Skip to main content

#ಮಾಲ್ಗುಡಿ ರೈಲು ನಿಲ್ದಾಣ #

# ಅರಸಾಳು ರೈಲು ನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ #
ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿತ್ತು, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ.
  ರಿಪ್ಪನ್ ಪೇಟೆ ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಆಗಿತ್ತು.
  ಇದೇ ಸಂದಭ೯ದಲ್ಲಿ ವೈಸ್ ರಾಯ್ ಲಾಡ್೯ ರಿಪ್ಪನ್ ಈ ಮಾಗ೯ದಲ್ಲಿ ಬಂದಾಗ ಈ ಭಾಗದ ಪ್ರಮುಖರೆಲ್ಲ  ಸೇರಿ ಸನ್ಮಾನಿಸಿ ಅವರ ಬೇಟಿಯ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿಸುತ್ತಾರೆ, ಇದರಿಂದ ಸಂಪ್ರೀತರಾದ ವೈಸ್ ರಾಯರಿಗೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ ಅದಕ್ಕೆ ಸಕಾರಣವಾಗಿ ರೈಲು ಮಾಗ೯ದಿಂದ ರೈಲು ನಿಲ್ದಾಣ ಆದರೆ ಬರುವ ಪ್ರಯಾಣಿಕರಿಂದ ಪ್ಲೇಗ್‌ ರೋಗ ಬಂದು ಹರಡುವುದರಿಂದ ಸಾವು ನೋವು ಉಂಟಾಗುತ್ತೆ ಎ೦ದು ವಿನಂತಿಸುತ್ತಾರೆ.
ಈ ರೀತಿ ಮೂಡ ನಂಬಿಕೆ ಲಾಡ್೯ ರಿಪ್ಪನ್ ಗೆ ಇರದಿದ್ದರು ಜನರ ಪ್ರೀತಿಗಾಗಿ ರೈಲು ಮಾಗ೯ ಅರಸಾಳಿನಿಂದಲೇ ಕೆಂಚನಾಲಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.
  ಅರಸಾಳು ಈಗಲೂ ಮೀಸಲು ಅರಣ್ಯದ ಮದ್ಯ ಇದೆ, 1970ರ ದಶಕದಲ್ಲಿ ಖೆಡ್ಡಮಾಡಿ ಪುಂಡು ಆನೆ ಹಿಡಿದಿದ್ದರು, ಬ್ರಿಟಿಷರು ನಿಮಿ೯ಸಿರುವು ಬೃಹತ್ ಸಾಗುವಾನಿ ಪ್ಲಾಂಟೇಶನ್ ಇದೆ, ಅರಣ್ಯ ಅಧಿಕಾರಿಗಳ ಬಿಡದಿ, ಕಚೇರಿಗಳಿದೆ, ಚಚ್೯ ಇದೆ. ಈಗ ಅರಸಾಳು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ ಮತ್ತು ಈ ಮಾಗ೯ದ ಪ್ರಮುಖ ಊರಾಗಿದೆ.
  ಈ ಊರನ್ನ ಕನ್ನಡದ ಖ್ಯಾತ ನಟ, ನಿದೇ೯ಶಕ ಶಂಕರ್ ನಾಗ್ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಕನ್ನಡಿಗ R.K.ನಾರಾಯಣ್ ರ ಮಾಲ್ಗುಡಿ ಡೇಸ್ ಎಂಬ ಕಥೆಯನ್ನ ದೂರದಶ೯ನಕ್ಕೆ ದಾರಾವಾಹಿ ಮಾಡಿದಾಗ ಚಿತ್ರಿಕರಣಕ್ಕೆ ಬಳಸಿಕೊಂಡಿದ್ದರು.
ಕನ್ನಡದ ನಟ ಸಾವ೯ ಬೌಮ ಡಾ.ರಾಜ್ ಕುಮಾರರ ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರಿಕರಣ ಮಾಡಿದ್ದರು.
  ನಂತರ ಮೀಟರ್ ಗೇಜ್ ರದ್ದು ಮಾಡುವ ಪೂವ೯ದಲ್ಲಿ ಅರಸಾಳು ರೈಲು ನಿಲ್ದಾಣವನ್ನ ರದ್ದು ಮಾಡಿದ್ದರು, ಬ್ರಾಡ್ ಗೇಜ್ ಪರಿವತ೯ನೆಗೆ ರೈಲ್ವೇ ಇಲಾಖೆ ಈ ಮಾಗ೯ ನಷ್ಟ ಅಂತ ರೈಲು ಮಾಗ೯ವನ್ನ ರದ್ದು ಮಾಡಿತ್ತು, ನಂತರ ಜನರ ಹೋರಾಟ ಒತ್ತಾಯಗಳಿಗೂ ರೈಲ್ವೇ ಇಲಾಖೆ ಮಣಿಯಲಿಲ್ಲ ಆಗ ಮುಖ್ಯಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯವರೆ ಆದ ಯಡೂರಪ್ಪ ಕೆ-ರೈಡ್ ಯೋಜನೆಯಲ್ಲಿ ರಾಜ್ಯ ಸಕಾ೯ರದ ಸಹಭಾಗಿತ್ವದಲ್ಲಿ  ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮಾಗ೯ ನಿಮಿ೯ಸಲು ಕಾರಣಕತ೯ರಾದರು.
ಈಗ ಅವರ ಮಗ ರಾಘವೇಂದ್ರ ಸಂಸದರಾಗಿ ಎಲ್ಲಾ ರೈಲು ನಿಲ್ದಾಣಗಳ ಮೇಲ್ದಜೆ೯ಗೇರಿಸುತ್ತಿದ್ದು ಅರಸಾಳು ರೈಲು ನಿಲ್ದಾಣ ಕೂಡ ನವೀಕರಣಗೊಳಿಸಿ ಮಾಲ್ಗುಡಿ ಡೇಸ್ ಸ್ಮರಣಾಥ೯ ಅರಸಾಳು ನಿಲ್ದಾಣ "ಮಾಲ್ಗುಡಿ ಅರಸಾಳು" ಎ೦ದು ಪುನರ್ ನಾಮಕರಣ ಆಗಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...