Blog number 1371. ಸಾಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅತ್ಯುತ್ತಮವಾದ ಐ ಲವ್ ನಮ್ಮ ಸಾಗರ ಗ್ರೂಪ್ ನೀಡಿರುವ ಉತ್ಸಾಹಿ ಯುವಕ ಅಂಜನ್ ಅಮರನಾಥ್ ಕಾಯ್ಕಿಣಿ.
ಸಾಗರದ_ಅಂಜನ್_ಅಮರನಾಥ್_ಕಾಯ್ಕಿಣಿ #ಅವರ_ಐ_ಲವ್_ನಮ್ಮ_ಸಾಗರ_ಪೇಸ್_ಬುಕ್_ಗ್ರೂಪ್_ದಾಖಲೆಯ_ವೀಕ್ಷಕರನ್ನು_ಹೊಂದಿದೆ #33_ಸಾವಿರ_ಸದಸ್ಯರಿದ್ದಾರೆ. #ಅವರ_ಸಹೋದರಿ_ವಿವಾಹ_ಆಮಂತ್ರಣ_ನೀಡಲು_ಅವರಿಬ್ಬರೂ_ಬಂದಿದ್ದರು. #ಸಾಗರದ_ಒಂದು_ಕಾಲದ_ಬಸ್_ನಿಲ್ದಾಣದ_ಪ್ರಮುಖ_ಪತ್ರಿಕೆಗಳು_ಸಿಗುತ್ತಿದ್ದ_ಜಾಗ #ಇವರ_ತಂದೆ_ಅಮರನಾಥ_ಕಾಯ್ಕಿಣಿಯವರದ್ದು. #ಕಾಯ್ಕಿಣಿ_ಅಂಗಡಿಯಲ್ಲಿ_ಸಿಗದ_ಪತ್ರಿಕೆಯೇ_ಇಲ್ಲ_ಎಂದು_ಪ್ರಸಿದ್ದಿ_ಪಡೆದಿದ್ದರು. ಐ ಲವ್ ನಮ್ಮ ಸಾಗರ ಎಂಬ ಪೇಸ್ ಬುಕ್ ಗ್ರೂಪ್ ಇವತ್ತಿನವರೆಗೂ ದಾಖಲೆಯ ವೀಕ್ಷಕರನ್ನು ಹೊಂದಿರುವ ಮತ್ತು ಸುಮಾರು 33 ಸಾವಿರ ಸದಸ್ಯರಿರುವ ಏಕೈಕ ಮತ್ತು ನಂಬರ್ ಒನ್ ಗ್ರೂಪ್ ಆಗಿದೆ. ಈ ಗ್ರೂಪ್ ನಲ್ಲಿ ಸಾಗರಕ್ಕೆ ಸಂಬಂದಪಟ್ಟ ಸಾಹಿತ್ಯ ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಪಟ್ಟ ಸುದ್ದಿ ಮತ್ತ ಲೇಖನಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿದ್ದಾರೆ ಅಷ್ಟೆ ಅಲ್ಲ ಇಲ್ಲಿ ಪ್ರಕಟ ಮಾಡುವ ಲೇಖನ ಅಡ್ಮಿನ್ ಅಂಜನ್ ಕಾಯ್ಕಿಣಿ ಪರಿಶೀಲಿಸಿ ಅನುಮೋದಿಸುತ್ತಾರೆ. ಹತ್ತು ನಿಯಮಗಳೂ ಈ ಗ್ರೂಪಿನ ಸದಸ್ಯರಾಗುವಾಗ ಪಾಲಿಸಲೇ ಬೇಕು ಈ ಮೂಲಕ ಈ ಗ್ರೂಪ್ ಅನಾವಶ್ಯಕ ಅಪವಾದದಿಂದ ದೂರವಾಗಿ ಆಸಕ್ತರಿಗೆ ಸಾಗರದ ಮಾಹಿತಿ ಕಣಜವಾಗಿದೆ. ಇವರ ತಂದೆ ಕೆಲವು ದಶಕಗಳ ಕಾಲ ಸಾಗರದಲ್ಲಿ ನಾಡಿನ ಎಲ್ಲಾ ಪತ್ರಿಕೆಗಳನ್ನು ಸಾಗರದ ಮುಖ್ಯ ನಿಲ್ದಾಣದ ಎದುರು ಅವರ ಅಂಗಡಿಯಲ್ಲಿ ಒಂದ...