#ಆನಂದಪುರದ_ಚಿರಪರಿಚಿತರಾದ_ಹೋಟೆಲ್_ಕೃಷ್ಣಣ್ಣ
ಹೋಟೆಲ್ ಕೃಷ್ಣಣ್ಣ, ತಿಂಡಿ ಕೃಷ್ಣಣ್ಣ ಅಂತೆಲ್ಲ ಕರೆಯುವ ಸದಾ ನಗುಮೊಗದ ಕೃಷ್ಣಣ್ಣ ನಿನ್ನೆ ಸಿಕ್ಕಿದ್ದರು ಅವರಿಗೆ ಈಗ 84 ವರ್ಷ ಆದರೆ ಅವರು 35 ವರ್ಷದವರಷ್ಟೆ ಕ್ರಿಯಾಶೀಲರು.
ಪ್ರತಿನಿತ್ಯ ಬೆಳಿಗ್ಗೆ ಸಂಜೆ ಅವರ ಕೃಷಿ ಕೆಲಸದ ಜೊತೆ ಆನಂದಪುರದಲ್ಲಿನ ಅವರ ಹೋಟೆಲ್ ವ್ಯವಹಾರ ನಿರಂತರ ನಡೆಸಿ ಕೊಂಡು ಬರುತ್ತಿದ್ದಾರೆ.
ಇದರ ಮಧ್ಯೆ ಸುತ್ತ ಮುತ್ತಲಿನ ಸಂತೆ ಮತ್ತು ಜಾತ್ರೆಯಲ್ಲಿ ಇವರ ಬೆಂಡು ಬತ್ತಾಸು, ಬೂಂದಿ ಖಾರ ಮತ್ತು ಮಂಡಕ್ಕಿ ಅಂಗಡಿ ಇರದಿದ್ದರೆ ನೆರೆದ ಜನ ಆ ವಷ೯ದ ಜಾತ್ರೆ ಜೋರಾಗಿಲ್ಲ ತಿಂಡಿ ಕೃಷ್ಣಣ್ಣ ಅಂಗಡಿನೇ ಹಾಕಿಲ್ಲ ಅನ್ನುವಷ್ಟರವರೆಗೆ ಇವರ ಪ್ರಸಿದ್ದಿ ಇದೆ.
1960 ರ ದಶಕದಲ್ಲಿ ಇವರೆಲ್ಲ ಆನಂದಪುರದ ಪ್ರಸಿದ್ದ ನಾಟಕ ಕಲಾವಿದರು ನಮ್ಮ ತಂದೆಗೆ ಹೀರೋ ಪಾತ್ರವಂತೆ ಆದರೆ ಜೋಗಿ ಹನುಮಂತಣ್ಣ ನಾಟಕ ನಿದೇ೯ಶನ ಮಾಡುತ್ತಿದ್ದದ್ದು ನನಗೆ ಗೊತ್ತಾಗಿದ್ದೆ ನಿನ್ನೆ ಕೃಷ್ಣಣ್ಣರ ಹತ್ತಿರ ಮಾತಾಡಿದಾಗ.
ಆಗಿನ ಆನಂದಪುರಂನ ಪ್ರಸಿದ್ಧ ಹೋಟೆಲ್ ಕಿಣಿ ರಾಯರ ಕೋಮಲ ವಿಲಾಸ್ ಪಕ್ಕ 10 x 10 ಅಡಿಯ ಅತ್ಯಂತ ಸಣ್ಣದಾದ ಮಳಿಗೆ ಜೋಗಿ ಹನುಮಂತಣ್ಣನದ್ದು ಅದು ಭೂ ಮಾಲಿಕರಾದ ವೆಂಕಟಾಚಲಯ್ಯ0ಗಾರರಿಂದ (ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರರ ಸಹೋದರ) ಬಾಡಿಗೆ ಪಡೆದದ್ದು.
ಅಲ್ಲಿ ಏನುಂಟು ಏನಿಲ್ಲ! ಆಲೆಮನೆ ಬೆಲ್ಲ ಶೇಖರಣೆಗಾಗಿ ಹೊಸ ಟಿನ್ ತಗಡಿನ ಡಬ್ಬ ತಯಾರಿ, ಖಾಲಿಯಾದ ಎಣ್ಣೆ ಡಬ್ಬಕ್ಕೆ ದೊಡ್ಡ ಮುಚ್ಚುಳ ಅಳವಡಿಸುವುದು, ಛತ್ರಿ ರಿಪೇರಿ, ಟಾಚ್೯ ರಿಪೇರಿ, ಶಿಕಾರಿಗಾಗಿ ಹೆಡ್ ಲೈಟ್ ತಯಾರಿ ಹೀಗೆ ಸಣ್ಣ ಮಕ್ಕಳಾದ ನಮಗೆ ಜೋಗಿ ಹನುಮಂತಣ್ಣ ಒಂದು ರೀತಿ ವಿಸ್ಮಯ ಹಾಗೂ ವಿಜ್ಞಾನಿ ಅಂತೆ ಕಂಡು ಬರುತ್ತಿದ್ದರು.
ಇವರೆಲ್ಲ ಸಣ್ಣ ಊರಾಗಿದ್ದ ಆನಂದಪುರದಲ್ಲಿನ ಊರ ಸ್ವಾಸ್ಥ್ಯ ಕಾಪಾಡಿದವರು, ಊರಿನ ನ್ಯಾಯ ಪಂಚಾಯಿತಿ ಮಾಡುತ್ತಿದ್ದವರು, ಊರಿನ ಜನತೆಗೆ ಆಗಿನ ಕಾಲದಲ್ಲಿ ನಾಟಕ ಕಲಿತು ಆಡಿ ತೋರಿಸಿ ಜನರಿಗೆ ಮನೋರಂಜಿಸಿದವರು.
ನಮ್ಮ ತಂದೆ ಆದಿ ಆಗಿ ಆಗಿನವರೆಲ್ಲ ಈಗಿಲ್ಲ ಅವರ ಕಿರಿಯ ಒಡನಾಡಿ ತಿಂಡಿ ಕೃಷ್ಣಣ್ಣ ಇದ್ದಾರೆ ಇನ್ನೊಮ್ಮೆ ಅವರನ್ನ ಬಿಡುವಿನಲ್ಲಿ ಬೇಟಿ ಮಾಡಿ 1960 ರ ದಶಕದ ಆನಂದಪುರದ ಕಥೆ ಕೇಳಬೇಕಾಗಿದೆ.
Comments
Post a Comment