ನ್ಯೂಜಿಲೆಂಡ್ ನ ಜೇನುತುಪ್ಪಕ್ಕೆ ಜಾಗತೀಕ ಮಾರುಕಟ್ಟೆಯಲ್ಲಿ ರೂ 22 ಸಾವಿರ ಇದೆ, ಪಶ್ಚಿಮ ಘಟ್ಟದಲ್ಲಿನ ಶುದ್ಧ ಪೆಟ್ಟಿಗೆ ಜೇನಿಗೆ 450 ರಿಂದ 500 ಇದೆ ಆದರೆ ಇತ್ತೀಚಿನ ವರ್ಷದಲ್ಲಿ ಜೇನು ಉತ್ಪಾದನೆ ಕಡಿಮೆ ಇದೆ ಆದರೆ ನಕಲಿ ಜೇನು ತುಪ್ಪ ಮಾತ್ರ ಭರಪೂರ ಮಾರಾಟದಲ್ಲಿದೆ
#ಜೇನುತುಪ್ಪಾ_ತಾಜಾ_ಬೇಕಾ?
ಪ್ರಸಿದ್ಧ ಬ್ರಾಂಡ್ ಜೇನು ತುಪ್ಪಾ ಶುದ್ದ ಜೇನುತುಪ್ಪ ಅಂತ ಬಾವಿಸಿದ್ದು ಮೊನ್ನೆಯ ಪ್ರಜಾವಾಣಿಯ ವರದಿಯಿಂದ ಹುಸಿ ಆಯಿತು, ಸ್ಥಳಿಯ ಜೇನು ತುಪ್ಪ ಮಾರಾಟಗಾರರು ಕಲಬೆರಕೆ ಜೇನು ತುಪ್ಪವನ್ನೇ ಮಾರುತ್ತಾರೆ, ಕಾರಣ ಶುದ್ಧ ಜೇನುತುಪ್ಪದ ಕೊರತೆ ಮತ್ತು ಅದರ ಬೆಲೆಯೂ ಕಾರಣ.
ನನ್ನ ಹತ್ತಿರ 6 ಪೆಟ್ಟಿಗೆ ಇದೆ ಅದರಲ್ಲಿ 5 ರಲ್ಲಿಯ ಜೇನು ಇಲ್ಲ ಆದ ಕಾರಣ ಸಾಗರದ ಜೇನು ತಜ್ಞರಾದ #ನಾಗೇಂದ್ರಸಾಗರ್ ಜೇನು ಕುಟುಂಬ ತುಂಬಿಸಿ ತರಲು ಒಯ್ದಿದ್ದಾರೆ.
ಇತ್ತೀಚಿನ ಕೆಲ ವರ್ಷದಿಂದ ನಾನು ನಾಗೇಂದ್ರ ಸಾಗರ್ ಹತ್ತಿರ ಜೇನು ತುಪ್ಪ ಖರೀದಿಸುತ್ತೇನೆ ಕೆಜಿಗೆ 450 ತೆಗೆದುಕೊಳ್ಳುತ್ತಾರೆ ಹೆಚ್ಚಾಗಿ ಉಡುಗೊರೆ ಆಗಿ ಕೊಡಲು ಇದನ್ನ ಖರೀದಿಸುತ್ತೇನೆ ಈ ವರ್ಷ 50 ಕೆಜಿ ಖರೀದಿಸಿರ ಬಹುದು.
ಈ ರೀತಿ ಉಡುಗೊರೆ ಪಡೆದವರು ಜೇನು ತುಪ್ಪ ಬೇಕು ಅಂತ ಒತ್ತಾಯಿಸುತ್ತಾರೆ ಅವರನ್ನ ನಾಗೇಂದ್ರ ಸಾಗರ್ ಗೆ ಪರಿಚಯಿಸುವುದು ನನ್ನ ಕೆಲಸ.
ಪರಿಶುದ್ಧ ಜೇನು ತುಪ್ಪ (Raw Honey ) ದುಬಾರಿ ಅನ್ನುತ್ತೇವೆ ಆದರೆ ನ್ಯೂಜಿಲೆಂಡಿನ ಜೇನು ತುಪ್ಪಕ್ಕೆ ಕೆ.ಜಿ.ಗೆ 22 ಸಾವಿರ ಇದೆ ಅಂದರೆ ನಂಬಲು ಸಾಧ್ಯವಾಗಲಿಲ್ಲ ಆದರೆ ಅದು ಖಚಿತ, ಒಮ್ಮೆ ದುಬೈನ ಶೇಖ್ ನಮ್ಮಲ್ಲಿ ಉಳಿದಿದ್ದರು ಅವರು ಕುಡಿಯುವ ಚಹಾಕ್ಕೆ ಈ ಜೇನು ತುಪ್ಪ ಬೇಕೇ ಬೇಕು.
ನಮ್ಮಲ್ಲಿನ ಜೇನು ಪೆಟ್ಟಿಗೆ ಜೇನು ತುಪ್ಪ ತೆಗೆಯುವಾಗಲೇ ನನ್ನ ಗೆಳೆಯರು ಸಿಬ್ಬಂದಿಗಳು ಸಾಲಾಗಿ ಪ್ರಪಂಚದ ಪರಿಶುದ್ಧ ನೈಸಗಿ೯ಕ ಜೇನಿನ ಕೇಕ್ ಅನ್ನುತ್ತಾ ಪೂರ್ತಿ ಜೇನು ತಟ್ಟಿ ಕತ್ತರಿಸಿ ಕತ್ತರಿಸಿ ಖಾಲಿ ಮಾಡುತ್ತಾರೆ.
Comments
Post a Comment