ಶಿವಾನಂದ ಕಳವೆ ಬಗ್ಗೆ ಓದಿ ತಿಳಿದಿದ್ದೆ, ಇವರ ಬಗ್ಗೆ ಪ್ರಕಾಶ್ ರೈ ಅಂತ ಸಿನಿಮಾ ನಟರು ಬರೆದ ಲೇಖನ, ಇವರ ಕಾಡಿನ ಒಡನಾಟಗಳು, ಹೊಸ ಕೆರೆ ನಿಮಾ೯ಣ ಅದಕ್ಕೆ ಚಲನಚಿತ್ರ ನಟ ಯಶ್ ರ ಬೆಂಬಲ ಹೀಗೆಲ್ಲ ಇವರ ನನ್ನ ಸ್ನೇಹ ಪೇಸ್ ಬುಕ್ ನಿಂದಾಗಿ ನಿನ್ನೆ ಪ್ರತ್ಯಕ್ಷ ಬೇಟಿ ಆಯಿತು
ಪಶ್ಚಿಮ ಘಟ್ಟದ ಜಲತಜ್ಞ, ಪರಿಸರ ಪ್ರೇಮಿ, ಕೃಷಿ ತರಬೇತಿದಾರ, ಕಾಡಿನ ಬಗ್ಗೆ ಇವರು ಜ್ಞಾನ ಭಂಡಾರ ಇದ್ದಂತೆ, ಅನೇಕ ಕೆರೆಗಳ ಪುನರಿಜ್ಜೀವನ ಮಾಡಿದ ಆದುನಿಕ ಭಗೀರಥ ಅಂತೆಲ್ಲ ಇವರಿಗೆ ಬಿರುದುಗಳಿದೆ ಆದರೆ ಇವರು ಅತ್ಯಂತ ಸರಳ ವ್ಯಕ್ತಿ ಅಷ್ಟೇ ಅಲ್ಲ ಈ ಬಿರುದುಗಳಿಗಿಂತ ಹತ್ತು ಪಟ್ಟು ಹೆಚ್ಚಿನವರು.
ನಿನ್ನೆ (30- ನವೆಂಬರ್ -2020) ಸಿಸಿ೯ಯಿಂದ ಬಿದನೂರು ನಗರಕ್ಕೆ ಹೋಗಿ ಅಲ್ಲಿನ ಕೆಳದಿ ಅರಸರು ನಿಮಿ೯ಸಿದ ದೇವಗಂಗೆ ಕೊಳ, ಅದಕ್ಕೆ ನೀರಿನ ಮೂಲದ ಗುಡ್ಡದ ಮೇಲಿನ ದೊಡ್ಡ ಕೆರೆ ಮತ್ತು ಕೋಟೆ ಇತಿಹಾಸಕಾರರೂ ಕಾದಂಬರಿಕಾರರೂ ಆದ #ಅ೦ಬ್ರಯ್ಯಮಠ ಜೊತೆ ವೀಕ್ಷಿಸಿ ಆನಂದಪುರಕ್ಕೆ ಬಂದರು.
ಇವರ ಆಗಮನ ತಿಳಿದು ನಮ್ಮ ಊರಿನ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್, ಸ್ಥಳಿಯ ಈಜು ಬಳಗ ಮತ್ತು ಪತ್ರಕರ್ತರು ಬಂದು ಇವರನ್ನ ಬೇಟಿ ಮಾಡಿದರು.
ನಮ್ಮ ಸಂಸ್ಥೆಯವತಿಯಿಂದ ಇವರಿಗೆ ಕುಂಟಿಕಾನು ಮಠದವರು ಬರೆದ 800 ಪುಟಗಳ ಶ್ರೀ ರಾಮಕಥಾ ಮಂಜರಿ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿ ಸ್ವಾಗತಿಸಿದೆವು.
ಇಲ್ಲಿ ತನಕ ಪೇಸ್ಬುಕ್ ಸ್ನೇಹಿತರಾಗಿದ್ದವರು, ಪೋನಿನಲ್ಲಿ ಮಾತ್ರ ಸಂಪಕ೯ ಇವತ್ತು ನೇರ ಬೇಟಿ ಆಯಿತು.
ಅವರ ಅನೇಕ ಅನುಭವಗಳನ್ನು ಕೇಳುವ ಅವಕಾಶ ಆಯಿತು ಮರುದಿನ ನೂತನ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದು ಮಧ್ಯಾಹ್ನ ನನಗೆ ಅವರು ಬರೆದ ಪುಸ್ತಕ ಕನಾ೯ಟಕ ಕೃಷಿ ಪ್ರವಾಸ ಕಥನ -3 "ಕಾಡು ತೋಟ" ನೆನಪಿಗಾಗಿ ನೀಡಿ ಇನ್ನೊಮ್ಮೆ ಬರುವುದಾಗಿ ತಿಳಿಸಿ ಹೋದರು.
ನಿಜಕ್ಕೂ ನಮ್ಮ ನಡುವೆ ಎಂತೆಂತಹ ಆದ್ಬುತ ಪ್ರತಿಬೆ ಇದ್ದವರು ಎಲೆ ಮರೆಯ ಕಾಯಿಯಂತೆ ಅವರ ಕಾಯ೯ನಿವ೯ಹಿಸುತ್ತಾರೆ ಅಂತ ಅನ್ನಿಸಿತು.
Comments
Post a Comment