Skip to main content

Posts

Showing posts from March, 2019

ಶಾಸಕ ಸ್ವಾಮಿರಾಯರು ಪೋಲಿಸ್ ಠಾಣೆ ಎದುರು ನಡೆಸಿದ ಕೋಳಿ ಪಡೆ ಪ್ರತಿಭಟನೆ

#ಕೋಳಿ ಅಂಕಕ್ಕೆ ಜೈಲು? ಕುದುರೇ ರೇಸ್, ಕ್ಯಾಸಿನೋಗಳಿಗೆ ಕೆಂಪು ಕಾಪೆ೯ಟ್ ಸ್ವಾಗತ !#    ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಾಜಿ ಶಾಸಕರಾದ ಸ್ವಾಮಿರಾವ್ ವಿಶಿಷ್ಟ ರಾಜಕಾರಣಿ, ಈಗಲೂ ಕೃಷಿಯಿಂದ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಇವರ ಬಗ್ಗೆ ಇವರ ಸಮಕಾಲಿನ ಗೆಳೆಯರಾದ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್ ಒಂದು ಪುಸ್ತಕ ತರುವ ಪ್ರಯತ್ನದಲ್ಲಿದ್ದವರಿಗೆ ನಾನು ಶಿವಮೊಗ್ಗದ ಶೃ೦ಗೇಶರ ಜನ ಹೋರಾಟ ಪತ್ರಿಕೆಯಲ್ಲಿ ಅಂಕಣದಲ್ಲಿ ಬರೆದಿದ್ದ ಸ್ವಾಮಿರಾವ್ ಬಗ್ಗೆಯ ಲೇಖನ ಸದರಿ ಪುಸ್ತಕಕ್ಕೆ ಬೇಕು ಎಂದು ಕೇಳಿದರು.    ಕಾರಣವೇನೆಂದರೆ ಆಗ ಶಾಸಕರಾಗಿದ್ದ ಸ್ವಾಮಿ ರಾವ್ರರವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮೂಲದವರಾದ ಪೂಜಾರರು, ಮೊಗವೀರರು, ಬಂಟರು, ದೇವಾಡಿಗರು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರೆಲ್ಲರೂ ಕೋಳಿ ಅಂಕದ ಅಭಿಮಾನಿಗಳು, ಸುಗ್ಗಿ ಕಾಲದಲ್ಲಿ, ಹುಣ್ಣಿಮೆಗಳಲ್ಲಿ ಸುತ್ತಮುತ್ತಲಿನವರೆಲ್ಲ ಸೇರಿ ಈ ಕ್ರೀಡೆ ನಡೆಸುತ್ತಾರೆ, ಅಲ್ಲಿ ಮದ್ಯ, ಬೀಡಿ, ಸಿಗರೇಟು, ಚಹಾ, ನೀರು ದೊಸೆ ಕೋಳಿಪಲ್ಲೆ ಮಾರಾಟದ ಅಂಗಡಿ ಹೋಟೆಲ್ಗಳು ತಾತ್ಕಾಲಿಕವಾಗಿ ಬರುತ್ತದೆ.   ಅಂಕದ ಕೋಳಿ ಸಾಕಿದ ಸ್ಟಾರ್ ಆಟಗಾರರು ತಮ್ಮ ಕೋಳಿಗಳ ಜೊತೆ ಬಗಲಿಗಳೆoಬ ಸಹಾಯಕರ ಜೊತೆ ಬರುವ ಗತ್ತು ನೋಡಬೇಕು, ಇದನ್ನ ನೋಡಲು ಬರುವ ಅಭಿಮಾನಿಗಳು, ಗೆಲ್ಲುವ ಕೋಳಿಗಳ ಮೇಲೆ ಬೆಟ್ಟಿOಗ್ ಕಟ್ಟುವವರು, ಅಂಕದ ಕೋಳಿ

ಡಯಟ್ ಕೋಕಂ

#ಮುರುಗನಹುಳಿ ಅಡುಗೆ ಮನೆಯಿ೦ದ ಈಗ ಏನೆಲ್ಲ ಬಳಕೆಗೆ ಗೊತ್ತಾ?# ಮೊನ್ನೆ ಕಾರವಾರದ ಪೋಲಿಸ್ ಠಾಣೆ ರಸ್ತೆಗೆ ಹೋಗಿದ್ದೆ, ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿನ ಬೇಟಿ ಖಾಯಂ ಏಕೆಂದರೆ ಇಲ್ಲಿ ಪಶ್ಚಿಮ ಘಟ್ಟದ ಅನೇಕ ಅಪರೂಪದ ಹಣ್ಣು, ಜಾಷದಿಗಳು, ಕಾಳು ಕಡಿ, ದೇಸಿ ತರಕಾರಿಗಳು ಮಾರಾಟಕ್ಕೆ ಸ್ಥಳಿಯ ಮಹಿಳೆಯರು ತಂದಿರುತ್ತಾರೆ, ಇದೇ ರೀತಿ ಅಂಕೋಲ, ಕುಮಟ ಮತ್ತು ಹೊನ್ನವರಗಳಲ್ಲೂ ನಿಧಿ೯ಷ್ಟ ಸ್ಥಳ ಮತ್ತು ಸಮಯದಲ್ಲಿ ಹಾಲಕ್ಕಿ ಮಹಿಳೆಯರು ಹಾಜರಿರುತ್ತಾರೆ.   ಮೊನ್ನೆ ಕಾರವಾರದಲ್ಲಿ ಜುಮ್ಮನಕಾಯಿ, ಬಿಡಿಸಿದ ಹಸಿ ಗೋಡOಬಿ ಬೀಜಗಳು, ನಾಟಿ ಹರಿವೆ ಸೊಪ್ಪಿನ ದಂಟುಗಳು, ಉಪ್ಪಿನ ಮಾವಿನ ಹುಳಿ, ವಿವಿದ ತಳಿಯ ಮಾವಿನ ಮಿಡಿ ಇವುಗಳ ಮಧ್ಯ ಮುರುಗನ ಹುಳಿ ಹಣ್ಣು ರಾರಾಜಿಸುತ್ತಿತ್ತು.   ಗೋವಾದಲ್ಲಿ ಕೋಕಂ, ದಕ್ಷಿಣ ಕನ್ನಡದಲ್ಲಿ ಪುನರ್ ಪುಳಿ, ಕೇರಳದಲ್ಲಿಮಲಬಾರ್ ಹುಣಸೆ ಅನ್ನುವ ಇದನ್ನ ಇಂಗ್ಲೀಷ್ನಲ್ಲಿ GARCINIA INDICA ಎನ್ನುತ್ತಾರೆ.   ಕೋಕಂ ಜೂಸ್, ಸೋಲ ಕಡಿ, ಮೀನು ಸಾರಿಗೆ ಇದನ್ನ ಹೆಚ್ಚು ಬಳಸುತ್ತಾರೆ ಆದರೆ ಪಶ್ಚಿಮ ಘಟ್ಟದ 7 ತಳಿಗಳು ಈಗ ವಿಶ್ವದಾದ್ಯಂತ ದೇಹ  ಸೌಂದಯ೯ ವೃದ್ಧಿಗಾಗಿ, ತೂಕ ನಿಯಂತ್ರಿಸಲು ಹೆಚ್ಚು ಬಳಕೆ ಆಗುತ್ತಿದೆ. ಅಂಕೋಲದ ಬಾಳೆಗುಳಿ ಕತ್ರಿಯಲ್ಲಿ ಮಿತ್ರ M.R.ಶೆಟ್ಟರ ಗಣ್ಯ ಕೆಮಿಕಲ್ಸ್ ನಲ್ಲಿ ಈ ಹಣ್ಣಿನಿಂದ ಬಿಳಿಯ ಬಣ್ಣದ Garcinia ಪೌಡರ್ ತಯಾರಾಗಿ ವಿದೇಶಕ್ಕೆ ರಪ್ತಾಗುತ್ತದೆ.   ಅಷ್ಟೆ ಏಕೆ ನೀವು ಮಧ್ಯ ಪಾನ ಪ್ರಿಯರಾ

# ಕಾಸರಗೋಡಿನ ಕನ್ನಡ ಹೋರಾಟಗಾರರು #

# ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು # ಮೊನ್ನೆ ಹುಬ್ಬಳ್ಳಿ, ಶಿಶುನಾಳದಿ೦ದ ವಾಪಾಸು ಹೊರಡುವಾಗ  ರಾತ್ರಿ 8 ಆಗಿತ್ತು, ಊರು ಸೇರಲು 4 ಗಂಟೆ ಅವಧಿ ಬೇಕು, ನಾವು ಪ್ರಯಾಣಕ್ಕೆ ಒಯ್ದಿದ್ದು ರಿಪ್ಪನ್ ಪೇಟೆಯ ಗೆಳೆಯರಾದ ಶಿವಕುಮಾರರ ಹೊಸ ಮಿನಿ ಬಸ್, ಪ್ರಯಾಣದ ಕಾಲಾಹರಣಕ್ಕಾಗಿ ಈ ಸಿನಿಮಾ ಹಾಕಿದ್ದರು.   ಹಾಸ್ಯ ಮತ್ತು ಮನೋರಂಜನೆಯ ಜೊತೆ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನ ಈ ಸಿನಿಮಾ ನವಿರಾಗಿ ತೋರಿಸಿದೆ. ಇವತ್ತು ಕಾಸರಗೋಡಿನ ಕನ್ನಡ ಹೋರಾಟಗಾರ ಕಾಸರಗೋಡು ಶಿವರಾಂ ಪೋನ್ ಮಾಡಿದಾಗ ಇದೆಲ್ಲ ನೆನಪಾಯಿತು, ಈ ಸಿನೆಮಾ ನೋಡಿದ ಬಗ್ಗೆ ಹೇಳಿದೆ, ಈ ಸಿನಿಮಾದಲ್ಲಿ ದಡ್ಡ ಸತೀಶನ ಪಾತ್ರ ಮಾಡಿದವ ಇವರ ಸಂಬಂಧಿ ಅಂತೆ ಪ್ರಥಮ ಪಿಯು ವಿದ್ಯಾಥಿ೯ ಈಗ ಅಂದರು.   ಅವರಿಗೆ ಯಾವುದೋ ಮಾಹಿತಿಗಾಗಿ ಪೋನ್ ಮಾಡಿದ್ದರು, ಹಲವು ಬಾರಿ ನಾನು ಕಾಸರಗೋಡಿಗೆ ಹೋಗಿದ್ದೆ. ಅಲ್ಲಿನ ಕನ್ನಡಿಗರು ತಮ್ಮ ಬಾಷೆಗಾಗಿ ಈಗಲೂ ಹೋರಾಟ ಜೀವ೦ತ ಇಟ್ಟಿದ್ದಾರೆ. ಹಾಲಿ ಕಾಸರಗೋಡಿನಲ್ಲಿ 183 ಕನ್ನಡ ಶಾಲೆಗಳು ಜೀವ೦ತವಾಗಿದೆ ಎಂದರೆ ಅವರ ಬಾಷಾಭಿಮಾನ ಅಥ೯ವಾಗುತ್ತದೆ, ಅಲ್ಲಿ ಈಗಲೂ ಮನೆ ಮನೆಗಳಲ್ಲಿ ಖಾಸಾಗಿ ಗ್ರಂಥಾಲಯಗಳಿದೆ.   ಉದಯವಾಣಿ ಪತ್ರಿಕೆ ಇವರಿಗೆಲ್ಲ ಸಂಬಂದ ಸೇತುವಾಗಿದೆ, ಈ ಪತ್ರಿಕೆಯ ಕಾಸರಗೋಡು ಜಿಲ್ಲಾ ಬ್ಯೂರೋ ಚೀಪ್ ಶ್ರೀ ಪ್ರದೀಪ್ ಬೇಕಲ್ ಇಲ್ಲಿನ ಕನ್ನಡ ಹೋರಾಟಗಾರರಿಗೆ ಬೆನ್ನೆಲುಬಾಗಿದ್ದಾರೆ.   ಕಾಸರಗೋಡು ಜಿಲ್ಲೆಯ ಹೊಸದುಗ೯ ತಾಲ್ಲೂಕ್ ನ ಕಾಂಜನ

ಸಾಗರ ತಾಲ್ಲೂಕಿನ ಈ Block Spotಗಳನ್ನ ಸರಿಪಡಿಸಿ.

# ಜಿಲ್ಲಾಧಿಕಾರಿಗಳೆ ಸಾಗರ ತಾಲ್ಲೂಕಿನ ಈ ಪ್ರಮುಖ ಬ್ಲಾಕ್ ಸ್ಪಾಟ್ ನಿಮ್ಮ ಗಮನಕ್ಕೆ#     ತಾವು ಇತ್ತೀಚಿಗೆ ಜಿಲ್ಲೆಯಲ್ಲಿ ಹೆಚ್ಚು ಅಪಘಾತ ಆಗುವ Block Spot ಗಳ ತಿಳಿಸಲು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ. ಸಾಗರ ತಾಲ್ಲೂಕಿನ ಈ block Spot ಗಳ ಬಗ್ಗೆ ತಾವು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ. 1. ಶಿವಮೊಗ್ಗದಿಂದ ಸಾಗರ ಗಡಿ ಪ್ರವೇಶಿಸುವ ಗಿಳಾಲಗು೦ಡಿ ವೃತ್ತ ವೈಜ್ಞಾನಿಕವಾಗಿ ನಿಮಿ೯ಸಿಲ್ಲ, ರಾಷ್ಟ್ರಿಯ ಹೆದ್ದಾರಿಯಿಂದ ಗಿಳಾಲ ಗುಂಡಿ ಮಾಗ೯ವಾಗಿ ಕೆಂಚನಾಲ, ರಿಪ್ಪನ್ ಪೇಟೆ ಮಾಗ೯ಕ್ಕೆ ಸಾಗರದಿಂದ ಬರುವ ವಾಹನಗಳು ತಿರುಗಲು ಸರಿಯಾದ ವ್ಯವಸ್ಥೆ ಇಲ್ಲ ಅನೇಕ ಸಾವು ನೋವು ಆಗಿದೆ. 2.ಇಲ್ಲಿಂದ ಮುಂದೆ ಯಡೇಹಳ್ಳಿ ವೃತ್ತದಲ್ಲಿ ನಾಲ್ಕು ರಸ್ತೆ ಸೇರುತ್ತೆ, ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರಾಷ್ಟ್ರಿಯ ಹೆದ್ದಾರಿಗೆ ರಿಪ್ಪನ್ ಪೇಟೆಯಿಂದ ಒಂದು ರಾಜ್ಯ ಹೆದ್ದಾರಿ, ಹೊಸನಗರ ಬಟ್ಟೆ ಮಲ್ಲಪ್ಪದಿ೦ದ ಒಂದು ಮುಖ್ಯ ರಸ್ತೆ (ಈಗ ಹಾವೇರಿ ಬೈಂದೂರು ರಾಷ್ಟ್ರಿಯ ಹೆದ್ದಾರಿ ಮೇಲ್ದಜೆ೯ಗೆ ಏರಿದೆ) ಸೇರುತ್ತದೆ ಯಾವುದೇ ಹಂಪ್ ಇರುವುದಿಲ್ಲ ನಿತ್ಯ ಅಪಘಾತ ನಡೆಯುತ್ತದೆ ಅನೇಕ ಸಾವು ನೋವು ಆಗಿದೆ. 3. ಇಲ್ಲಿ೦ದ ಮುಂದೆ ಸಾಗರ ಪ್ರಾರಂಭದಲ್ಲಿ ತ್ಯಾಗತಿ೯ ವೃತ್ತದಲ್ಲಿ ತ್ಯಾಗತಿ೯ ಯಿಂದ ಬಂದು ಸೇರುವ ರಸ್ತೆಗೆ ಶಿವಮೊಗ್ಗ ಸಾಗರದ ರಾಷ್ಟ್ರಿಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕಾಣುವುದಿಲ್ಲ ಇದರಿ೦ದ ಅನೇಕ ಅಪಘಾತ

ಗೋವಾದಲ್ಲಿ ಕ್ಯಾಸಿನೋ ನಡೆಸಲು ಮುಕ್ತ ಅವಕಾಶ ಏಕೆ?

#  ಗೋವಾ ಕ್ಯಾಸಿನೋ ರದ್ದು ಮಾಡುತ್ತೇನೆ ಎಂದಿದ್ದ ಪರಿಕರ್ ಕ್ಯಾಸಿನೋ ಬೆಂಬಲಿಸುತ್ತಿದ್ದಾರೆ ಏಕೆ?#   ಗೋವಾ ಸಕಾ೯ರ ಸಮುದ್ರದಲ್ಲಿನ ಹಡಗುಗಳಲ್ಲಿ 24 ಗಂಟೆ ನಡೆಯುವ ಜುಗಾರಿ ಅಡ್ಡ (ಕ್ಯಾಸಿನೊ ಎಂಬ ಪಾಲಿಶ್ ಡ್ ಹೆಸರು ಇದೆ) ಮುಂದಿನ ನವೆಂಬರ್ ತಿಂಗಳ ತನಕ ಮುಂದುವರಿಸಲು ತೀಮಾನಿಸಿದ್ದು ಗೋವಾದಲ್ಲಿ ಬಹು ಚಚಿ೯ತ ಸುದ್ದಿ.   2012ರಲ್ಲಿ ತಾನು ಅಧಿಕಾರಕ್ಕೆ ಬಂದರೆ ಗೋವಾ ಕ್ಯಾಸಿನೋ ರಹಿತ ಎಂದು ಅನೇಕ ಪ್ರವಾಸೋದ್ಯಮದ ರೂಪುರೇಷೆ ಜನತೆಯ ಮುಂದಿಟ್ಟು ಅಧಿಕಾರ ಪಡೆದು ಮುಖ್ಯಮಂತ್ರಿ ಆದರು, ನಂತರ 2015ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ರಕ್ಷಣಾ ಸಚಿವರಾದರು ಪುನಃ ಗೋವಾ ವಿದಾನ ಸಭಾ ಚುನಾವಣೆಯಲ್ಲಿ ಅಲ್ಪ ಬಹುಮತ ಸಕಾ೯ರ ರಚಿಸಿ ಪುನಃ ಮುಖ್ಯಮಂತ್ರಿ ಆದರೂ ಜುಗಾರಿ ಅಡ್ಡ ರದ್ದಾಗುವುದಿರಲಿ ಮಾಂಡವಿ ನದಿ ದಂಡೆ ಪೂಣ೯ ಗ್ಯಾ೦ಬ್ ಲಿಂಗ್   ಕಾಂಪ್ಲೆಕ್ಸ್ ಆಗಿ ಪರಿವತ೯ನೆ ಆಗಿದೆ.   ಒಂದು ವಿಶೇಷ ಅಂದರೆ ಹೆಚ್ಚಿನ ಕ್ಯಾಸಿನೋಗಳ ಪಾಲುದಾರರು ಕನಾ೯ಟಕದವರು, ಜುಗಾರಿ ಆಡುವ ಪಂಟರುಗಳಲ್ಲೂ ಕನ್ನಡಿಗರದ್ದು ದೊಡ್ಡ ಸಂಖ್ಯೆ ಅಂತ ತಿಳಿದು ಆಶ್ಚಯ೯ ಆಯಿತು.   ಪ್ರವೇಶ ಶುಲ್ಕವೇ 2500,ವಾರOತ್ಯದಲ್ಲಿ, ರಜಾದಿನದಲ್ಲಿ  ಬರುವವರು ಇನ್ನೂ ಹೆಚ್ಚು. ಹೈ ಪೈ ಜನರೇ ಬರುವವರಾದ್ದರಿಂದ ಗೋವಾದ ಸ್ಟಾರ್ ಕೆಟಗರಿ ಹೋಟೆಲ್, ಲಾಡ್ಜಗಳಿಗೆ ಭರಪೂರ ವ್ಯಾಪಾರ, ಬರುವ ಹೋಗುವ ವಿಮಾನಗಳಲ್ಲೂ ಇವರೇ ಹೆಚ್ಚು ಇದರಿಂದ ಗೋವಾ ರಾಜ್ಯದ ಪ್ರವಾಸೋದ್ಯಮ ಡಿಸ

# ನಮ್ಮ ಜಿಲ್ಲೆಯ ಸಾಹಸಿ ಮಹಿಳೆ #

# ಶಿವಮೊಗ್ಗ ಜಿಲ್ಲೆಯ ಮಹಿಳೆ ಹೊನ್ನೆ ಮರಡು ಜಲ ಸಾಹಸ ಕೇಂದ್ರದ ಶ್ರೀಮತಿ ನೋಮಿತೋ ಕಾಮದಾರ್ ಗೆ ರಾಷ್ಟ್ರಿಯ ಮಹಿಳಾ ಪುರಸ್ಕಾರ ಸಿಕ್ಕಿರುವುದು ನಮ್ಮ ಜಿಲ್ಲೆಗೊಂದು ಹಿರಿಮೆ #   ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್‌ ಪಾಲ್ಸ್ ಸಮೀಪದ ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರಿನ ಹೊನ್ನೆ ಮರಡು ಎ೦ಬಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ EXPLORE INDIA ಎಂಬ ಕಾಯ೯ಕ್ರಮದಲ್ಲಿ ಪ್ರಾರಂಭವಾದ ಈ ಪಶ್ಚಿಮ ಘಟ್ಟದ ಸಾಹಸ ತರಬೇತಿ, ಪರಿಸರ ಪಾಠಶಾಲೆ ಇವತ್ತು ದೇಶ ವಿದೇಶದಲ್ಲಿ ಪ್ರಖ್ಯಾತಗೊಂಡಿದೆ.   ಹೊನ್ನೆ ಮರಡು ಸ್ವಾಮಿ ಮತ್ತು ಅವರ ಪತ್ನಿ ನೋಮಿತೊ ಕಾಮದಾರ್ ತಮ್ಮ ಅದ೯ ಆಯುಸ್ಸು ಇಲ್ಲಿ ಸವೆಸಿದ್ದಾರೆ, ಇಲ್ಲಿನ ಸಂಸ್ಥೆ ಒಂದು ಹಂತಕ್ಕೆ ತರಲು ಅನೇಕ ರೀತಿ ಹೆಣಗಿದ್ದಾರೆ, ಒಂದು ಕಾಲದ ಇವರ ಸಹೋದ್ಯೋಗಿಗಳೆ ಇವರಿಗೆ ಈಗ ಶತೃಗಳಾಗಿದ್ದಾರೆ, ಕೆಲವರಿಗೆ ವಿನಂತಿಸಿದೆ ನಿಮ್ಮ ಕಹಿ ಘಟನೆ ಮರೆತುಬಿಡಿ, ತಪ್ಪಿದ್ದರೆ ಕ್ಷಮಿಸಿ ಬಿಡಿ ಅಂತಲೂ.    ಮೊನ್ನೆ ಮಹಿಳಾ ದಿನಾಚರಣೆಯoದು ಕೇಂದ್ರ ಸಕಾ೯ರ ಶ್ರೀಮತಿ ನೋಮಿತೊ ಕಾಮದಾರ್ ಗೆ ರಾಷ್ಟ್ರೀಯ ಮಹಿಳಾ ಪುರಸ್ಕಾರ ನೀಡಿದೆ, ರಾಷ್ಟ್ರಪತಿ ಶ್ರೀ ಕೊವಿಂದರವರು ಪ್ರಶಸ್ತಿ ನೀಡಿದರು. ಶ್ರೀಮತಿ ನೋಮಿತೊ ಪಶ್ಚಿಮ ಘಟ್ಟದ ಪರಿಸರದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಸಾಹಸಿ ಮಹಿಳೆ, 5 - 6 ವಷ೯ದ ಹಿಂದೆ ನಮ್ಮಲ್ಲಿ ಬಂದವರು ನಮ್ಮ ಕಾಟೇಜಿನ ಹೊರ ಅಂಗಣದಲ್ಲಿ ಚಹ ಸ್ವೀಕರಿಸುವಾಗ ಸಾವಿರಾರು ಸಂಖ್ಯೆ

# ಶ್ರೀ ಪ್ರಮುಖ್ ಸಾಗರ್ ಮಹಾರಾಜ್#

# ಕಲಿಯುಗದಲ್ಲಿ ನಿಜ ಸಂನ್ಯಾಸಿಗಳು ಜೈನ ಮುನಿಗಳು ಮಾತ್ರ# ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು.   ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ. ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ.   ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿದ್ದೇನೆ ಅದು ಹೊಂಬುಜ ರೆಸಿಡೆನ್ಸಿ ಅಂತ ಅದಕೊಂದು ಹಿನ್ನೆಲೆ ಇದೆ ಕೇಳಿ, ದೂರದ ಗುಜರಾತಿನ ವಜ್ರ ವ್ಯಾಪಾರಿ ನಿಮ೯ಲ್ ಕುಮಾರ್ ಒಮ್ಮೆ ಹುಂಚದ ಹಿಂದಿನ ಸ್ವಾಮಿಗಳ ಬೇಟಿಗೆ ಬಂದವರು ನನ್ನ ಜೊತೆಯಲ್ಲಿ ಕರೆದೊಯ್ದಿದ್ದರು. ಅಲ್ಲಿ ಸ್ವಾಮಿಗಳ ಬೇಟಿ ಆಯಿತು, ಹಿಂದಿನ ದಿನವಷ್ಟೆ ಅವರು ಅಮೇರಿಕಾ ದೇಶದ ಪ್ರವಚನ ಪ್ರವಾಸ ಮುಗಿಸಿ ಬಂದಿದ್ದರು, ನನ್ನ ಅವರ ಬೇಟಿ ಅದು ಮೊಟ್ಟ ಮೊದಲಿನದು, ನನ್ನ ಪರಿಚಯ ನಿಮ೯ಲ್ಕುಮಾರರು ಮಾಡಿದಾಗ ಅವರು ಕೇಳಿದ ಮೊದಲ ಪ್ರಶ್ನೆ ನಿಮ್ಮ

#ಮಾಲ್ಗುಡಿ ರೈಲು ನಿಲ್ದಾಣ #

# ಅರಸಾಳು ರೈಲು ನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ # ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿತ್ತು, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ.   ರಿಪ್ಪನ್ ಪೇಟೆ ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಆಗಿತ್ತು.   ಇದೇ ಸಂದಭ೯ದಲ್ಲಿ ವೈಸ್ ರಾಯ್ ಲಾಡ್೯ ರಿಪ್ಪನ್ ಈ ಮಾಗ೯ದಲ್ಲಿ ಬಂದಾಗ ಈ ಭಾಗದ ಪ್ರಮುಖರೆಲ್ಲ  ಸೇರಿ ಸನ್ಮಾನಿಸಿ ಅವರ ಬೇಟಿಯ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿಸುತ್ತಾರೆ, ಇದರಿಂದ ಸಂಪ್ರೀತರಾದ ವೈಸ್ ರಾಯರಿಗೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ ಅದಕ್ಕೆ ಸಕಾರಣವಾಗಿ ರೈಲು ಮಾಗ೯ದಿಂದ ರೈಲು ನಿಲ್ದಾಣ ಆದರೆ ಬರುವ ಪ್ರಯಾಣಿಕರಿಂದ ಪ್ಲೇಗ್‌ ರೋಗ ಬಂದು ಹರಡುವುದರಿಂದ ಸಾವು ನೋವು ಉಂಟಾಗುತ್ತೆ ಎ೦ದು ವಿನಂತಿಸುತ್ತಾರೆ. ಈ ರೀತಿ ಮೂಡ ನಂಬಿಕೆ ಲಾಡ್೯ ರಿಪ್ಪನ್ ಗೆ ಇರದಿದ್ದರು ಜನರ ಪ್ರೀತಿಗಾಗಿ ರೈಲು ಮಾಗ೯ ಅರಸಾಳಿನಿಂದಲೇ ಕೆಂಚನಾಲಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.   ಅರಸಾಳು ಈಗಲೂ ಮೀಸಲು ಅರ

#ಶಿಶುನಾಳ ಷರೀಪರ ಸಮಾದಿ ದಶ೯ನ ಮೂರನೆ ಬಾರಿ#

# ನಿನ್ನೆ ಸಂತ ಶಿಶುನಾಳ ಷರೀಪರ ಸಮಾದಿ ಸಂದಶಿ೯ಸಿದ ಸುದೀನ#   2016ರಲ್ಲಿ ಇಲ್ಲಿಗೆ ಹೋಗಿದ್ದೆ ಆಗ ಮನಸಲ್ಲಿ 50 kg ಡೈಮಂಡ್ ಸಕ್ಕರೆ ಅಪಿ೯ಸುವುದಾಗಿ ಒಂದು ತೀಮಾ೯ನ ಮಾಡಿದ್ದೆ ಅದರಂತೆ ನಿನ್ನೆ ಸಕ್ಕರೆ ಸಮಪಿ೯ಸುವ ಕೆಲಸ ಪೂರೈಸಿದೆ.   20O3ರಲ್ಲಿ ನಾನು ಮಾಜಿ ಸಂಸದ ಐ.ಎಮ್.ಜಯರಾಂ ಶೆಟ್ಟರ ಜೊತೆ ಅನೇಕ ಬಾರಿ ಕನಕಪುರ ರಸ್ತೆಯ ಹರಿಕೋಡೆಯವರ ಲಿಕ್ಕರ್ ಪ್ಯಾಕ್ಟರಿ ಕಛೇರಿಗೆ ಹೋಗುತ್ತಿದ್ದೆ, ರಾಜ್ಯದಲ್ಲಿ ಜಾಜ್೯ರ ಸಮತಾ ಪಕ್ಷದ ಜೊತೆ ಕೋಡೆಯವರು ಸ್ಥಾಪಿಸಿದ್ದ ಪ್ರಾದೇಶಿಕ ಪಕ್ಷ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರು.   ಆಗ ಹರಿಕೋಡೆಯವರು ನನಗೆ ಶಿಶುನಾಳ ಷರೀಪರ ಬಗ್ಗೆ ಪ್ರಕಟಿಸಿದ್ದ ಪುಸ್ತಕ ನೀಡಿದ್ದರು (ಮಲ್ಲಿಕಾಜು೯ನ ಸಿಂದಗಿ ಬರೆದದ್ದು), ಆಗಲೇ ಕೋಡೆಯವರು ಪರೀಪರ ಮೇಲೆ ತೆಗೆದ ಸಿನಿಮಾ ಕೂಡ ರಾಜ್ಯದಲ್ಲಿ ಪ್ರಸಿದ್ದವಾಗಿತ್ತು.    2004ರಲ್ಲಿ ಸವಣೂರಿಗೆ ಹೋಗುವವ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯಿಂದ ದಾರಿ ತಪ್ಪಿ ಹುಬ್ಬಳಿ ಹತ್ತಿರ ತಲುಪಿದಾಗ ಅಲ್ಲಿ ಸವಣೂರಿಗೆ ದಾರಿ ಕೇಳಿದಾಗ "ನೀವು ತುಂಬಾ ದೂರ ಬಂದಿದೀರಿ, ಇಲ್ಲೇ ಕುಂದಗೋಳ ಶಿಶುನಾಳದ ಮೇಲೆ ಸವಣೂರಿಗೆ ಹೋಗರಿ" ಅಂದಾಗ ನನಗೆ ಪುನಃ ಶಿಶುನಾಳರ ನೆನಪಾಯಿತು.   ಅವತ್ತು ಜುಲೈ 4 ಶಿಶುನಾಳ ಷರೀಪರ ಜನ್ಮದಿನ, ಸಾವಿರಾರು ಭಕ್ತರು, ಸಿನಿಮಾದವರು, ಕ್ಯಾಸೆಟ್ಗಳಲ್ಲಿ ಹಾಡುವವರು ನೂರಾರು ಮಂದಿ ಸ್ಪದೆ೯ಗೆ ಇಳಿದಂತೆ ಶಿಶುನಾಳರ ಹಾಡುಗಳನ್ನ ವಿವಿದ ರಾಗ, ಸಂಗೀತದಲ್ಲಿ ಗಾನ ಸ

# ಪಾರಿವಾಳಗಳ ವಿಸ್ಮಯ ಜಗತ್ತು#

# ಪಾರಿವಾಳದ ಜಗತ್ತು ಗಮನಿಸಿ #     ಶಾಲೆಗೆ ಹೋಗುವ ದಿನದಲ್ಲಿ ಪಾರಿವಾಳ ಸಾಕುವ ಹುಚ್ಚು ಈಗಿನ ಹಾಗೆ ಸಾಕು ಪಾರಿವಾಳ ಮಾರಾಟಕ್ಕೆ ನಮ್ಮ ಹಳ್ಳಿ ಕಡೆ ಸಿಗುತ್ತಿರಲಿಲ್ಲ ಹಾಗಾಗಿ ಕಾಡಿನ ಪಾರಿವಾಳ ಹಿಡಿಯಲು ನಾವೆಲ್ಲ ಗೆಳೆಯರು ಒದ್ದಾಡುತ್ತಿದ್ದು ನೆನಪಾಗಿ ನಗು ಬರುತ್ತೆ. ಇತ್ತೀಚಿಗೆ FB ಗೆಳೆಯರಾದ ರೇವಣ ಸಿದ್ದಯ್ಯ ಎಂಬುವವರು ಪಾರಿವಾಳಗಳು ಬರದಂತೆ ತಡೆಯುವುದು ಹೇಗೆ ಎಂಬ post ಹಾಕಿದ್ದರು ಅದಕ್ಕೆ ಬಂದ ಉತ್ತರ ನೋಡುತ್ತಿದ್ದೆ ಆದರೆ ಅವು ಯಾವುದೂ ವಾಸ್ತವ ಉಪ ಶಮನ ಆಗಿರಲಿಲ್ಲ ನನ್ನ ಉತ್ತರ ನೋಡಿ ತುಂಬಾ ಸಂತೋಷ ಆಯಿತು ಅಂತ ಉತ್ತರಿಸಿದರು.   1989 ರಲ್ಲಿ ರೈಸ್ ಮಿಲ್ ಕಟ್ಟಿದಾಗ ಅದರ ಗೋಡೆ 20 ಅಡಿ ಎತ್ತರ ಇತ್ತು ಅಲ್ಲಿ ಪಾರಿವಾಳಗಳು ನೂರಾರು ಗೂಡು ಮಾಡಿಕೊಂಡವು ಆದರೆ ಆ ಗೂಡಿಗೆ ಬೆಕ್ಕು, ಕಾಗೆ, ಹಾವು ತಲುಪದಂತ ಪ್ರದೇಶ ಆಗಿತ್ತು, ಬಾಯಿಗೆ ಎಟುಕದ ದ್ರಾಕ್ಷಿ ಹುಳಿ ಎಂಬಂತೆ ಬೆಕ್ಕುಗಳ ರೋದನ ಮತ್ತು ಪಾರಿವಾಳದ ಗೂಡು ತಲುಪಿ ಮೊಟ್ಟೆ ತಿನ್ನುವ ಸಾಹಸದಿಂದ ಹಾವುಗಳು ಕಟ್ಟಡದ ಸುತ್ತು ಸುಳಿಯುತ್ತಿದ್ದವು.   2018 ರಲ್ಲಿ ರೈಸ್ ಮಿಲ್ ಕಟ್ಟಡ ತೆಗೆದು ಹೊಸ ಲಾಡ್ಜ ಕಟ್ಟಲು ಯೋಜನೆ ಮಾಡಿ ಕಟ್ಟಡ ತೆಗೆಯುವ ಕೆಲಸ ಪ್ರಾರಂಬಿಸಿದಾಗ ಪಾರಿವಾಳಗಳು 30 ವಷ೯ದಲ್ಲಿ ನಿಮಿ೯ಸಿಕೊಂಡ ಗೂಡು ಸುಮಾರು 200 ಅಡಿ ಇತ್ತು, ಆದರಲ್ಲಿ ಅವುಗಳ ಮರಿಗಳಿಗಾಗಿ ಮಾಡಿಕೊಂಡ ಬೆಚ್ಚನೆ ತಡಿಗಳು ಕೇಳಿದರೆ ಗಾಭರಿ ಆದೀತು, ಹಾವಿನ ಪೊರೆ, ಬೈಂಡಿOಗ್ ತಂತಿಗಳು, 2006ರ

#ಸಾಗರ ರೈಲು ನಿಲ್ದಾಣ ಮರು ನಾಮಕರಣ ವಿಳOಬ#

#ಶಿವಮೊಗ್ಗ ಜಿಲ್ಲಾ ಸಂಸದರಿಗೆ ಒಂದು ಮನವಿ.# ಇತ್ತೀಚಿಗೆ ತಾವು ಹೊಸನಗರ ತಾಲ್ಲೂಕಿನ ಅರಸಾಳು ರೈಲ್ ನಿಲ್ದಾಣಕ್ಕೆ ಶಂಕರ್ ನಾಗ್ ರು ಮಾಲ್ಗುಡಿ ಡೇಸ್ ಸಿರೀಯಲ್ ಶೂಟಿಂಗ್ ಮಾಡಿದ ನೆನಪಿಗಾಗಿ ಮಾಲ್ಗುಡಿ ರೈಲು ನಿಲ್ದಾಣವಾಗಿ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದೀರಿ ಸ್ವಾಗತ. ಅದಕ್ಕಿ೦ತ ಮೊದಲು ಅಥವ ಅದರ ಜೊತೆ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ ಆಗಿನ ಉಪ ಪ್ರದಾನ ಮಂತ್ರಿಯಾದ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರಿಂದ ಅನುಮೋದಿಸಲ್ಪಟ್ಟ ಡಾII ರಾಮ್ ಮನೋಹರ್ ಲೋಹಿಯಾ ರೈಲು ನಿಲ್ದಾಣ ಕಾಯ೯ಕ್ರಮ ಕೂಡ ನೆರವೇರಿಸಲು ಒತ್ತಾಯಿಸುತ್ತೇನೆ.   ಸಾಗರ ಜಂಬಗಾರು ರೈಲು ನಿಲ್ದಾಣದ ಹೆಸರನ್ನ ಹೆಸರಾಂತ ಸಮಾಜವಾದಿ ಡಾII ರಾಮ ಮನೋಹರ ಲೋಹಿಯಾ ರೈಲು ನಿಲ್ದಾಣ ಎಂದು ಮರು ನಾಮಕರಣಕ್ಕಾಗಿ 2000ನೇ ಇಸವಿಯಿ೦ದ ಪ್ರಯತ್ನಿಸುತ್ತಿದ್ದು ಇದಕ್ಕೆ ಆಗಿನ ಉಪ ಪ್ರದಾನಿ ಲಾಲ್ ಕೃಷ್ಣ ಅಡ್ವಾನಿಯವರಿಗೆ ಮಾಡಿದ ಮನವಿ ಕನಾ೯ಟಕ ಸಕಾ೯ರಕ್ಕೆ, ಅಲ್ಲಿಂದ ಶಿವಮೊಗ್ಗ ಜಿಲ್ಲಾ ಆಡಳಿತಕ್ಕೆ ಅಲ್ಲಿ೦ದ ಸಾಗರ ಸಾಗರ ಪುರಸಭೆಗೆ ಅನುಮೋದನೆಗೆ ಬಂದು ಅನುಮೋದನೆ ಪಡೆದು ಪುನಃ  ಉಪ ಪ್ರದಾನಿಗಳಿಂದ ಸಂಬಂದಪಟ್ಟ ಇಲಾಖೆಗೆ ಸಾಗರ ರೈಲು ನಿಲ್ದಾಣದ ಹಾಲಿ ಹೆಸರು ಬದಲಿಸಿ ಡಾII ರಾಮಮನೋಹರ ಲೋಹಿಯ ಎಂದು ಪುನರ್ ನಾಮಕರಣ ಮಾಡಬಹುದೆಂದು ಸಂಬಂದಪಟ್ಟ ಇಲಾಖೆಗೆ ಅನುಮತಿ ನೀಡಿ 16 ವಷ೯ ಆದರೂ ರೈಲ್ವೆ ಇಲಾಖೆ ಮರು ನಾಮಕರಣ ಮಾಡಿರುವುದಿಲ್ಲ ಎಂದು ನಿಮ್ಮ ಗಮನಕ್ಕೆ ತರುತ್ತಾ, ತಕ್ಷಣ ಅರಸಾಳು ರೈಲು