2012 ರಿಂದ ಅನಿವಾಯ೯ವಾಗಿ ನಾನು ರೆಸ್ಟೋರೆಂಟ್ ಮಾಲಿಕನಾದೆ, ನನ್ನ ಗುರಿ, ಅನುಭವಗಳಿಂದ ಇವತ್ತು ನಮ್ಮ ರೆಸ್ಟೋರೆಂಟ್ ಮಲ್ಲಿಕಾ ವೆಜ್ ಶುಚಿ-ರುಚಿಯಿಂದ ಮನೆ ಮಾತಾಗಿದೆ.
ವಿಜಯವಾಣಿಯ ಶನಿವಾರದ ಹಣ- ಝುಣ - ಮನ ಕಾಲಂ ಬರೆಯುವ ಉದಯ್ ಜಾದುಗಾರರ ಇವತ್ತಿನ ಕಾಲಂ ವಿಶೇಷವಾಗಿದೆ ರೆಸ್ಟೋರಂಟ್ ಮಾಲಿಕರ ಕಷ್ಟ ಅದಕ್ಕೆ ಪರಿಹಾರದ ಟಿಪ್ಸ್ ಕೂಡ ನೀಡಿದ್ದಾರೆ.
2012 ರಿಂದ ನಾನು ಅನಿವಾಯ೯ವಾಗಿ ಈ ಉದ್ಯಮದಲ್ಲಿ ತೊಡಗ ಬೇಕಾಯಿತು, ಎಲ್ಲಾ ರೀತಿಯ ಸಕ೯ಸ್ ನಡಿತಾನೆ ಇದೆ ಅದರಲ್ಲೂ ಪ್ರತಿ ದಿನ ಬೆಳಿಗ್ಗೆ ಹೊಸ ರಿಪೈಂಡ್ ಆಯಿಲ್ ನಿಂದ ಅಡುಗೆ ಭಟ್ಟರು ಸ್ನಾನ ಮಾಡಿ ಬಂದು ಅಡಿಗೆ ಪ್ರಾರಂಬಿಸ ಬೇಕು, ಪ್ರತಿ ದಿನ ಒಗೆದು ಶುಭ್ರ ಮಾಡಿದ ಸಮವಸ್ತ್ರ, ತಲೆಯ ಕೂದಲು ಉದರುವುದು ತಡೆಯಲು ಟೋಪಿ, ಈಗ ಕೊರಾನಾ ಕಾಲದಲ್ಲಿ ಮಾಸ್ಕ್, ಅಡುಗೆ ಮನೆಗಾಗಿಯೇ ಪ್ರತ್ಯೇಕ ಶುಚಿಗೊಳಿಸಿದ ಪಾದರಕ್ಷೆ ದರಿಸಿ ಅಡುಗೆ ಶುರು ಮಾಡಬೇಕು.
ಬೇರೆ ಸಿಬ್ಬಂದಿ ಅಥವ ಅತಿಥಿಗಳಿಗೆ ಪ್ರವೇಶ ಇಲ್ಲ, ಪ್ರಿಜ್ ನಲ್ಲಿಟ್ಟು ಬಳಸುವ ಚಟ್ನಿ/ಸಂಬಾರ್ ಗೆ ನಮ್ಮಲ್ಲಿ ಅವಕಾಶ ಇಲ್ಲ, ಟೇಸ್ಟಿಂಗ್ ಪೌಡರ್ (ಅಜಿನೋ ಮೋಟೋ), ಕೃತಕ ಬಣ್ಣ ಬಳಕೆ ಕೂಡ ನಮ್ಮಲ್ಲಿ ನಿಶೇದ ಇದೆ, ತರಕಾರಿ ಪ್ರತಿ ನಿತ್ಯ ತೊಳೆದು ಟೇಬಲ್ ರೋಲ್ ಹಾಸಿದ ಟೀಬಲ್ ಮೇಲೆ ಚಾಪಿಂಗ್ ಪ್ಲೇಟ್ ಮೇಲೆ ತರಕಾರಿ ಹೆಚ್ಚಬೇಕು.
ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ಗಾಗಿ ಪ್ರತ್ಯೇಕ ಕಸದ ಬುಟ್ಟಿ ಬಳಸಬೇಕು ಇಡ್ಲಿ, ವಡೆ ಇತ್ಯಾದಿ ತಿಂಡಿ ಚಿಮುಟದಲ್ಲಿ ತೆಗೆದು ಬಳಸಬೇಕು, ಕುಡಿಯಲು ಶುದ್ಧ ಪಿಲ್ಟರ್ ನೀರು, ಚಹಾಗೆ 3 Rose ( ಬ್ರೂಕ್ ಬಾಂಡ್) ಚಹಾ ಪುಡಿ, ನೀರು ಹಾಕದ ಹಾಲಿನಲ್ಲಿ ತಯಾರಿಸಿ ದೊಡ್ಡ ಗಾಜಿನ ಲೋಟದಲ್ಲಿ (ಬೇರೆ ಹೋಟಲಿನ ಎರೆಡು ಕಪ್ ಪ್ರಮಾಣದಲ್ಲಿ) ನೀಡುತ್ತೇವೆ ಇದೇ ರೀತಿ ಪ್ರಸಿದ್ಧ ಬ್ರಾಂಡ್ ಕೊಥಾಸ್ ಕಾಪಿ ಪುಡಿಯಿಂದ ತಯಾರಿಸಿದ ಪಿಲ್ಟರ್ ಕಾಫಿಗಾಗಿಯೇ ನಮ್ಮ ರೆಸ್ಟೋರೆಂಟ್ ಪ್ರಸಿದ್ದಿ ಪಡೆದಿದೆ.ವಿಶಾಲ ಪಾಕಿ೯೦ಗ್ ವ್ಯವಸ್ಥೆ, ಸ್ತ್ರಿ ಮತ್ತು ಪುರುಷರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ, ಕೈ ತೊಳೆಯಲು ಲೈಪ್ ಬಾಯ್ ಹ್ಯಾಂಡ್ ವಾಷ್, ಪೇಪರ್ ನ್ಯಾಪ್ ಕಿನ್, ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್, ವಿಶೇಷವಾಗಿ ಪ್ಯಾಮಿಲಿ ರೂಂ ನಮ್ಮಲ್ಲಿದೆ.ಚಪಾತಿ ರೊಟ್ಟಿ ಪ್ರತಿ ದಿನ ನಮ್ಮಲ್ಲೇ ತಯಾರಿಸಿ ಬಡಿಸುತ್ತೇವೆ (ಈಗ ಹೊರಗಿನಿಂದ ತರುವ ಚಪಾತಿ,ಪರೋಟ ತಂದು ಬಿಸಿ ಮಾಡಿ ನೀಡುವ ಪದ್ದತಿ ಹೆಚ್ಚಿನ ಹೋಟೆಲ್ ನಲ್ಲಿ ಪ್ರಾರಂಭ ಆಗಿದೆ) ಮುಂದಿನ ದಿನದಲ್ಲಿ ಶುದ್ಧ ಗಾಣದ ಎಣ್ಣೆಯಿಂದ ಎಲ್ಲಾ ಅಡುಗೆ ಮಾಡುವ ಗುರಿ ಇದೆ.
ಇದೆಲ್ಲದರಿಂದ ನನಗೆ ಕೆಲ ತಿಂಗಳು ನಷ್ಟವೂ ಆಗುತ್ತದೆ ಆದರೆ 2012ರಿಂದ ದೃತಿಗೆಡದೆ ಸತತ ಪ್ರಯತ್ನದಿಂದ ಸಾಗರ - ಶಿವಮೊಗ್ಗ ಮಾರ್ಗದ ಆನಂದಪುರಂನ ಯಡೇಹಳ್ಳಿ ವೃತ್ತದ ಮಲ್ಲಿಕಾ ವೆಜ್ ಶುಚಿ-ರುಚಿಯಲ್ಲಿ ಹೆಸರುವಾಸಿಯಾಗಿದೆ.
ಇಷ್ಟೆಲ್ಲ ಆದರೂ ನನಗೆ ಇನ್ನೂ ತೃಪ್ತಿ ತಂದಿಲ್ಲ ಎಷ್ಟೇ ತರಬೇತಿ ನೀಡಿದರೂ ತಪ್ಪು ಮಾಡುವ ಮತ್ತು ನಮ್ಮ ನಿಯಮ ಮೀರುವ ಸಿಬ್ಬಂದಿಗಳಿಂದ ನನ್ನ ರಕ್ತದ ಒತ್ತಡ ಮೇಲೆ ಕೆಳಗೆ ಆಗುವುದು ನಿಂತಿಲ್ಲ.
ಒಂದು ಕಾಲದಲ್ಲಿ ದಕ್ಷಿಣ ಭಾರತದ ಆಹಾರ ತಯಾರಿಯಲ್ಲಿ ಹೆಸರುವಾಸಿಗಳಾಗಿದ್ದ ಕನ್ನಡಿಗರು ಈ ಸ್ಥಾನ ಮಧ್ಯಪಾನ ಕುಡಿತ/ತಂಬಾಕು /ಗುಟುಕಗಳ ಬಳಕೆಯಿಂದ ಈಗ ಬೇಡಿಕೆ ಕಳೆದುಕೊಂಡಿದ್ದಾರೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಉದ್ಯೋಗ ಅವಕಾಶ ಕಳೆದುಕೊಂಡಿದ್ದಾರೆ.
ಇದರಲ್ಲಿ ಸಿಬ್ಬಂದಿ ಅಷ್ಟೇ ಹೋಟೆಲ್ ಮಾಲಿಕರೂ ಶುಚಿ ರುಚಿಗೆ ಪ್ರಾತಿನಿಧ್ಯತೆ ನೀಡದೆ ಕೇವಲ ಲಾಭಕ್ಕಾಗಿ ಹಾತೊರೆಯುವುದು ಒಂದು ಕಾರಣ ಆದರೆ ಇನ್ನೊಂದು ಈ ಬಗ್ಗೆ ತರಬೇತಿ ನೀಡಿ ಉದ್ಯೋಗ ಸೃಷ್ಟಿ ಮಾಡಬಹುದಾದ ದೊಡ್ಡ ಅವಕಾಶದ ಬಗ್ಗೆ ಸಕಾ೯ರಗಳ ನಿಲ೯ಕ್ಷ್ಯ ಕೂಡ.
ಆಹಾರ ಉತ್ಪಾದನ ಕ್ಷೇತ್ರ ಕನಿಷ್ಟ ಎನ್ನುವ ಮನಸ್ಥಿತಿ ಕೂಡ ಇಂದಿನ ಯುವ ಪೀಳಿಗೆ ಈ ಉದ್ಯೋಗದಿಂದ ದೂರ ಆಗಲು ಕಾರಣ ಹಾಗಾಗಿ ಹೋಟೆಲ್ ಉದ್ದಿಮೆಯಲ್ಲಿ ಹೊರ ರಾಜ್ಯದ ಸಿಬ್ಬ೦ದಿಗಳು ಹೆಚ್ಚು ಇದ್ದಾರೆ.
ದಕ್ಷಿಣ ಬಾರತೀಯ ಅಡುಗೆಗಾಗಿ ನನಗೆ ಈಗ ಬೆಂಗಳೂರಿನ ಅಡಿಗಾಸ್ ಅಲ್ಲಿ ಕೆಲಸ ಮಾಡಿದ ಅನುಭವದ ಸಿಬ್ಬಂದಿ ಮತ್ತು ಉತ್ತರ ಭಾರತೀಯ ಅಡುಗೆಗಾಗಿ ದೂರದ ಪಶ್ಚಿಮ ಬಂಗಾಳದ ಬೆಂಗಾಲಿ ಸಿಬ್ಬಂದಿಗಳಿದ್ದಾರೆ.
ಸದ್ಯದಲ್ಲಿ ಅಕ್ಕಿ ಮತ್ತು ರಾಗಿ ರೊಟ್ಟಿಗಳನ್ನು ಕೆಂಪು ಚಟ್ನಿ ಪಲ್ಯದ ಜೊತೆ ಗ್ರಾಹಕರಿಗೆ ನೀಡುವ ಉದ್ದೇಶವೂ ನನ್ನದಾಗಿದೆ.
ಇದೆಲ್ಲ ದೀಘ೯ ಬರಹ ಉದಯ್ ಜಾದುಗಾರರ ಲೇಖನ ಓದಿದ ನಂತರ ಬರೆಯುವ ಹುಕಿ ಬಂತು.
Comments
Post a Comment