ಚೀನಿ ಕಾಯಿ ಎಂಬ ಹೆಸರು ಸಿಹಿ ಕುಂಬಳಕ್ಕೆ ಚೀನಾದಿಂದ ಬಂತಾ? (ಚೀನ ವಿಶ್ವದಲ್ಲೇ ಅತ್ಯದಿಕ ಚೀನಿ ಕಾಯಿ ಬೆಳೆಯುವ ದೇಶ) ಅಥವ ಹಿಂದಿಯ ಸಕ್ಕರೆ (ಚೀನಿ ) ಅಂತಾನೋ ?
ಇದು ಅತಿ ಚಿಕ್ಕ ಚೀನಿ ಕಾಯಿ ತಳಿ,ಇದರಲ್ಲಿ ಗರಿಷ್ಟ ಒಂದು ಟನ್ ವರೆಗೆ ಬೆಳೆಯು ತಳಿಯೂ ಇದೆ ಅಂತೆ ಪತ್ರಿಕೆಗಳಲ್ಲಿ ಓದಿದ್ದು.
ಆಪತ್ಪಾಂದವ ಮಿತ್ರ ಗೇರುಬೀಸು ಚೆನ್ನಪ್ಪ ಬೆಳೆದಿದ್ದು ತಂದು ಕೊಟ್ಟಿದ್ದಾನೆ, ಇದು ಬೇಯಿಸಿ ಹಾಲು ಬೆಲ್ಲದೊಂದಿದೆ ತಿನ್ನುವುದು ನನಗೆ ಇಷ್ಟ ಪುನಃ ತಂದು ಕೊಡಲು ಹೇಳಿದ್ದೇನೆ.
ಚೆನ್ನಪ್ಪ ಇದನ್ನು ಖರೀದಿಸುವವರು ಕಡಿಮೆ ಅಂದ, ಯಾಕೆಂದರೆ ಇದು ವಾತಾ ವಾಯು ಇತ್ಯಾದಿ ಕಾರಣದಿಂದ ಬಳಸುವವರು ಇದರಿಂದ ದೂರ.
ಭಾರತೀಯರು ಇದರಿಂದ ಕಡಬು, ಹಲ್ವಾ ಇತ್ಯಾದಿ ಸಿಹಿ ತಿಂಡಿ ಮಾಡುತ್ತಾರೆ ಇದರ ಹೂವು ಮೊಗ್ಗುಗಳಿಂದಲೂ ಇತರೆ ಪದಾಥ೯ ಜ್ಯೂಸ್ ಮಾಡುತ್ತಾರೆ ಆದರೆ ವಿದೇಶದಲ್ಲಿ ಇದು ಹೆಚ್ಚು ಬಳಕೆ ಪೈ ಎಂಬ ಸಿಹಿ ಕಡುಬಿಗೆ. ಈಗಲೂ ವಿಶ್ವದಲ್ಲಿ ಅತಿ ಹೆಚ್ಚು ಸಿಹಿ ಚೀನಿ ಕಾಯಿ ಬೆಳೆಯುವುದು ಚೀನಾ ದೇಶದಲ್ಲಿ ನಂತರದ ಸ್ಥಾನ ಭಾರತಕ್ಕೆ ಹಾಗಾಗಿ ಇದಕ್ಕೆ "ಚೀನಿ" ಕಾಯಿ ಅಂತ ಹೆಸರಾಗಿರ ಬಹುದಾ?
ಇದು ವಿಟಮಿನ್ ಮತ್ತು ಮಿನರಲ್ ಗಳನ್ನು ಯಥೇಚ್ಚ ಇರುವ, ಆಂಟಿ ಆಕ್ಸಿಡೆಂಟ್, ಅಸ್ತಮ ಮತ್ತು ಕ್ಯಾನ್ಸರ್ ನಿವಾರಕ, ಬಿಪಿ ಮತ್ತು ಶುಗರ್ ಕಾಯಿಲೆ ನಿಯಂತ್ರಣ ಕೂಡ ಇದರಿಂದ ಆಗುತ್ತದೆ ಎನ್ನುವುದು ಸಂಶೋದನೆಯಿಂದ ಸಾಬೀತಾಗಿದೆ ಅಂತೆ.
Comments
Post a Comment