#ಶಾ೦ಪೇನ್_ಮತ್ತು_ವೈನ್
ಕ್ರಿಸ್ಮಸ್ ಮತ್ತು ಹೊಸ ವಷ೯ದ ಶುಭಾಷಯದ ಜೊತೆ ಕೇಕ್ ಜೊತೆ ದ್ರಾಕ್ಷಾರಸ (ವೈನ್), ಕೆಲ ನಮ್ಮ ಆಪ್ತರಾದ ಊರಿನ ಕ್ರಿಸ್ತ ಬಾಂದವರಿಗೆ ನೀಡಲು ವೈನ್ ಖರೀದಿಸ ಬೇಕಾಗಿತ್ತು.
ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ( ಶಾಂತವೇರಿ ಗೋಪಾಲ ಗೌಡ ರಸ್ತೆ) ಹಾಪ್ ಕಾಮ್ಸ್ ಪಕ್ಕದಲ್ಲಿ ಸಕಾ೯ರದ ವ್ಯೆನ್ ಶಾಪ್ ನಲ್ಲಿ ಒಳ್ಳೆಯ ವೈನ್ ಮತ್ತು ಶಾಂಪೇನ್ ಗಳು ಮಾರಾಟಕ್ಕೆ ಇದೆ ಅಂತ ಗೊತ್ತಾದ ಮೇಲೆ ಅಲ್ಲಿಂದಲೇ ಖರೀದಿಸಿದೆ.
ದೇಶ ವಿದೇಶದ ಬ್ರಾಂಡ್ ಗಳ ವೈನ್ & ಶಾಂಪೇನ್ ಜೊತೆ ನಮ್ಮ ರಾಜ್ಯದ ದ್ರಾಕ್ಷಿ ಬೆಳೆಗಾರರು ತಯಾರಿಸಿದ ವೈನ್‌ಗಳೂ ಇಲ್ಲಿವೆ. ಕಿಕ್ ಜಾಸ್ತಿ ಇರುವ fortified wine (ಆಲ್ಕೊಹಾಲ್ ಅಂಶ ಹೆಚ್ಚಿರುವ) ಕೂಡ ಇಟ್ಟಿದ್ದಾರೆ.
ವೈನ್ ಮಲೆನಾಡಿನಲ್ಲಿನ ಮದು ಪ್ರಿಯರನ್ನ ಹೇಗೆ ಆಕಷಿ೯ಸಿದೆ ಅಂತ ವಿಚಾರಿಸಿದರೆ ನಿರಾಷೆಯ ಉತ್ತರ ಸಿಕ್ಕಿತು, ಜನ ವಿಸ್ಕಿ ಬ್ರಾಂಡಿ ಕುಡಿಯುವವರು ವೈನ್ ಇಷ್ಟ ಪಡುವುದಿಲ್ಲ.
ದ್ರಾಕ್ಷಿಯನ್ನ ಕೊಳೆ ಹಾಕಿ ಇದಕ್ಕೆ ಸಕ್ಕರೆ ಯಿಸ್ಟ್ ಸೇರಿಸಿ ರಸ ತೆಗೆದು ವೈನ್ ತಯಾರಿಸುತ್ತಾರೆ ಇದರಲ್ಲಿ ನೂರಾರು ಮಾದರಿ ಇದೆ. ಇದೇ ರೀತಿ ಶಾಂಪೇನ್ ಕೂಡ (Sparkling wine) ಆದರೆ ಇದರಲ್ಲೂ ಅನೇಕ ತಕ೯ ಇದೆ "ಶಾಂಪೇನ್ sparkling wine ಒಂದೇ ಆದರೆ ಎಲ್ಲಾ sparkling wine ಶಾಂಪೇನ್ ಅಲ್ಲ" ಅಂತ ಇದಕ್ಕೆ ಕಾರಣ ಯುರೋಪಿನ ಶಾಂಪೇನ್ ಪ್ರದೇಶದಲ್ಲಿ ಮೂರು ನಿದಿ೯ಷ್ಟ ಆಯ್ಕೆ ಮಾಡಿದ ದ್ರಾಕ್ಷಿ ಬಳಸಿ ಅದು ಯೀಸ್ಟ್ ಮತ್ತು ಕಾಬ೯ನ್ ಡೈ ಆಕ್ಸೈಡ್ ಜೊತೆ ತಯಾರಿಸಿದ್ದು ಮಾತ್ರ ಶಾಂಪೇನ್ ಅ೦ತೆ.
ವೈನ್ ಮತ್ತು ಶಾಂಪೇನ್ ಪ್ರತ್ಯೇಕವಾಗಿಯೂ ಅಥವ ಮಿಶ್ರಣ ಮಾಡಿಯೂ ಕುಡಿಯಬಹುದು ಆದರೆ ಇವೆರೆಡು ಕುಡಿಯಲು ವಿಶೇಷ ಗಾಜಿನ ಲೋಟ ಇದೆ ಏಕೆಂದರೆ ಇದರಲ್ಲಿನ ಬಬಲ್ಸ್ ಗ್ಲಾಸಿನ ಮೇಲೆ ಬಂದು ಗೋಲಾಕಾರದ ಮೇಲ್ಪದರಕ್ಕೆ ತಾಗಿ ಪುನಃ ಕೆಳಗೆ ಹೋಗುವಂತ ಗೋಲಾಕಾರದ ಉದ್ದ ಹಿಡಿಯ ವೈನ್ ಗ್ಲಾಸ್ ಇರಲೇಬೇಕು.
ವೈನ್ ಅಥವ ಶಾಂಪೇನ್ ರೆಪ್ರಿಜೆಟರ್ ನಲ್ಲಿ ತಂಪಾಗಿಸಿ ಕುಡಿದರೆ ಅದರ ಮಜವೇ ಬೇರೆ. ಶಾಂಪೇನ್ ಬಾಟಲ್ ಗೆ ಮರದ ಕಾಕ್೯ ಇರುತ್ತದೆ ಅದನ್ನು ತೆರೆದ ನಂತರ ಪೂಣ೯ ಬಾಟಲ್ ಅವತ್ತೇ ಖಾಲಿ ಮಾಡುವುದು ಒಳಿತು ಸಾಧ್ಯವಾಗದಿದ್ದರೆ ಪುನಃ ಕಾಕ್೯ ಹಾಕಿ ಪ್ರಿಜ್ ನಲ್ಲಿಟ್ಟರೆ 5 ದಿನ ಇಡಬಹುದಂತೆ.
ಇಲ್ಲಿ ನೆನಪಿಡಬೇಕಾದ್ದು ವೈನ್ ಅಥವ ಶಾಂಪೇನ್ ಜೊತೆಗೆ ಯಾವ ಕಾರಣಕ್ಕೂ ವೊಡ್ಕಾ ಕಾಕ್ ಟೈಲ್ ನಿಷೇದ ಇದೆ.
ವೈನ್ ಮತ್ತು ಶಾಂಪೇನ್ ಹೃದಯಕ್ಕೆ ಆರೋಗ್ಯಕರ, ಕೆಟ್ಟ ಕೊಲೆಸ್ಟ್ರಾಲ್ ತೆಗೆಯುತ್ತದೆ, ಆ್ಯಂಟಿ ಆಕ್ಸಿಡೆಂಟ್, ರಕ್ತ ಹೆಪ್ಪುಗಟ್ಟುವುದಿಲ್ಲ, ಪಾಶ್ವ೯ವಾಯು ತಡೆಯುತ್ತದೆ, ಸಕ್ಕರೆ ಕಾಯಿಲೆ ಇದ್ದವರೂ ಕುಡಿಯ ಬಹುದೆಂಬ ಅನೇಕ ವರದಿಗಳಿದೆ ಆದರೆ ಹಣ್ಣಿನ ರಸದ ವೈನ್ ಇನ್ನೂ ಭಾರತೀಯರ ಬಳಕೆಯಲ್ಲಿ ಹೆಚ್ಚು ಆಗಿಲ್ಲ ಇದಕ್ಕೆ ಕಾರಣ ಸರಕಾರಗಳು ಜನರಿಗೆ ಹೆಚ್ಚು ಅಮಲಿನ ಕಡಿಮೆ ದಜೆ೯ಯ ಜನರ ಆರೋಗ್ಯಕ್ಕೆ ಮಾರಕವಾದ ಮಧ್ಯ ಮಾರಾಟಕ್ಕೆ ನೀಡುತ್ತಿರುವ ಪ್ರೋತ್ಸಾಹ ತೋಟಗಾರಿಕಾ ಬೆಳೆ ದ್ರಾಕ್ಷಿಯ ವೈನ್ ತಯಾರಿಕೆ ಮತ್ತು ಮಾರಾಟಕ್ಕೆ ನೀಡದಿರುವುದು ವಿಪಯಾ೯ಸವೇ ಸರಿ, ಹಳ್ಳಿ ಹಳ್ಳಿಗಳಲ್ಲೂ ವೈನ್ ಮಾರಾಟಕ್ಕೆ ಅವಕಾಶ ನೀಡಿ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಸಕಾ೯ರದ ಕ್ರಮ ಯಾವಾಗಲೋ?.
ಗೆಳೆಯರಿಗೆ ವೈನ್ ಖರೀದಿಸಲು ಹೋದವನು ಅಲ್ಲಿ ನನಗಾಗಿ ಒಂದು ಪ್ರಾನ್ಸ್ ದೇಶದ ವೈನ್ ಮತ್ತು ಶಾಂಪೇನ್ ಖರೀದಿಸಿದೆ ಇದರಿಂದ ವೈನ್ ಅಂಗಡಿಯವ ಎರೆಡು ವೈನ್ ಗ್ಲಾಸ್ ಕೊಡುಗೆ ನೀಡಿದ ಅತ್ಯುತ್ತಮವಾದ ವೈನ್ & ಶಾಂಪೇನ್ ಕ್ರಿಸ್ಮಸ್ ಗೆ ಖಾಲಿ ಆಯಿತು ಮತ್ತೆ ಹೊಸ ವರ್ಷಕ್ಕೆ ಖರೀದಿಸಿ ತರಲು ಮನಸ್ಸು ಚಡಪಡಿಸುತ್ತಿದೆ.
Comments
Post a Comment