ನಾನು ನಿನ್ನೆ ಶಿವಮೊಗ್ಗದಲ್ಲಿ ನನ್ನ ಅಣ್ಣನ ಮೊದಲ ಮೊಮ್ಮಗನಿಗಾಗಿ ತೊಟ್ಟಿಲು ಖರೀದಿಸಿದೆ, ನನ್ನ ಜೀವಮಾನದ ಎರಡನೇ ತೊಟ್ಟಿಲು ಇದು ಮೊದಲನೆಯದ್ದು 1985ರಲ್ಲಿ ನನ್ನ ಅಕ್ಕನ ಮಗಳಿಗಾಗಿ ವೆಲ್ಡಿಂಗ್ ಶಾಪ್ ಒ0ದರಲ್ಲಿ ತಯಾರಿಸಿ ತಂದ ಕಬ್ಬಿಣದ ಸ್ಟ್ಯಾಂಡಿಂಗ್ ತೊಟ್ಟಲದು.
ನಿನ್ನೆ ಖರೀದಿ ಮಾಡಿದ್ದು ಮಹಿಂದ್ರಾ ಕಂಪನಿಯ Firstcry ಎಂಬ ಶಿವಮೊಗ್ಗದ ಮಳಿಗೆಯಲ್ಲಿ, ಕಡಿಮೆ ಬಾರದ ಹಗುರಾದ ಆದರೆ ನವಜಾತ ಶಿಶುವಿನಷ್ಟೇ ಮೃದುವಾದ ಬಟ್ಟೆಗಳನ್ನ ಬಳಸಿರುವ, ಸೊಳ್ಳೆಗಳು ಪ್ರವೇಶ ಮಾಡದಂತ, ಬೇಕಾದರೆ ತೂಗುವ ಬೇಡವಾದರೆ ಸ್ಥಿರವಾಗಿ ನಿಲ್ಲುವಂತ, ರೂಮಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ದೂಡಿಕೊಂಡು ಒಯ್ಯುವಂತ ವೀಲುಗಳು ಇರುವ ತೊಟ್ಟಿಲು ಇದು.
ಶಿವಮೊಗ್ಗದ ಈ ಸಂಸ್ಥೆಯ ಪ್ರಾಂಚೈಸಿದಾರರು #ಶಿವಮೊಗ್ಗದ_ಮಾಜಿ_ಶಾಸಕರಾದ_ಪ್ರಸನ್ನ_ಕುಮಾರ್ ಅವರು ಹೊಂದಿದ್ದಾರೆ, ಜಿಲ್ಲೆಯ ಜನತೆಗೆ ಅವಶ್ಯವಿರುವ ಈ ಉದ್ದಿಮೆ ಪ್ರಾರಂಬಿಸಿರುವ ಹಿರಿಮೆ ಅವರದ್ದು.
ವೈಜ್ಞಾನಿಕವಾಗಿ ನಿರಂತರ ಸಂಶೋದನೆ ಮತ್ತು ಅಭಿವೃದ್ದಿ (R&D) ಮಾಡುತ್ತಾ ದೇಶದಾದ್ಯಂತ ನವಜಾತ ಶಿಶುಗಳಿಗೆ ಬೇಕಾದ ಎಲ್ಲಾ ರೀತಿಯ ಉಡುಪು, ಹಾಸಿಗೆ, ತೊಟ್ಟಲು, ಸೋಪು, ಪೌಡರ್, ಕ್ರೀಂ, ರೈಮ್ ಬುಕ್ಸ್, ಆಟಿಕೆಗಳ ಮಾರಾಟ ಕೇಂದ್ರಗಳ ಸರಪಳಿಯನ್ನೇ ಪ್ರಖ್ಯಾತ ವಾಹನಗಳ ತಯಾರಕ ಸಂಸ್ಥೆ ಮಹೀಂದ್ರಾ & ಮಹೀಂದ್ರಾ ಸಂಸ್ಥೆ ಪಾರಂಬಿಸಿದೆ (ಪ್ರವಾಸೋದ್ಯಮದಲ್ಲಿ ಕೂಡ ಮಹಿಂದ್ರಾ ರೆಸಾಟ್೯ ಪ್ರಖ್ಯಾತಿ ಪಡೆದಿದೆ).
ಬ್ರಾಂಡೆಡ್ ಆಗಿರುವ ಮಳಿಗೆಗೆ ಮಕ್ಕಳ ಪೋಷಕರು ಮಾತ್ರ ಅಲ್ಲ ಗೆಳೆಯರು ಸಂಬಂದಿಗಳು ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ, ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಲು ಇಲ್ಲಿಗೆ ಬರುತ್ತಾರೆ.
ಶಿವಮೊಗ್ಗದ ನೆಹರೂ ರಸ್ತೆಯಲ್ಲಿನ ಬೇರಿಸ್ ಸಿಟಿ ಸೆಂಟರ್ ಮಾಲ್ ಸಮೀಪದಲ್ಲೇ #firstcry ನ ಎರಡು ಅಂತಸ್ಥಿನ ಮಾಲ್ ಇದೆ.
ಸದಾ ಜನ ಜಂಗುಳಿ ಇರುವ ಇದು ಸಣ್ಣ ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಸಿಗುವ one stop store ಇದು.
Comments
Post a Comment