Skip to main content

Posts

Showing posts with the label Memories of Artist Soori/ Navatur Suresh Achar

Blog number 1299. ನವಟೂರಿನ ಸುರೇಶ್ ಆಚಾರ್ ಯಾನೆ ಸೂರಿ ಎಂಬ ಕಲಾವಿದನ ನೆನಪುಗಳು.

#ನವಟೂರು_ಸುರೇಶ್_ಆಚಾರ್_ದುರಂತ_ಜೀವನ. #ಶಿವಮೊಗ್ಗದ_ಮಲೆನಾಡು_ಟುಡೇ_ಲೇಖನ_ನೋಡಿದ_ಮೇಲೆ_ಗೊತ್ತಾಗಿದ್ದು. #ಶಿವಮೊಗ್ಗ_ಜೈಲಿನಲ್ಲಿ_ಸುರೇಶ್_ಆಚಾರ್_ಪ್ರಸಿದ್ದ_ಕಲಾವಿದರಾಗಿದ್ದರು. #ಅವರು_ಬರೆದ_ಪೆನ್ಸಿಲ್_ಆರ್ಟ್_ದೊಡ್ಡ_ದೊಡ್ಡ_ಸೆಲಿಬ್ರಿಟಿಗಳ_ಮನೆಯಲ್ಲಿದೆ. #ನಮ್ಮ_ಮಲ್ಲಿಕಾ_ರೆಸ್ಟೋರಾಂಟ್_ಪೀಠೋಪಕರಣ_ಮಾಡಿದ್ದು_ಇವರೆ.     2012ರ ಆಗಸ್ಟ್ ತಿಂಗಳಲ್ಲಿ ನಮ್ಮ ಮಲ್ಲಿಕಾ ವೆಜ್ ನ ಪೀಠೋಪಕರಣ ತಯಾರಿಸಲು ಬಂದ ಕಾರ್ಪೆಂಟರ್ ಸುರೇಶ್ ಆಚಾರ್ ಇವರ ಊರು ನಮ್ಮ ಆನಂದಪುರಂ ಸಮೀಪದ ನವಟೂರು.     ಇದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಊರು, ಈ ಊರಿನ ಮಧ್ಯದಲ್ಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಸಾಗಿ ಹೋಗಿದೆ.    ಈ ಊರಲ್ಲಿನ ವಿಶೇಷ ಅಂದರೆ ವಿಶ್ವಕರ್ಮ ಜನಾಂಗದ ಕುಟುಂಬಗಳ ಹೆಸರುಗಳು ,ರಾಮಾಯಣದ ಪ್ರಸಿದ್ದ ಪುರುಷರದ್ದು, ಬೀಷ್ಮಾಚಾರ್ - ದ್ರೋಣಾಚಾರ್ - ಬೀಮಾಚಾರ್ - ದರ್ಮಾಚಾರ್-ಭದ್ರಾಚಾರ್-ರಾಮಾಚಾರ್- ಲಕ್ಷ್ಮಣಾಚಾರ್..... ಹೀಗೆ ಸಾಲು ಸಾಲು ಮಹಾಬಾರತದ ಹೆಸರುಗಳು,ಈಗಿನ ತಲೆಮಾರಿನವರಲ್ಲಿ ಇದು ಬದಲಾಗಿದೆ.      ಸುರೇಶ್ ಆಚಾರ್ ಆ ಕಾಲದಲ್ಲಿ ಹುಬ್ಬಳ್ಳಿ ಶಹರದಲ್ಲಿ ಕಾರ್ಪೆಂಟರ್ ಕೆಲಸದಲ್ಲಿ ಒಳ್ಳೇ ಹವಾ ಸೃಷ್ಟಿಸಿಕೊ೦ಡಾತ ನಂತರ ವಿಪರೀತ ಕುಡಿತ ಇವರ ಜೀವನೋತ್ಸವವನ್ನೆ ಕೊಂದು ಬಿಟ್ಟಿತ್ತು ಆ ಸಮಯದಲ್ಲಿಯೇ ಇವರು ಇವರ ಚಿಕ್ಕಪ್ಪನ ಮಗ ಮಂಜುನಾಥ ಆ...