Skip to main content

#ಸಾಗರ ರೈಲು ನಿಲ್ದಾಣ ಮರು ನಾಮಕರಣ ವಿಳOಬ#

#ಶಿವಮೊಗ್ಗ ಜಿಲ್ಲಾ ಸಂಸದರಿಗೆ ಒಂದು ಮನವಿ.#

ಇತ್ತೀಚಿಗೆ ತಾವು ಹೊಸನಗರ ತಾಲ್ಲೂಕಿನ ಅರಸಾಳು ರೈಲ್ ನಿಲ್ದಾಣಕ್ಕೆ ಶಂಕರ್ ನಾಗ್ ರು ಮಾಲ್ಗುಡಿ ಡೇಸ್ ಸಿರೀಯಲ್ ಶೂಟಿಂಗ್ ಮಾಡಿದ ನೆನಪಿಗಾಗಿ ಮಾಲ್ಗುಡಿ ರೈಲು ನಿಲ್ದಾಣವಾಗಿ ಮರುನಾಮಕರಣ ಮಾಡುವುದಾಗಿ ತಿಳಿಸಿದ್ದೀರಿ ಸ್ವಾಗತ.
ಅದಕ್ಕಿ೦ತ ಮೊದಲು ಅಥವ ಅದರ ಜೊತೆ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ ಆಗಿನ ಉಪ ಪ್ರದಾನ ಮಂತ್ರಿಯಾದ ಶ್ರೀ ಲಾಲ್ ಕೃಷ್ಣ ಅಡ್ವಾನಿಯವರಿಂದ ಅನುಮೋದಿಸಲ್ಪಟ್ಟ ಡಾII ರಾಮ್ ಮನೋಹರ್ ಲೋಹಿಯಾ ರೈಲು ನಿಲ್ದಾಣ ಕಾಯ೯ಕ್ರಮ ಕೂಡ ನೆರವೇರಿಸಲು ಒತ್ತಾಯಿಸುತ್ತೇನೆ.
  ಸಾಗರ ಜಂಬಗಾರು ರೈಲು ನಿಲ್ದಾಣದ ಹೆಸರನ್ನ ಹೆಸರಾಂತ ಸಮಾಜವಾದಿ ಡಾII ರಾಮ ಮನೋಹರ ಲೋಹಿಯಾ ರೈಲು ನಿಲ್ದಾಣ ಎಂದು ಮರು ನಾಮಕರಣಕ್ಕಾಗಿ 2000ನೇ ಇಸವಿಯಿ೦ದ ಪ್ರಯತ್ನಿಸುತ್ತಿದ್ದು ಇದಕ್ಕೆ ಆಗಿನ ಉಪ ಪ್ರದಾನಿ ಲಾಲ್ ಕೃಷ್ಣ ಅಡ್ವಾನಿಯವರಿಗೆ ಮಾಡಿದ ಮನವಿ ಕನಾ೯ಟಕ ಸಕಾ೯ರಕ್ಕೆ, ಅಲ್ಲಿಂದ ಶಿವಮೊಗ್ಗ ಜಿಲ್ಲಾ ಆಡಳಿತಕ್ಕೆ ಅಲ್ಲಿ೦ದ ಸಾಗರ ಸಾಗರ ಪುರಸಭೆಗೆ ಅನುಮೋದನೆಗೆ ಬಂದು ಅನುಮೋದನೆ ಪಡೆದು ಪುನಃ  ಉಪ ಪ್ರದಾನಿಗಳಿಂದ ಸಂಬಂದಪಟ್ಟ ಇಲಾಖೆಗೆ ಸಾಗರ ರೈಲು ನಿಲ್ದಾಣದ ಹಾಲಿ ಹೆಸರು ಬದಲಿಸಿ ಡಾII ರಾಮಮನೋಹರ ಲೋಹಿಯ ಎಂದು ಪುನರ್ ನಾಮಕರಣ ಮಾಡಬಹುದೆಂದು ಸಂಬಂದಪಟ್ಟ ಇಲಾಖೆಗೆ ಅನುಮತಿ ನೀಡಿ 16 ವಷ೯ ಆದರೂ ರೈಲ್ವೆ ಇಲಾಖೆ ಮರು ನಾಮಕರಣ ಮಾಡಿರುವುದಿಲ್ಲ ಎಂದು ನಿಮ್ಮ ಗಮನಕ್ಕೆ ತರುತ್ತಾ, ತಕ್ಷಣ ಅರಸಾಳು ರೈಲು ನಿಲ್ದಾಣದ ಮರು ನಾಮಕರಣದ ಜೊತೆ ಸಾಗರ ಜOಬಗಾರ್ ಎಂಬ ಸಾಗರ ರೈಲು ನಿಲ್ದಾಣವನ್ನ ಎಲ್ಲಾ ಅನುಮತಿ ಪಡೆದಿರುವ ಡಾII ರಾಮ ಮನೋಹರ್ ಲೋಹಿಯಾ ಎಂದು ಪುನರ್ ನಾಮಕರಣ ಮಾಡಬೇಕೆಂದು ಮನವಿ ಮಾಡುತ್ತೇನೆ.
  ಈ ಹೆಸರು ಇಡಬೇಕೆಂದು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪಾ, ಸಾಹಿತಿ ದೀ.ಕೋಣಂದೂರು ವೆಂಕಪ್ಪ ಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಆಗಿನ ರಾಜ್ಯಸಭಾ ಸದಸ್ಯ ಜವರೇಗೌಡರು, ಆಗಿನ ಕೇಂದ್ರ ಮಂತ್ರಿ ಜಾಜ್೯ ಪನಾ೯೦ಡಿಸ್, ಶ್ರೀನಿವಾಸ ಪ್ರಸಾದ್, ನಿತೀಶ್ ಕುಮಾರ್ ಕೇಂದ್ರ ಸಕಾ೯ರವನ್ನ ಒತ್ತಾಯಿಸಿದ್ದರು ಕಾರಣ 1950ರ ದಶಕದ ಪ್ರಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಪ್ರಾರಂಭವಾದ ಗೇಣಿ ರೈತರ ಹೋರಾಟ ಕಾಗೋಡು ಹೋರಾಟಕ್ಕೆ ಬೆಂಬಲಿಸಲು ಬಂದ ಲೋಹಿಯರನ್ನ ಅವರು ತಂಗಿದ್ದ ಸಾಗರ ರೈಲು ನಿಲ್ದಾಣದ ವಿಶ್ರಾಂತಿ ಕೋಣೆಯಲ್ಲಿ ಬಂದಿಸುತ್ತಾರೆ, ಇದು ದೊಡ್ಡ ಸುದ್ದಿ ಆಗುತ್ತದೆ ರಷ್ಯಾದ ರೇಡಿಯೋ ಮಾಸ್ಕೋದಲ್ಲೂ ಪ್ರಮುಖ ಸುದ್ದಿ ಆಗಿ ಬಿತ್ತರ ಆಗುತ್ತೆ, ಈ ಚಳವಳಿಯ ಮೂಸೆಯಲ್ಲಿ ಸಮಾಜವಾದಿ ಪಕ್ಷದಿಂದ ಶಾಂತವೇರಿ ಗೋಪಾಲಗೌಡರು ಸಾಗರದಿ೦ದ ಮೊದಲ ಶಾಸಕರಾಗಿ ಆಯ್ಕೆ ಆಗುತ್ತಾರೆ, ಕಾಗೋಡು ಚಳವಳಿ ದೇಶದ ಪ್ರಮುಖ ಭೂ ಹೋರಾಟ ಎಂದು ಇತಿಹಾಸದಲ್ಲಿ ದಾಖಲಾಯಿತು, ಜೆ.ಪಿಯವರು ಬರುತ್ತಾರೆ ಈ ಎಲ್ಲಾ ಕಾರಣದಿಂದ ಜಾಜ್೯, ನಿತೀಶ್ ಮತ್ತು ಅಡ್ವಾನಿಯವರು ಕಾಳಜಿ ವಹಿಸುತ್ತಾರೆ.
ಇದರ ನೇತೃತ್ವ ನಾನು ಮತ್ತು ಕಲ್ಲೂರು ಮೇಘರಾಜ್ ಅನೇಕ ಸಮಾನ ಮನಸ್ಕರ ಸಹಯೋಗದಿಂದ ನಿವ೯ಹಿಸಿದ್ದೆವು.
ಆಗ ಸಾಗರ ರೈಲು ನಿಲ್ದಾಣದ ಸಮೀಪದ ಜೋಗ ರಸ್ತೆಯ ವೃತ್ತದಲ್ಲಿ ಡಾ|| ರಾಮಮನೋಹರ್ ಲೋಹಿಯ ರೈಲು ನಿಲ್ದಾಣ ಎಂಬ ನಾಮ ಫಲಕವನ್ನ ವಿದಾನ ಪರಿಷತ್ ಸದಸ್ಯೆ ಶ್ರೀಮತಿ ಪ್ರಪುಲ್ಲಾ ಮದುಕರ್ ಅನಾವರಣ ಮಾಡಿದ್ದರು ನಮ್ಮೆಲ್ಲರ ಜೊತೆ ಸಾಹಿತಿ ನಾ.ಡಿಸೋಜ, ಬಿ.ಆರ್.ಜಯ೦ತ್, ಜಿ.ಆರ್.ಜಿ.ನಗರ್, ರೈತ ಸಂಘದ ಅನೇಕ ಪ್ರಮುಖರು ಇದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...