾಗರಕ್ಕೆ ಸಂಜಯ್ ಮೆಮೋರಿಯಲ್ ಡಿಪ್ಲೋಮ ಕಾಲೇಜಿಗೆ ಪ್ರತಿ ದಿನ ಬೆಳಿಗ್ಗೆ 5.45ಕ್ಕೆ ಶಿವಮೊಗ್ಗದಿಂದ ಬರುತ್ತಿದ್ದ ಕುಮುಟಾಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ (ನಾರಾಯಣಪ್ಪ ಎಂಬ ಸೂಪರ್ ಪಾಸ್ಟ್ ಡ್ರೈವರ್ ) ಹೋಗುತ್ತಿದ್ದೆ ಆಗ ಇನ್ನೂ ಶಾಲೆಗೆ ಸೇರದ ಪುಟ್ಟ ಬಾಲಕ ನಿದ್ದೆ ಕಣ್ಣಿನಲ್ಲೇ ಆನಂದಪುರ ಬಸ್ ಸ್ಟಾಂಡ್ ನಲ್ಲಿ ಪೇಪರ್ ಪೇಪರ್ ಅಂತ ಕೂಗುತ್ತಾ ನಿತ್ಯ ಪತ್ರಿಕೆ ಮಾರುವುದು ನೋಡಿ ಕರಳು ಹಿಚುಕಿದಂತೆ ಸಂಕಟ ಆಗುತ್ತಿತ್ತು.
ಆಗಿನಿಂದ ಅಂದರೆ ಸುಮಾರು 40 ವರ್ಷದ ಮೇಲೂ ಕೇಶವ ಭಟ್ಟರು ಇವತ್ತೂ ಆನಂದಪುರರನಲ್ಲಿ ಮನೆ ಮನೆಗೆ ಸೂಯೋ೯ದಯದ ಮುಂಚೆ ತಪ್ಪದೇ ಪತ್ರಿಕೆ ತಲುಪಿಸುವ ಪೇಪರ್ ಏಜೆಂಟ್ ಮತ್ತು #ವಿಜಯವಾಣಿ ಪತ್ರಿಕೆಯ ಆನಂದಪುರದ ಪತ್ರಿಕಾ ವರದಿಗಾರ ಕೂಡ ಹೌದು.
ತಂದೆ ಸಣ್ಣ ವಯಸ್ಸಲ್ಲೇ ತೀರಿ ಹೋಗಿದ್ದು,ತಾಯಿಗೆ ಸಿಗಬೇಕಾದ ಆಸ್ತಿ ಸಿಗದೇ ಹೋದದ್ದು, ಯಾವ ಜಾತಿ ಆದರೇನು ಬಡತನ ಬಂದರೆ ಎಲ್ಲರೂ ದೂರ ಮಾಡುವಂತೆ ಇವರನ್ನೂ ಎಲ್ಲರೂ ದೂರ ಮಾಡಿದರು,ಇವರ ಹವ್ಯಕ ಜಾತಿ ಬಾಂದವರ್ಯಾರು ಈ ಕುಟುಂಬಕ್ಕೆ ಸಹಾಯ ಮಾಡಲಿಲ್ಲ.
ಕೇಶವ ಬೆಳಿಗ್ಗೆ ಪೇಪರ್ ಹಾಕುವುದು, ಬಸ್ಸುಗಳಲ್ಲಿ ಪೇಪರ್, ಸೋಡಾ,ಬಾಳೆಹಣ್ಣು, ಕಡಲೆಕಾಯಿ ಮಾರುತ್ತಾ ಶಾಲೆಗೆ ಹೋಗಿ ವಿದ್ಯಾಬ್ಯಾಸವೂ ಮಾಡುತ್ತಾ ಪೀಯುಸಿ ತೇಗ೯ಡೆ ಆಗಿ ಪದವಿ ಕಾಲೇಜ್ ಗೆ ಸೇರಿ ಅದ೯ಕ್ಕೆ ಬಿಟ್ಟು ಖಾಸಾಗಿ ಬಸ್ ಏಜೆಂಟ್ ಆಗಿ ಇಡೀ ಕುಟುಂಬ ಸಲುಹಿದ ಶ್ರಮಜೀವಿ ಇವರು.
ಪ್ರತಿ ವರ್ಷ ತಪ್ಪದೆ ಶಬರಿಮಲೆಗೆ ಅಯ್ಯಪ್ಪ ವೃತಾದಾರಿ ಆಗಿ ಹೋಗಿ ಬರುತ್ತಾರೆ ಆಗ ನಾನು ಇವರು ಹಾಕುವ ಪತ್ರಿಕೆಯ ಬಿಲ್ ಬಾಬ್ತು ವಾಷಿ೯ಕ 5000 ಕೊಡುತ್ತೇನೆ ಇದು ಸುಮಾರು 15 ವರ್ಷದಿಂದ ನಡೆದು ಕೊಂಡು ಬಂದಿದೆ.
ಪ್ರತಿ ದಿನ ಬೆಳಿಗ್ಗೆ 3 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ದೇವರ ಪೂಜೆ ಮಾಡಿ ಪತ್ರಿಕೆ ಹಂಚಲು ಹೋಗುವ ಕೇಶವ ಭಟ್ಟರ ತಪ್ಪದ ಕಾಯಕ ಮೆಚ್ಚುವಂತದ್ದೇ.
ಶೃಂಗೇಶ್ ಸಂಪಾದಕತ್ವದ #ಜನಹೋರಾಟ ಕೂಡ ಇವರು ಹಾಕುತ್ತಾರೆ ಒಮ್ಮೆ ಸಂಪಾದಕರಾದ ಶೃಂಗೇಶ್ ಹೇಳುತ್ತಿದ್ದರು ಪತ್ರಿಕೆಯ ಹಣ ಪ್ರತಿ ತಿಂಗಳೂ ನಿದಿ೯ಷ್ಟ ದಿನ ತಪ್ಪದೇ ತಲುಪಿಸುವ ಪತ್ರಿಕಾ ಏಜೆಂಟ್ ಇವರೊಬ್ಬರೆ ಅಂತ.
ಪ್ರತಿಯೊಂದು ಊರಲ್ಲೂ ಇಂತವರು ಇರುತ್ತಾರೆ, ನಮ್ಮ ಮದ್ಯೆ ಇದ್ದರೂ ನಾವು ಅವರನ್ನ ಸರಿಯಾಗಿ ಗಮನಿಸಿರುವುದಿಲ್ಲ ಇವತ್ತು ಬೆಳಿಗ್ಗೆ ಮನೆ ಅಂಗಳದಲ್ಲಿ ವಾಕಿಂಗ್ ಮಾಡುವಾಗ ಕೇಶವ ಭಟ್ಟರು ಸಿಕ್ಕಿದಾಗ ಇದೆಲ್ಲ ನೆನಪಾಗಿ ಬ್ಲಾಗ್ ನಲ್ಲಿ ಬರೆದೆ.
ಶ್ರಮ ಜೀವಿ ಕೇಶವ ಭಟ್ರ ಸೆಲ್ ನಂಬರ್ 7848910878.
Comments
Post a Comment