Blog number 909. ನಮ್ಮ ಊರಿನ ಸುಡುಗಾಡು ಸಿದ್ದ ಅಲೆಮಾರಿ ಬುಡಕಟ್ಟು ಜನಾಂಗದ ಹಿರಿಯರಾದ ಜೇಡಿಸರದ ದೊಡ್ಡ ಗೂರಪ್ಪರು ನನ್ನ ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನದ ಓದುಗ ವಿಮರ್ಷಕರು ಆಗಿದ್ದು ಕಥೆ ಬರೆದ ನನಗೆ ಸಾರ್ಥಕತೆ ಆಯಿತು
#ಇವತ್ತು_ನನಗೆ_ಸಂತೋಷದ_ದಿನ #ಸುಡುಗಾಡುಸಿದ್ದ_ಅಲೆಮಾರಿ_ಜನಾಂಗದ_ದೊಡ್ಡಗೂರಪ್ಪಣ್ಣರಿಂದ_ನನ್ನ_ಕಥಾಸಂಕಲದ_ಬಗ್ಗೆ_ಮಿಮರ್ಷೆ. #ನಾಲ್ಕನೇ_ತರಗತಿವರೆಗೆ_ಓದಿರುವ_ಇವರು_ಓದಿದ_ಕಾದಂಬರಿ_ಎರೆಡು_ಸಾವಿರಕ್ಕೂ_ಮಿಕ್ಕಿದೆ. #ಯಾವ_ಯಾವ_ಸಾಹಿತಿ_ಮತ್ತು_ಪುಸ್ತಕ_ಎಂಬುದು_ಈ_ವಿಡಿಯೋದಲ್ಲೇ_ನೋಡಿ. #ನನ್ನ_ಕಥಾಸಂಕಲನ_ಭಟ್ಟರ_ಬೊಂಡಾ_ಬಾಂಡಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ ನಿನ್ನೆ ನಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀಮತಿ ಇಂದಿರಮ್ಮ ನನ್ನ ಆಫೀಸಿಗೆ ಬಂದು ನೀವು ಬರೆದ ಪುಸ್ತಕ ತಮ್ಮ ತಂದೆಗೆ ಬೇಕಂತೆ ಅಂದಾಗ ಕೊಟ್ಟು ಕಳಿಸಿದ್ದೆ. ಬೆಳಿಗ್ಗೆ ದೊಡ್ಡ ಗೂರಪ್ಪ ಪೋನ್ ಮಾಡಿ ನಿಮ್ಮ ಪುಸ್ತಕ ಬಂದಿದೆ ಮೊದಲಕಥೆ ಪೂರ್ತಿ ಓದಿದೆ, ಎರಡನೆ ಕಥೆ ಅದ೯ ಓದಿದ್ದೀನಿ ತುಂಬಾ ಚೆನ್ನಾಗಿದೆ ಅಂದರು, ಪೇಟೆಗೆ ಬಂದರೆ ಬನ್ನಿ ಅಂದೆ, ಆಸ್ಪತ್ರೆಗೆ ಹೋಗಬೇಕು ಬರುತ್ತೇನೆ ಅಂದವರು ಬೆಳಿಗ್ಗೆ 11 ಗಂಟೆಗೆ ಬಾರೀ ಮಳೆಯಲ್ಲೇ ರಿಕ್ಷಾದಲ್ಲಿ ಬಂದಿಳಿದರು. ಇವರು ಆಂದ್ರ ಮಾತೃ ಬಾಷೆಯ ಆಂದ್ರ ಮೂಲದ ಅಲೆಮಾರಿ ಬುಡಕಟ್ಟು ಜನಾಂಗದ ಸುಡುಗಾಡು ಸಿದ್ಧ ಜಾತಿಯವರು, ಆಂದ್ರದಿಂದ ಚಿತ್ರದುಗ೯ ಅಲ್ಲಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ, ಅಲ್ಲಿಂದ ಕೆಂಚನಾಲ ನಂತರ ನಮ್ಮ ಆನಂದಪುರಂನ ಜೇಡಿಸರದಲ್ಲಿ ಬಂದು ನೆಲೆಸಿದ ಇವರ ತಂದೆ ಪರಶುರಾಮಣ್ಣ ತಮ್ಮ ವಂಶಪಾರಂಪರ್ಯ ವೃತ್ತಿ ಆದ ಜೋತಿಷ ಹೇಳುವುದು, ಬಿಕ್ಷೆ ಬೇಡುವುದ...