# ಶಿವಮೊಗ್ಗ ಜಿಲ್ಲೆಯ ಮಹಿಳೆ ಹೊನ್ನೆ ಮರಡು ಜಲ ಸಾಹಸ ಕೇಂದ್ರದ ಶ್ರೀಮತಿ ನೋಮಿತೋ ಕಾಮದಾರ್ ಗೆ ರಾಷ್ಟ್ರಿಯ ಮಹಿಳಾ ಪುರಸ್ಕಾರ ಸಿಕ್ಕಿರುವುದು ನಮ್ಮ ಜಿಲ್ಲೆಗೊಂದು ಹಿರಿಮೆ #
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್ ಪಾಲ್ಸ್ ಸಮೀಪದ ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರಿನ ಹೊನ್ನೆ ಮರಡು ಎ೦ಬಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ EXPLORE INDIA ಎಂಬ ಕಾಯ೯ಕ್ರಮದಲ್ಲಿ ಪ್ರಾರಂಭವಾದ ಈ ಪಶ್ಚಿಮ ಘಟ್ಟದ ಸಾಹಸ ತರಬೇತಿ, ಪರಿಸರ ಪಾಠಶಾಲೆ ಇವತ್ತು ದೇಶ ವಿದೇಶದಲ್ಲಿ ಪ್ರಖ್ಯಾತಗೊಂಡಿದೆ.
ಹೊನ್ನೆ ಮರಡು ಸ್ವಾಮಿ ಮತ್ತು ಅವರ ಪತ್ನಿ ನೋಮಿತೊ ಕಾಮದಾರ್ ತಮ್ಮ ಅದ೯ ಆಯುಸ್ಸು ಇಲ್ಲಿ ಸವೆಸಿದ್ದಾರೆ, ಇಲ್ಲಿನ
ಸಂಸ್ಥೆ ಒಂದು ಹಂತಕ್ಕೆ ತರಲು ಅನೇಕ ರೀತಿ ಹೆಣಗಿದ್ದಾರೆ, ಒಂದು ಕಾಲದ ಇವರ ಸಹೋದ್ಯೋಗಿಗಳೆ ಇವರಿಗೆ ಈಗ ಶತೃಗಳಾಗಿದ್ದಾರೆ, ಕೆಲವರಿಗೆ ವಿನಂತಿಸಿದೆ ನಿಮ್ಮ ಕಹಿ ಘಟನೆ ಮರೆತುಬಿಡಿ, ತಪ್ಪಿದ್ದರೆ ಕ್ಷಮಿಸಿ ಬಿಡಿ ಅಂತಲೂ.
ಮೊನ್ನೆ ಮಹಿಳಾ ದಿನಾಚರಣೆಯoದು ಕೇಂದ್ರ ಸಕಾ೯ರ ಶ್ರೀಮತಿ ನೋಮಿತೊ ಕಾಮದಾರ್ ಗೆ ರಾಷ್ಟ್ರೀಯ ಮಹಿಳಾ ಪುರಸ್ಕಾರ ನೀಡಿದೆ, ರಾಷ್ಟ್ರಪತಿ ಶ್ರೀ ಕೊವಿಂದರವರು ಪ್ರಶಸ್ತಿ ನೀಡಿದರು.
ಶ್ರೀಮತಿ ನೋಮಿತೊ ಪಶ್ಚಿಮ ಘಟ್ಟದ ಪರಿಸರದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಸಾಹಸಿ ಮಹಿಳೆ, 5 - 6 ವಷ೯ದ ಹಿಂದೆ ನಮ್ಮಲ್ಲಿ ಬಂದವರು ನಮ್ಮ ಕಾಟೇಜಿನ ಹೊರ ಅಂಗಣದಲ್ಲಿ ಚಹ ಸ್ವೀಕರಿಸುವಾಗ ಸಾವಿರಾರು ಸಂಖ್ಯೆಯ ಗಿಳಿಗಳು ಒಂದಾಗಿ ಹಾರಿಹೋಗುವುದು ನೋಡಿ, ದಿನಾ ಗಮನಿಸಿ ಇವು ಪ್ರತಿನಿತ್ಯ ಬೆಳಿಗ್ಗೆ ಸಂಜೆ ಇದೇ ಮಾಗ೯ದಲ್ಲಿ ನಿಗದಿತ ಸಮಯದಲ್ಲೇ ಹಾರಿ ಹೋಗುತ್ತೆ ಅಂದಿದ್ದರು ನಂತರ ನಾನು ನಿತ್ಯ ಗಮನಿಸಿದೆ ಬೆಳಿಗ್ಗೆ ಸೂಯೋ೯ದಯದ ನಂತರ ಮತ್ತು ಸಂಜೆ ಸೂಯಾ೯ಸ್ತದ ಸಮಯದಲ್ಲಿ ಸಾವಿರಾರು ಗಿಳಿಗಳು ಹಾರಿ ಹೋಗಿ ಬರುತ್ತದೆ, ಇದು ಸೆಪ್ಟೆಂಬರ್ ನಿಂದ ಜನವರಿ ತನಕ ಹೆಚ್ಚು ಇರುತ್ತದೆ ನಂತರದ ತಿಂಗಳಲ್ಲಿ ಗಿಳಿಗಳು ಹಾರಾಡುತ್ತವಾದರೂ ಸಂಖ್ಯೆ ಕಡಿಮೆ ಹೀಗೆ ಇವರಿಂದ ನಮ್ಮ ಪರಿಸರದ ಪಾಠ ಕಲಿತೆ.
ವಷ೯ ಪೂತಿ೯ ಪರಿಸರ, ಸಾಹಸಗಳ ಕಾಯ೯ಕ್ರಮ ನಡೆಸುವ ಇವರಿಗೆ ರಾಷ್ಟ್ರೀಯ ಪುರಸ್ಕಾರದ ಗರಿ ಸಿಕ್ಕಿರುವುದು ಶಿವಮೊಗ್ಗ ಜಿಲ್ಲೆಗೆ ಒಂದು ಹಿರಿಮೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment