ದೋಸೆ,ಇಡ್ಲಿ, ವಡೆ ಮತ್ತು ಹಪ್ಪಳಕ್ಕೆ ಉದ್ದಿನಕಾಳು ಬೇಕೇ ಬೇಕು ಮೊದಲೆಲ್ಲ ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬಗಳು ಭೂಮಿ ಫಲವತ್ತೆಗಾಗಿ ಉದ್ದು ಬಿತ್ತುತ್ತಿದ್ದರು ಅದನ್ನೇ ಬಳಸುತ್ತಿದ್ದರು ಆದರೆ ಈಗ ಭೂಮಿ ಫಲವತ್ತತೆಗೆ ಕೆಮಿಕಲ್ ಪಟಿ೯ಲೈಸರ್ ಇರುವುದರಿಂದ ಪುರಾತನವಾದ ಸಾಂಪ್ರದಾಯಿಕ ಸಾವಯವ ಮಾದರಿ ಯಾರಿಗೂ ಬೇಕಾಗಿಲ್ಲ.
ಅದೇ ರೀತಿ ಕಪ್ಪು ಉದ್ದಿನ ಕಾಳು ಬಳಸಿ ಮಾಡಿದ ಇಡ್ಲಿ ದೋಸೆಗಿಂತ ಪಾಲೀಶ್ ಆದ ಉದ್ದಿನಬೇಳೆಯಲ್ಲಿ ಮಾಡಿದ್ದು ಅಚ್ಚ ಬಿಳಿ ಆಗುವುದರಿಂದ ಕ್ರಮೇಣ ಕಪ್ಪು ಉದ್ದಿನಕಾಳು ಬಳಕೆ ಕಡಿಮೆ ಆಗಿದೆ.
ಹೈ ಪ್ರೋಟೀನ್ ವಾಲ್ಯೂ ಇರುವ , ಕೊಲೆಸ್ಟ್ರಾಲ್ ಕಡಿಮೆ ಮಾಡುವ, ಪ್ರೋಟೀನ್ ಯುಕ್ತ, ಕಾಬೊ೯ಹೈಡ್ರೇಡ್ ಹೆಚ್ಚಿರುವ ಏಷ್ಯಾ ಮೂಲದ ಉದ್ದಿನ ಕಾಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುತ್ತದೆ.
ತಮಿಳುನಾಡು, ಕೋಸ್ಟಲ್ ಆಂಧ್ರದಲ್ಲಿ ಇದನ್ನು ಮಳೆಗಾಲದ ಮತ್ತು ಬೇಸಿಗೆಯ ಬೆಳೆಯಾಗಿ ಬೆಳೆಯುತ್ತಾರೆ ಈಗಲೂ ದೇಶದಲ್ಲಿ ಅತಿ ಹೆಚ್ಚು ಉದ್ದು ಬೆಳೆಯುವ ಜಿಲ್ಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ (ಗುಂಟೂರು ಮೆಣಸು ಕೂಡ ಪ್ರಸಿದ್ಧಿ).
ಕಪ್ಪು ಉದ್ದು ಬೇಳೆ ಮಾಡಿ ಪಾಲೀಶ್ ಮಾಡಿದ ಉದ್ದಿನ ಬೇಳೆಗಿಂದ ಇಡೀ ಕಪ್ಪು ಉದ್ದಿನಿಂದ ಮಾಡಿದ ದೋಸೆ, ಇಡ್ಲಿ ಮತ್ತು ವಡೆ ತಿಂದು ನೋಡಿ ಇದರ ಆರೋಮವೇ ಬೇರೆ ಮತ್ತು ಉದ್ದಿನ ಬೇಳೆಯಲ್ಲಿ ಉದ್ದಿನ ಸಿಪ್ಪೆ ತೆಗೆದು ಪಾಲೀಶ್ ಮಾಡುವುದರಿಂದ ಉದ್ದಿನ ಅನೇಕ ಪೋಷಕಾಂಶ ಕಳೆದು ಹೋಗಿರುತ್ತದೆ.
ಇವತ್ತು ನಮ್ಮ ಮನೆಯಲ್ಲಿ ಕಪ್ಪು ಉದ್ದು ಬಳಸಿ ಮಾಡಿದ ಇಡ್ಲಿ ವಡೆ ನಿಜಕ್ಕೂ ಅತ್ಯಂತ ರುಚಿ ಆಗಿತ್ತು.
ಪ್ರಪಂಚದಾದ್ಯಂತ ಇರುವ ಕಪ್ಪು ಬಿಳಿಯರ ತಾರತಮ್ಯ ನಮ್ಮ ಆಹಾರದಲ್ಲೂ ನುಸುಳಿರುವುದು ವಿಷಾದನೀಯವೇ ಸರಿ.
Comments
Post a Comment